– ಐವರು ಕೋವಿಡ್ ರೋಗಿಗಳ ಮರಣ
ರಾಯಪುರ: ಆಸ್ಪತ್ರೆಯೊಂದರಲ್ಲಿ ಬೆಂಕಿ ಅನಾಹುತ ಸಂಭವಿಸಿದ್ದು ಐವರು ಕೋವಿಡ್ ರೋಗಿಗಳು ಮೃತಟ್ಟಿರುವ ಘಟನೆ ಶನಿವಾರ ಛತ್ತೀಸ್ಗಢದ ರಾಯಪುರದಲ್ಲಿ ನಡೆದಿದೆ. ಸದ್ಯ ಘಟನೆ ವೇಳೆ ಮೃತಪಟ್ಟ ಕುಟುಂಬಸ್ಥರಿಗೆ ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಾಗೆಲ್ 4 ಲಕ್ಷ ರೂ. ಹಣವನ್ನು ಪರಿಹಾರ ಘೋಷಿಸಿದ್ದಾರೆ.
ರಾಜಧಾನಿ ರಾಯಪುರದ ಆಸ್ಪತ್ರೆಯಲ್ಲಿ ನಿನ್ನೆ ಸಂಜೆ 5 ಗಂಟೆಗೆ ಮೊದಲನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ಆಸ್ಪತ್ರೆಯಲ್ಲಿ 34 ಮಂದಿ ರೋಗಿಗಳು ದಾಖಲಾಗಿದ್ದರು ಹಾಗೂ 9 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
Advertisement
Advertisement
ಘಟನೆ ವೇಳೆ ರೋಗಿಗಳನ್ನು ಬೇರೆ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಯಿತು. ಆದರೆ ಬೆಂಕಿ ಅವಘಡದಿಂದ 5 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಲ್ಲದೆ ಬೆಂಕಿ ನಂದಿಸಲು ಸುಮಾರು 2 ಗಂಟೆಗಳ ಸಮಯ ಬೇಕಾಯಿತು. ಇದೀಗ ಈ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ತರ್ಕೆಶ್ವರ್ ಪಟೇಲ್ ತಿಳಿಸಿದ್ದಾರೆ.
Advertisement
ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ, ರಾಯ್ಪುರದ ಆಸ್ಪತ್ರೆಯ ಐಸಿಯುವಿನಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಬಹಳ ದುಃಖಕರವಾಗ ಸಂಗತಿ. ತಮ್ಮ ಪ್ರೀತಿ ಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ನನ್ನ ಸಂತಾಪ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ದುಃಖಿತ ಕುಟುಂಬಗಳಿಗೆ ಎಲ್ಲಾ ರೀತಿಯ ನೆರೆವು ನೀಡಬೇಕೆಂದು ಮನವಿ ಮಾಡಿಕೊಂಡಿದ್ದರು.
Advertisement
रायपुर में अस्पताल के ICU में आग लगने की ख़बर दुखद है।
अपने प्रियजनों को खोने वाले परिवारों को मेरी संवेदनाएँ।
राज्य सरकार से अपील है कि शोकग्रस्त परिवारों को इस कठिन समय में सभी सहायता दी जायें।
— Rahul Gandhi (@RahulGandhi) April 18, 2021