– ತಾಯಿ ಆಸ್ಪತ್ರೆ ವೆಚ್ಚಕ್ಕಾಗಿ ಬ್ಯಾಂಕ್ ಖಾತೆಗೆ ಹಣ ಹಾಕಲು ಹೊರಟಿದ್ದ
ಬೆಂಗಳೂರು: ಅನಾರೋಗ್ಯದಿಂದ ಆಸ್ಪತ್ರೆ ಸೇರಿದ್ದ ತಾಯಿಯ ವೈದ್ಯಕೀಯ ನೆರವಿಗಾಗಿ ಬ್ಯಾಂಕ್ ಖಾತೆಗೆ ಹಣ ಹಾಕಲು ಹೋಗುತ್ತಿದ್ದ ಯುವಕನನ್ನು ಗುರಿಯಾಗಿಸಿಕೊಂಡು ಬಂದು, ಹಣ ದರೋಡೆ ಮಾಡಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
Advertisement
ಭಾರತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅ.17 ರಂದು ಈ ಘಟನೆ ನಡೆದಿದೆ. ಪತ್ರಾಸ್ ಗುರಿಯಾ ಹಣ ಕಳೆದುಕೊಂಡ ಯುವಕ. ಚಾಕು ತೋರಿಸಿ ಈತನಿಂದ 27 ಸಾವಿರ ರೂ. ಹಣ ದರೋಡೆ ಮಾಡಲಾಗಿದೆ.
Advertisement
Advertisement
ಅಸ್ಸಾಂ ಮೂಲದ ಪತ್ರಾಸ್ ಗುರಿಯಾ, 2012ರಲ್ಲಿ ಬೆಂಗಳೂರಿಗೆ ಬಂದು ಹೊಟ್ಟೆ ಪಾಡಿಗಾಗಿ ಸೆಕ್ಯೂರಿಟಿಯಾಗಿ ಕೆಲಸ ಮಾಡುತ್ತಿದ್ದ. ಅವಿವಾಹಿತನಾಗಿದ್ದ ಈತ ಕೋಲ್ಸ್ ಪಾರ್ಕ್ ಬಳಿಯ ಅಪಾರ್ಟ್ ಮೆಂಟ್ ವೊಂದರಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದ. ಅಸ್ಸಾಂನಲ್ಲಿರುವ ಈತನ ತಾಯಿ ಅನಾರೋಗ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ವೈದ್ಯಕೀಯ ಚಿಕಿತ್ಸೆಗೆ ತಗುಲುವ ಹಣ ಹೊಂದಿಸುತ್ತಿದ್ದ ಈತ ಹಲವು ತಿಂಗಳಿಂದ ಕೂಡಿಟ್ಟ 27 ಸಾವಿರ ಹಣ ಜೇಬಿನಲ್ಲಿಟ್ಟುಕೊಂಡು ಇದೇ ತಿಂಗಳು ತಾಯಿಯ ಬ್ಯಾಂಕ್ ಖಾತೆ ಹಣ ಹಾಕಲು ನಿರ್ಧರಿಸಿದ್ದ.
Advertisement
ಬ್ಯಾಂಕಿಗೆ ಹೋಗಲು ಅಪಾರ್ಟ್ ಮೆಂಟ್ ಮಾಲೀಕರೊಬ್ಬರ ಸೂಟ್ಕರ್ ಪಡೆದಿದ್ದಾರೆ. 27 ಸಾವಿರ ರೂ. ಹಣವನ್ನು ಪ್ಯಾಂಟ್ ಜೇಬಿನಲ್ಲಿಟ್ಟುಕೊಂಡು ಬ್ಯಾಂಕ್ ನತ್ತ ಪ್ರಯಾಣ ಬೆಳೆಸಿದ್ದ. ಯುವಕನ ಬಳಿ ಹಣ ಇರುವುದನ್ನು ಅರಿತ ದರೋಡೆಕೋರರು ಬೈಕ್ ಹಿಂಬಾಲಿಸಿದ್ದಾರೆ. ಬಳಿಕ ಪ್ರೇಜರ್ ಟೌನ್ ನ ಐಟಿಸಿ ಬಳಿ ಪ್ರತಾಸ್ ಗುರಿಯಾ ಬೈಕ್ನನ್ನು ಅಡ್ಡಗಟ್ಟಿ ಚಾಕು ತೋರಿಸಿ ಜೇಬಿನಲಿದ್ದ 27 ಸಾವಿರ ಹಣ ಡರೋಡೆ ಮಾಡಿ ಪರಾರಿಯಾಗಿದ್ದಾರೆ. ಈ ಸಂಬಂಧ ಭಾರತಿ ನಗರ ಪೊಲೀಸ್ ಠಾಣೆಗೆ ಹೋಗಿ ನಡೆದ ವಿಷಯ ಹೇಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು ಕೃತ್ಯ ಸೆರೆಯಾಗಿರುವ ಸಿಸಿಟಿವಿ ದೃಶ್ಯಾವಳಿ ಆಧರಿಸಿ ದರೋಡೆಕೋರರ ಪತ್ತೆಗೆ ಶೋಧ ಕಾರ್ಯ ನಡೆಸಿದ್ದಾರೆ.