ಚಾಮರಾಜನಗರ: ಆಸ್ತಿ ವ್ಯಾಜ್ಯ ಹಿನ್ನೆಲೆ ತಂದೆ ಮಗನನ್ನೇ ಕೊಚ್ಚಿ ಕೊಲೆಗೈದ ಘಟನೆ ಗುಂಡ್ಲುಪೇಟೆ ತಾಲೂಕಿನ ಹೊನ್ನೆಗೌಡನಹುಂಡಿಯಲ್ಲಿ ನಡೆದಿದೆ.
ಹೊನ್ನೆಗೌಡನಹುಂಡಿಯ ಮಲ್ಲಿಕಾರ್ಜುನಪ್ಪ ಕೊಲೆಯಾದ ದುರ್ಧೈವಿ. ತಂದೆ ಮಹಾದೇವಪ್ಪ ಹಾಗೂ ಆತನ ಎರಡನೇ ಮಗ ಮಂತ್ರಪ್ಪ ಕೃತ್ಯ ಎಸೆಗಿದ ಆರೋಪಿಗಳು.
Advertisement
Advertisement
ಆಸ್ತಿ ವಿಚಾರಕ್ಕೆ ಮಹಾದೇವಪ್ಪ ಹಾಗೂ ಹಿರಿಯ ಮಲ್ಲಿಕಾರ್ಜುನಪ್ಪ ನಡುವೆ ಕಳೆದ ಎರಡು ವರ್ಷಗಳಿಂದ ಜಗಳ ನಡೆದಿತ್ತು. ಆದರೆ ಮಲ್ಲಿಕಾರ್ಜುನಪ್ಪ ಇಂದು ಬೆಳಗ್ಗೆ ಜಮೀನಿನ ಬಳಿ ಮರ ಕಡಿಯಲು ಹೋಗಿದ್ದ. ಈ ವೇಳೆ ಅಲ್ಲಿಗೆ ಬಂದ ಮಹಾದೇವಪ್ಪ ಮಗನ ಜೊತೆಗೆ ಗಲಾಟೆ ಮಾಡಿಕೊಂಡಿದ್ದಾನೆ. ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಏರಿದ ಪರಿಣಾಮ ಮಹಾದೇವಪ್ಪ ಮಗನ ಮೇಲೆ ಹಲ್ಲೆ ಮಾಡಿ ಕೊಚ್ಚಿ ಕೊಲೆಗೈದಿದ್ದಾನೆ. ಇದಕ್ಕೆ ಆತನ ಎರಡನೇ ಮಗ ಮಂತ್ರಪ್ಪ ಕೂಡ ಸಾಥ್ ನೀಡಿದ್ದ.
Advertisement
ಕೃತ್ಯದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು. ಈ ಕುರಿತು ಗ್ರಾಮಸ್ಥರು ಮಾಹಿತಿ ನೀಡುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಗುಂಡ್ಲುಪೇಟೆ ಠಾಣೆ ಪೊಲೀಸರು ಪರಿಶೀಲನೆ ನಡೆಸಿ, ಆರೋಪಿಗಳಿಗೆ ಬಲೆ ಬೀಸಿದ್ದರು. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.