– ರಹಾನೆಗೆ ಪಂದ್ಯಶ್ರೇಷ್ಠ ಗೌರವ
– ಸರಣಿ ಸಮಬಲಗೊಳಿಸಿದ ಭಾರತ
ಮೆಲ್ಬರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯವನ್ನು ಭಾರತ 8 ವಿಕೆಟ್ಗಳಿಂದ ಗೆದ್ದುಕೊಳ್ಳುವ ಮೂಲಕ 4 ಪಂದ್ಯಗಳ ಸರಣಿಯಲ್ಲಿ 1-1 ಸಮಬಲ ಸಾಧಿಸಿದೆ.
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ನಲ್ಲಿ 200 ರನ್ಗಳಿಗೆ ಆಲೌಟ್ ಆಯ್ತು. 70 ರನ್ಗಳ ಟಾರ್ಗೆಟ್ ಪಡೆದ ಭಾರತ 2 ವಿಕೆಟ್ ಕಳೆದುಕೊಂಡು ಗುರಿಯನ್ನು ತಲುಪಿತು.
Advertisement
Advertisement
ಶುಭಮನ್ ಗಿಲ್ ಔಟಾಗದೇ 35 ರನ್, ಅಜಿಂಕ್ಯ ರಹಾನೆ ಔಟಾಗದೇ 27 ರನ್ ಹೊಡೆದರು. ಭಾರತದ ಪರ ಸಿರಾಜ್ 3 ವಿಕೆಟ್, ಬುಮ್ರಾ, ಅಶ್ವಿನ್, ಜಡೇಜಾ ತಲಾ 2 ವಿಕೆಟ್ ಕಿತ್ತರು. ಉಮೇಶ್ ಯಾದವ್ 1 ವಿಕೆಟ್ ಕಿತ್ತರು. ಮೊದಲ ಇನ್ನಿಂಗ್ಸ್ನಲ್ಲಿ 112 ರನ್ ಸಿಡಿಸಿ ತಂಡವನ್ನು ಪಾರು ಮಾಡಿದ ನಾಯಕ ರಹಾನೆಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು.
Advertisement
What a win this is, absolutely amazing effort by the whole team. Couldn't be happier for the boys and specially Jinks who led the team to victory amazingly. Onwards and upwards from here ????????????
— Virat Kohli (@imVkohli) December 29, 2020
Advertisement
ಆಡಿಲೇಡ್ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್ಗಳಿಂದ ಸೋತಿತ್ತು. ಈಗ ಸಂಘಟಿತ ಬ್ಯಾಟಿಂಗ್ ಮತ್ತು ಬೌಲಿಂಗ್ ಪ್ರದರ್ಶನದಿಂದ ತವರು ನೆಲದಲ್ಲೇ ಆಸ್ಟ್ರೇಲಿಯಾಗೆ ತಿರುಗೇಟು ನೀಡಿದೆ. ಮೂರನೇ ಟೆಸ್ಟ್ ಪಂದ್ಯ ಜ.7 ರಿಂದ ಸಿಡ್ನಿಯಲ್ಲಿ ನಡೆಯಲಿದೆ.
The cover drive on the up! A stunning shot from Ajinkya Rahane and a pretty good snapshot of India's performance in the second Test.@hcltech | #AUSvIND pic.twitter.com/Kx5g3GE5T2
— cricket.com.au (@cricketcomau) December 29, 2020
ಸಂಕ್ಷಿಪ್ತ ಸ್ಕೋರ್
ಆಸ್ಟ್ರೇಲಿಯಾ ಮೊದಲ ಇನ್ನಿಂಗ್ಸ್ 195 ರನ್
ಭಾರತ ಮೊದಲನೇ ಇನ್ನಿಂಗ್ಸ್ 326
ಆಸ್ಟ್ರೇಲಿಯಾ ಎರಡನೇ ಇನ್ನಿಂಗ್ಸ್ 200 ರನ್
ಭಾರತ ಎರಡನೇ ಇನ್ನಿಂಗ್ಸ್ 2ವಿಕೆಟ್ ನಷ್ಟಕ್ಕೆ 70 ರನ್