– ಒಮ್ಮೆ 14 ಪಿಜ್ಜಾ ಡೆಲಿವರಿ
ಬ್ರಸೆಲ್ಸ್: ಸಾಮಾನ್ಯವಾಗಿ ಪಿಜ್ಜಾ ಆರ್ಡರ್ ಮಾಡಿದರೆ ಒಮ್ಮೆ ವಿಳಂಬವಾಗಿ ಬರುತ್ತದೆ. ಆದರೆ 65 ವರ್ಷದ ವೃದ್ಧರೊಬ್ಬರು ಆರ್ಡರ್ ಮಾಡದಿದ್ದರೂ ಸುಮಾರು ಒಂಬತ್ತು ವರ್ಷಗಳಿಂದ ಅವರ ಮನೆಗೆ ಪಿಜ್ಜಾ ಬರುತ್ತಿರುವ ಘಟನೆ ನಡೆದಿದೆ.
ಬೆಲ್ಜಿಯಂನ ಆಂಟ್ವರ್ಪ್ ನ 65 ವರ್ಷದ ಜೆನ್ ವ್ಯಾನ್ ಲ್ಯಾಂಡೆಘೇಮ್ ಮನೆಗೆ ಪಿಜ್ಜಾ ಬರುತ್ತಿದೆ. ಒಂಬತ್ತು ವರ್ಷಗಳಿಂದ ನಮ್ಮ ಮನೆಗೆ ಡೆಲಿವರಿ ಬಾಯ್ಗಳು ಪಿಜ್ಜಾ ಹಿಡಿದುಕೊಂಡು ಬರುತ್ತಿದ್ದಾರೆ. ಒಂಬತ್ತು ವರ್ಷಗಳ ಹಿಂದೆ ಮೊದಲ ಬಾರಿಗೆ ಡೋರ್ ಬೆಲ್ ಬಾರಿಸಿದರು. ಬಾಗಿಲು ತೆಗೆದು ನೋಡಿದಾಗ ಪಿಜ್ಜಾ ಡೆಲಿವರಿ ಬಾಯ್ ನಿಂತಿದ್ದನು. ಆಗ ನಾನು ಯಾವುದೇ ಪಿಜ್ಜಾವನ್ನು ಆರ್ಡರ್ ಮಾಡಿಲ್ಲ ಅಂತ ಹೇಳಿದೆ. ಆದರೂ ಅವರು ಕೊಟ್ಟರು. ಅಂದಿನಿಂದ ನಿರಂತರವಾಗಿ ಪಿಜ್ಜಾ ಡೆಲಿವರಿ ಬರುತ್ತಿದೆ ಎಂದು ಜೆನ್ ಹೇಳಿದ್ದಾರೆ.
Advertisement
Advertisement
ಸ್ಥಳೀಯ ಆಹಾರ ಮಳಿಗೆಯಿಂದ ರುಚಿ-ರುಚಿಯಾದ ಪಿಜ್ಜಾ ಬರುತ್ತಿದ್ದಾವೆ. ವಾರದ ದಿನದಂದು ಅಥವಾ ವಾರಾಂತ್ಯದಲ್ಲಿ ಪಿಜ್ಜಾ ಬರುತ್ತಿದೆ. ಅಲ್ಲದೇ ಒಂದೆರಡು ಬಾರಿ ರಾತ್ರಿ 2 ಗಂಟೆಗೂ ಪಿಜ್ಜಾ ಬಂದಿದೆ. ನಾನು ಒಮ್ಮೆಯೂ ಡೆಲಿವರಿ ಬಾಯ್ನನ್ನು ವಾಪಸ್ ಕಳುಹಿಸಲಿಲ್ಲ. ಎಲ್ಲವನ್ನು ಖರೀದಿಸುತ್ತಿದ್ದೆ. ಜನವರಿ 2019 ರಲ್ಲಿ ಒಮ್ಮೆಲೆ 14 ಪಿಜ್ಜಾಗಳು ಬಂದಿದ್ದವು. ಅನಿರೀಕ್ಷಿತವಾಗಿ ಬರುತ್ತಿದ್ದ ಪಿಜ್ಜಾದಿಂದ ತುಂಬಾ ಹಣ ಖರ್ಚಾಗಿದೆ. ಒಮ್ಮೆ 14 ಪಿಜ್ಜಾಗಳಿಗೆ ಸುಮಾರು 450 ಡಾಲರ್ (38 ಸಾವಿರ ರೂ.) ಅನ್ನು ನೀಡಿದ್ದೇನೆ. ಒಂದು ವೇಳೆ ನಾನು ಪಿಜ್ಜಾ ಖರೀದಿಸದಿದ್ದರೆ ತಂದ ಪಿಜ್ಜಾ ವ್ಯರ್ಥವಾಗಿ ಎಸೆಯಬೇಕಿತ್ತು. ಆದ್ದರಿಂದ ನಾನು ಪಿಜ್ಜಾ ಖರೀದಿಸುತ್ತಿದ್ದೆ ಎಂದಿದ್ದಾರೆ.
Advertisement
Advertisement
ಈಗ ನಾನು ಮಲಗಲು ಭಯಪಡುತ್ತೇನೆ. ಯಾಕೆಂದರೆ ರಸ್ತೆಯಲ್ಲಿ ಸ್ಕೂಟರ್ ನಲ್ಲಿ ಹೋಗುವಾಗ ಯಾರಾದರೂ ಮತ್ತೆ ಬಿಸಿ ಪಿಜ್ಜಾ ಕೊಡಲು ಬಂದು ಬಿಟ್ಟರೆ ಎಂದು ಆತಂಕವಾಗುತ್ತದೆ. ನಾನು ಪೊಲೀಸರನ್ನು ಸಹ ಸಂಪರ್ಕಿಸಿ ಈ ಬಗ್ಗೆ ಮಾತನಾಡಿದ್ದೆ. ಆದರೆ ಪೊಲೀಸರು ಕೂಡ ಯಾವುದೇ ಸಹಾಯ ಮಾಡಲಿಲ್ಲ ಎಂದು ಜೆನ್ ಹೇಳಿದರು.
ಜೆನ್ ಮಾತ್ರವಲ್ಲದೇ ಅವರ ನಿವಾಸದಿಂದ 15 ಮೈಲಿ ದೂರದಲ್ಲಿರುವ ಫ್ಲಾಂಡರ್ಸ್ ಪಟ್ಟಣದಲ್ಲಿ ವಾಸಿಸುವ ಅವರ ಸ್ನೇಹಿತರೊಬ್ಬರಿಗು ಇದೇ ರೀತಿ ಪಿಜ್ಜಾ ಬರುತ್ತಿಯಂತೆ. ಕೆಲವೊಮ್ಮೆ ನಮ್ಮಿಬ್ಬರಿಗೂ ಒಂದೇ ದಿನ ಪಿಜ್ಜಾ ಬಂದಿದ್ದವು. ಈ ಬಗ್ಗೆ ನಾವು ಚರ್ಚೆ ಕೂಡ ಮಾಡಿದ್ದೇವೆ ಎಂದು ಹೇಳಿದರು.