ಬೆಂಗಳೂರು: ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲೀಗ ಪಕ್ಷಾಂತರ ಪರ್ವ ಜೋರಾಗಿಯೆ ಇದೆ. ಕಮಲ ಅಭ್ಯರ್ಥಿ ಮುನಿರತ್ನ ಬೆಂಲಿಸಿ ಕಾಂಗ್ರೆಸ್ ಕಾರ್ಪೋರೇಟರ್ ಗಳು ಬಿಜೆಪಿಗೆ ಅಧಿಕೃತವಾಗಿ ಜಂಪ್ ಆಗಿದ್ದಾರೆ.
ಖಾಸಗಿ ಹೋಟೆಲ್ ನಲ್ಲಿ ನಡೆದ ಸೇರ್ಪಡೆ ಕಾರ್ಯಕ್ರಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ಕಾಂಗ್ರೆಸ್ ಕಾರ್ಪೋರೇಟರ್ ಗಳು ಬಿಜೆಪಿ ಸೇರ್ಪಡೆಯಾದರು. ಜಾಲಹಳ್ಳಿ, ಹೆಚ್ ಎಂಟಿ, ಯಶವಂತಪುರ, ಲಕ್ಷ್ಮೀದೇವಿನಗರ, ಕೊಟ್ಟಿಗೆಪಾಳ್ಯ ವಾರ್ಡ್ ಕಾರ್ಪೋರೇಟ್ ಗಳು ಬಿಜೆಪಿ ಸೇರಿದರು. ಆರ್ ಆರ್ ನಗರ ಬಿಜೆಪಿ ಚುನಾವಣೆ ಉಸ್ತುವಾರಿ ಆರ್.ಅಶೋಕ್, ಅರವಿಂದ್ ಲಿಂಬಾವಳಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಬಿಜೆಪಿ ಅಭ್ಯರ್ಥಿ ಮುನಿರತ್ನ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿದ್ದರು.
Advertisement
Advertisement
ಕನಕಪುರದಿಂದ ಬಂದು ಇಲ್ಲಿ ಗೂಂಡಾಗಿರಿ ರಾಜಕಾರಣ ನಡೆಯಲ್ಲ, ನಿಮ್ಮ ಹತ್ತಿರ ಬಂಡೆ ಇರಬಹುದು. ನಮ್ಮ ಬಳಿ ನಿಮ್ಮಿಂದ ಬಂದಿರುವ ಒಂದೊಂದು ಡೈನಾಮೆಟ್ ಇವೆ. ನಿಮ್ಮನ್ನ ಪುಡಿಪುಡಿ ಮಾಡುತ್ತಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ನಳಿನ್ ಕುಮಾರ್ ಕಟೀಲ್ ಟಾಂಗ್ ನೀಡಿದರು. ಇನ್ನೊಂದೆಡೆ ಆರ್.ಅಶೋಕ್, ಸಿ.ಟಿ.ರವಿ ಡಿಕೆಶಿ ವಿರುದ್ಧ ಕಿಡಿಕಾರಿದರು. ಜಾತಿ ಹೆಸರಲ್ಲಿ ರಾಜಕೀಯ ಮಾಡಲ್ಲ ನಾವು, ನಾಯಕರನ್ನ ಮುಗಿಸಿ ನಾಯಕರು ಆಗಬೇಕು ಎನ್ನುವ ಮನಸ್ಥಿತಿ ನಮ್ಮಲ್ಲಿ ಇಲ್ಲ ಎಂದು ವಾಗ್ದಾಳಿ ನಡೆಸಿದರು.
Advertisement
ರಾಜ್ಯಾಧ್ಯಕ್ಷರಾದ ಶ್ರೀ @nalinkateel ಅವರು ಮಲ್ಲೇಶ್ವರಂನಲ್ಲಿ ರಾಜರಾಜೇಶ್ವರಿ ನಗರ ಕ್ಷೇತ್ರದ ಅನ್ಯ ಪಕ್ಷಗಳ ಮುಖಂಡರು ಹಾಗೂ ಮಾಜಿ ಕಾರ್ಪೊರೇಟರ್ಗಳ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶ್ರೀ @CTRavi_BJP ಮತ್ತು ಪಕ್ಷದ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು. pic.twitter.com/zdeOb1eCTM
— BJP Karnataka (@BJP4Karnataka) October 18, 2020
Advertisement
ಈ ನಡುವೆ ಆರ್. ಆರ್.ನಗರ ಕ್ಷೇತ್ರದಲ್ಲಿ ಮಾಜಿ ಸಿಎಂ ಹೆಚ್ .ಡಿ.ಕುಮಾರಸ್ವಾಮಿ ಪ್ರಚಾರದಲ್ಲಿ ಕೈಗೊಂಡು ಕಾಂಗ್ರೆಸ್ ವಿರುದ್ಧ ಹರಿಹಾಯ್ದರು. ಒಟ್ಟಿನಲ್ಲಿ ರಾಜರಾಜೇಶ್ವರಿ ಕ್ಷೇತ್ರದ ಅಖಾಡ ರಂಗೇರುತ್ತಿದ್ದು, ಇವತ್ತು ಕಾಂಗ್ರೆಸ್ ಗೆ ಬಿಜೆಪಿ ಬಿಗ್ ಶಾಕ್ ಕೊಟ್ಟಿರೋದು ಮತ್ತಷ್ಟು ಕುತೂಹಲ ಕೆರಳಿಸಿದೆ.