ವಾಷಿಂಗ್ಟನ್: 10 ವರ್ಷದ ಬಾಲಕ ಹಾಗೂ ಆತನ ಕುಟುಂಬ ಸ್ನೇಹಿತರೊಬ್ಬರು ಆಸ್ಪತ್ರೆ ಸಿಬ್ಬಂದಿಯ 80 ಕಾರುಗಳ ಮೇಲೆ ಬಿದ್ದಿದ್ದ ಹಿಮವನ್ನು ಸ್ವಚ್ಛಗೊಳಿಸುವ ಮೂಲಕ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಕೊರೊನಾ ಸಂಕಷ್ಟದ ಸಮಯದಲ್ಲಿ ಎಲ್ಲರಿಗೂ ಮನೆಯಲ್ಲಿಯೇ ಕೆಲಸ ಮಾಡುವ ಅವಕಾಶವಿತ್ತು. ಆದರೆ ಆಸ್ಪತ್ರೆಯಲ್ಲಿ ಕೆಲಸ ಮಾಡುವವರಿಗೆ ಮಾತ್ರ ಯಾವುದೇ ರೀತಿಯ ವರ್ಕ್ ಫ್ರಮ್ ಹೋಮ್ ಇರಲಿಲ್ಲ. ಹಾಗಾಗಿ ಅವರಿಗಾಗಿ ಏನಾದರೂ ಮಾಡಬೇಕೆಂದು ತೀರ್ಮಾನಿಸಿದ್ದರು.
Advertisement
Advertisement
ಫೆಬ್ರವರಿ 1 ರಂದು ಕ್ರಿಶ್ಚಿಯನ್ ಸ್ಟೋನ್(10) ಮತ್ತು ಅಬ್ಬೆ ಮೀಕರ್(29) ಎಂಬವರು ವೆಸ್ಟರ್ಲಿ ಆಸ್ಪತ್ರೆಯ ಪಾರ್ಕಿಂಗ್ ಪ್ರದೇಶಕ್ಕೆ ತಲುಪಿ ಆಸ್ಪತ್ರೆ ಸಿಬ್ಬಂದಿ ಕಾರುಗಳ ಮೇಲಿನ ಹಿಮವನ್ನು ಸ್ವಚ್ಛಗೊಳಿಸಿದ್ದಾರೆ.
Advertisement
ಕೊರೊನಾದಂತಹ ಸಂಕಷ್ಟದ ಸಮಯದಲ್ಲಿ ತಮಗಾಗಿ ನಿರಂತರವಾಗಿ ಕೆಲಸ ಮಾಡಿದ್ದ ಆಸ್ಪತ್ರೆ ಸಿಬ್ಬಂದಿಗಳಿಗೆ ಏನಾದರೂ ಒಳ್ಳೆಯ ಕೆಲಸ ಮಾಡಬೇಕೆಂದು ಭಾವಿಸಿದ್ದರು. ಆಸ್ಪತ್ರೆ ಸಿಬ್ಬಂದಿ ಕಾರನ್ನು ಸ್ಟಾರ್ಟ್ ಮಾಡಲು ಬಂದಾಗ ಕಾರುಗಳನ್ನು ಸ್ವಚ್ಛಗೊಳಿಸುವ ಮೂಲಕ ಸಹಾಯ ಮಾಡಿದ್ದಾರೆ.
Advertisement
ಪ್ರತಿ ದಿನ ಆಸ್ಪತ್ರೆಯ ಸಿಬ್ಬಂದಿ ಕೋವಿಡ್ ಸಾಂಕ್ರಾಮಿಕ ರೋಗದ ಜೊತೆ ಹೋರಾಡಿ ಮನೆಗೆ ಹಿಂದಿರುಗಲು ಹಿಮದಿಂದ ಕಷ್ಟ ಪಡುತ್ತಾರೆ. ಹಾಗಾಗಿ ಅವರ ಕಾರುಗಳ ಮೇಲಿನ ಹಿಮವನ್ನು ಸ್ವಚ್ಛಗೊಳಿಸುವ ಮೂಲಕ ನಾವು ಅವರಿಗೆ ಮನೆಗೆ ಹೋಗಲು ಸುಲಭವಾಗುವಂತೆ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಆದರೆ ಶಿಫ್ಟ್ ಮುಗಿಸಿಕೊಂಡು ಕಾರಿನ ಬಳಿ ಬಂದು ನೋಡಿದ ಅನೇಕ ಆರೋಗ್ಯ ಸಿಬ್ಬಂದಿ ಕಾರು ಸ್ವಚ್ಛಗೊಂಡಿರುವುದನ್ನು ಕಂಡು ಆಶ್ಚರ್ಯಗೊಂಡರು. ನಮ್ಮ ಈ ಪ್ರಯತ್ನಕ್ಕೆ ಆಸ್ಪತ್ರೆ ಸಿಬ್ಬಂದಿ ಧನ್ಯವಾದ ತಿಳಿಸಿದರು ಎಂದು ಸ್ಟೋನ್, ಮೇಕರ್ ಹೇಳಿದ್ದಾರೆ.