ನೆಲಮಂಗಲ: ಕರ್ಕಶ ಶಬ್ದವನ್ನುಂಟು ಮಾಡುವ ಮ್ಯೂಸಿಕ್ ಹಾರ್ನ್ ಮತ್ತು ಸೌಂಡ್ ಸಿಸ್ಟಮ್ ಹಾಕಿಕೊಂಡು ಓಡಾಡುವ ವಾಹನಗಳಿಗೆ ನೆಲಮಂಗಲ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ಬ್ರೇಕ್ ಹಾಕಿದ್ದಾರೆ.
Advertisement
ಬೆಂಗಳೂರು ಹೊರವಲಯ ನೆಲಮಂಗಲ ಗ್ರಾಮಾಂತರ ಭಾಗದ ಬಿಲ್ಲಿನ ಕೋಟೆ, ಬೂದಿಹಾಳ್ ಬಳಿ ಆಟೋ ಚಾಲಕರಿಗೆ ಎಚ್ಚರಿಕೆ ನೀಡಿ ಕರ್ಕಶ ಹಾರ್ನ್ ಹೊಂದಿದ್ದ ಆಟೋಗಳನ್ನು ವಶಕ್ಕೆ ಅಧಿಕಾರಿಗಳು ಪಡೆದಿದ್ದಾರೆ. ಅಪಘಾತಕ್ಕೆ ಹಾರ್ನ್ ಮತ್ತು ಸೌಂಡ್ ಕೂಡ ಕಾರಣ ಎಂದು ನೆಲಮಂಗಲ-ತುಮಕೂರು ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಬಾರಿ ಸರಕು ವಾಹನಗಳು, ಟೂರಿಸ್ಟ್ ಬಸ್ ಗಳು, ಆಟೋ ರಿಕ್ಷಾ, ಲಗೇಜ್ ವಾಹನಗಳ ಜೊತೆ ಪ್ರತಿನಿತ್ಯ ತುಮಕೂರು ಬೆಂಗಳೂರು ನಡುವೆ ಸಂಚರಿಸುವ ಕಾರುಗಳು ಬೈಕ್ ಗಳ ಸಂಖ್ಯೆ ಹೆಚ್ಚಾಗಿದ್ದು, ರಸ್ತೆ ಅಪಘಾತಗಳು ಅಧಿಕವಾಗುತ್ತಿದ್ದು, ಅತಿವೇಗದ ಚಾಲನೆಯಿಂದ ಅಪಘಾತ ಉಂಟಾಗುತ್ತಿರುವುದು ಸಂಶೋಧನೆ ಮೂಲಕ ಕಂಡು ಬಂದಿದೆ.
Advertisement
Advertisement
ಹೀಗಾಗಿ ಕರ್ಕಶ ಶಬ್ದವನ್ನು ಉಂಟುಮಾಡುವ ಹಾರ್ನ್, ಮ್ಯೂಸಿಕ್ ಹಾರ್ನ್, ಸೌಂಡ್ ಸಿಸ್ಟಮ್ ಹಾಕಿಕೊಂಡು ಶಬ್ದ ಮಾಡುವ ಆಟೋ ರಿಕ್ಷಾಗಳ ಮೇಲೆ ನೆಲಮಂಗಲ ಪ್ರಾದೇಶಿಕ ಸಾರಿಗೆ ಕಚೇರಿ ಮತ್ತು ಗ್ರಾಮಾಂತರ ಪೊಲೀಸ್ ತಂಡ ಜಂಟಿ ತಪಾಸಾಣೆ ಮಾಡಿದ್ದಾರೆ. ಇನ್ನೂ ಅತಿ ವೇಗವಾಗಿ ಚಲಿಸುತ್ತಿದ್ದ ಆಟೋ ರಿಕ್ಷಾವನ್ನು ಮುಟ್ಟುಗೋಲು ಹಾಕಿಕೊಂಡು ಆರ್.ಟಿ.ಓ ಅಧಿಕಾರಿಗಳು, ಇತರೆ ಆಟೋ ಚಾಲಕರಿಗೆ ರಸ್ತೆ ಸುರಕ್ಷತಾ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಪ್ಪಿಸಿ ಜನರ ಜೀವನದ ಜೊತೆ ಆಟವಾಡ ಬೇಡಿ ಎಂದು ಹಿರಿಯ ಮೋಟಾರು ವಾಹನ ನಿರೀಕ್ಷಕರಾದ ಡಾ.ಧನ್ವಂತರಿ ಒಡೆಯರ್ ಕಿವಿ ಮಾತನ್ನು ತಿಳಿಸಿದ್ದಾರೆ.
Advertisement
ಈ ಬಗ್ಗೆ ವೃತ್ತ ನಿರೀಕ್ಷಕರಾದ ಹರೀಶ್ ಮಾತನಾಡಿ, ಗ್ರಾಮಾಂತರ ವಿಭಾಗದಲ್ಲಿ ಅತೀ ಹೆಚ್ಚಿನ ಜನರನ್ನು ಕರೆದೊಯ್ಯುವ ಚಾಲಕರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಪ್ರಾದೇಶಿಕ ಸಾರಿಗೆ ಅಧಿಕಾರಿ ಗುರುಮೂರ್ತಿ ಹೆದ್ದಾರಿ ನಿಯಮಗಳನ್ನು ಉಲ್ಲಂಘಿಸುವ ಆಟೋ ರಿಕ್ಷಾಗಳ ರಹಾದಾರಿಯನ್ನು ಪರವಾನಗೆ ಅಮಾನತುಪಡಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ:ನಾಗರಹೊಳೆ ಅಭಯಾರಣ್ಯಕ್ಕೆ ರಾಜೀವ್ ಗಾಂಧಿ ಹೆಸರು ತೆಗೆದು, ಜನರಲ್ ಕಾರ್ಯಪ್ಪ ಹೆಸರಿಡಲಿ: ಅಪ್ಪಚ್ಚು ರಂಜನ್