ಅಬುಧಾಬಿ: ಐಪಿಎಲ್ 2020ರ ಆವೃತ್ತಿ ಆರಂಭಕ್ಕೆ ಕೆಲ ದಿನಗಳು ಬಾಕಿ ಇರುವ ಸಂದರ್ಭದಲ್ಲಿ ಆರ್ಸಿಬಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಬಳಿ ಸಹ ಆಟಗಾರ ಎಬಿ ಡಿವಿಲಿಯರ್ಸ್ ವಿಶೇಷ ಮನವಿ ಮಾಡಿದ್ದಾರೆ.
ಸೆ.19 ರಿಂದ ನ.10 ವರೆಗೂ ಐಪಿಎಲ್ 2020ರ ಪಂದ್ಯಗಳು ನಡೆಯಲಿದೆ. ಸೆ.21 ರಂದು ದುಬೈನಲ್ಲಿ ನಡೆಯಲಿರುವ ಪಂದ್ಯದಲ್ಲಿ ಹೈದರಾಬಾದ್ ತಂಡವನ್ನು ಆರ್ಸಿಬಿ ಎದುರಿಸಲಿದೆ. ಕಳೆದ ಎರಡು ಆವೃತ್ತಿಗಳಿಗೆ ಹೋಲಿಸಿದರೆ ಈ ಬಾರಿ ಆರ್ಸಿಬಿ ತಂಡ ಸಮತೋಲನದಿಂದ ಕೂಡಿದಂತೆ ಕಾಣಿಸುತ್ತಿದೆ.
Advertisement
Fast hands ✅
Quick movements ✅
Eyes on the ball ✅ @imVkohli, @ABdeVilliers17 & @parthiv9 showing us the true meaning of ‘safe as houses’. ????????????#PlayBold #IPL2020 #WeAreChallengers #Dream11IPL pic.twitter.com/QVSwJLgg9U
— Royal Challengers Bangalore (@RCBTweets) September 16, 2020
Advertisement
ಇತ್ತೀಚೆಗೆ ತಂಡದ ತರಬೇತಿಯ ವೇಳೆ ಈ ಬಾರಿ ಟೂರ್ನಿಯಲ್ಲಿ ತಮಗೆ ಬೌಲಿಂಗ್ ಮಾಡುವ ಅವಕಾಶ ನೀಡಬೇಕು. ನಾಯಕ ಕೊಹ್ಲಿ ಅಗತ್ಯ ಎನಿಸಿದರೇ 1-2 ಓವರ್ ಬೌಲಿಂಗ್ ಮಾಡಲು ಸಿದ್ಧ. ನಾನು ಉತ್ತಮ ಬೌಲರ್ ಅಲ್ಲದಿದ್ದರೂ, ಹೊಸ ವಿಚಾರಗಳನ್ನು ಕಲಿಯಲು ಇಷ್ಟಪಡುತ್ತೇನೆ ಎಂದು ಎಬಿಡಿ ನಗೆ ಬೀರಿದ್ದಾರೆ. ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಅಭಿಮಾನಿಗಳಿಂದ ಮಿಸ್ಟರ್ 360 ಎಂದು ಕರೆಯಿಸಿಕೊಳ್ಳುವ ಎಬಿಡಿ, ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದಲ್ಲಿ ಕೆಲ ಸಮಯ ವಿಕೆಟ್ ಕೀಪರ್ ಆಗಿಯೂ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಟೆಸ್ಟ್, ಏಕದಿನ ಕ್ರಿಕೆಟ್ ಪಂದ್ಯಗಳಲ್ಲಿ ಬೌಲಿಂಗ್ ಕೂಡ ಮಾಡಿದ್ದಾರೆ.
Advertisement
We’re all Aquaholics. ????
(1/2)#PlayBold #IPL2020 #WeAreChallengers #Dream11IPL pic.twitter.com/vHb2ETbk0y
— Royal Challengers Bangalore (@RCBTweets) September 16, 2020
Advertisement
ಇದುವರೆಗೂ ಎಬಿಡಿ ಟಿ20 ಮಾದರಿ ಕ್ರಿಕೆಟ್ ನಲ್ಲಿ ಮಾತ್ರ ಬೌಲಿಂಗ್ ಮಾಡಿಲ್ಲ. ಆದ್ದರಿಂದ ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಬೌಲಿಂಗ್ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ಇತ್ತ ಈ ಬಾರಿಯ ಟೂರ್ನಿಯಲ್ಲಿ ಪಾರ್ಥಿವ್ ಪಟೇಲ್ ಬದಲಿಗೆ ಎಬಿಡಿ ಅವರಿಗೆ ತಂಡದ ವಿಕೆಟ್ ಕೀಪಿಂಗ್ ಜವಾಬ್ದಾರಿ ವಹಿಸುವ ಸಾಧ್ಯತೆ ಇದೆ.
AB de Villiers talks about the team’s preparations for the Dream11 IPL, the new recruits joining this season, and he has a special message for the 12th Man Army.#PlayBold #IPL2020 #WeAreChallengers #Dream11IPL pic.twitter.com/llFYGpEzs7
— Royal Challengers Bangalore (@RCBTweets) September 16, 2020