– ಸೋಂಕಿತರ ಅಂತ್ಯಕ್ರಿಯೆ ಬಳಿಕ ಬೇಜವಾಬ್ದಾರಿ
ಬೀದರ್: ರಾಜ್ಯದಲ್ಲಿ ಕೊರೊನಾ ದಿನೇ ದಿನೇ ತನ್ನ ಅಟ್ಟಹಾಸವನ್ನು ಮುಂದುರಿಸಿದೆ. ಆದರೆ ಈ ಸಮಯದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ಜನರ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯಕ್ರಿಯ ಬಳಿಕ ಸಿಬ್ಬಂದಿ ಧರಿಸಿದ ಪಿಪಿಇ ಕಿಟ್, ಮಾಸ್ಕ್ಗಳನ್ನು ಮುಖ್ಯ ರಸ್ತೆಯ ಪಕ್ಕದಲ್ಲೆ ಬೇಕಾಬಿಟ್ಟಿ ಬಿಸಾಡುತ್ತಿದ್ದಾರೆ.
ನಗರದ ಮಧ್ಯ ಭಾಗದಲ್ಲಿರುವ ಬಸವನಗರ ರುದ್ರಭೂಮಿಯಲ್ಲಿ ಕೋವಿಡ್ಗೆ ಬಲಿಯಾಗಿರುವ ಶವಗಳನ್ನು ಅಂತ್ಯಸಂಸ್ಕಾರ ಮಾಡಲಾಗುತ್ತೆ. ಈ ಪ್ರದೇಶದಿಂದ 150 ಮೀಟರ್ ದೂರದಲ್ಲಿ ಹತ್ತಾರು ಕಾಲೋನಿಗಳು, ಪ್ರಮುಖ ಕಚೇರಿಗಳು ಇವೆ.
Advertisement
Advertisement
ಶವ ಸಂಸ್ಕಾರಕ್ಕೆ ಬಳಸಿದ ಎಲ್ಲಾ ವಸ್ತುಗಳನ್ನು ಕೊರೊನಾ ನಿಯಮದಂತೆ ಡಿಸ್ಪೋಸ್ ಮಾಡಬೇಕು. ಆದರೆ ಇಲ್ಲಿನ ಆರೋಗ್ಯ ಸಿಬ್ಬಂದಿ ಪಿಪಿಇ ಕಿಟ್, ಮಾಸ್ಕ್ಗಳನ್ನು ರುದ್ರ ಭೂಮಿಯಿಂದ ಹೊರಗೆ ಬಂದು ಮುಖ್ಯರಸ್ತೆಯ ಪಕ್ಕದಲ್ಲೇ ಬಿಸಾಡಿ ಹೋಗುತ್ತಿದ್ದಾರೆ.
Advertisement
ಸಿಬ್ಬಂದಿ ನಿರ್ಲಕ್ಷ್ಯ ಗಮನಕ್ಕೆ ಬಂದಿದೆ. ಈ ಬಗ್ಗೆ ತನಿಖೆ ಮಾಡಿ ಸಂಬಂಧಪಟ್ಟ ಸಿಬ್ಬಂದಿ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ ಎಂದು ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ಹೇಳುತ್ತಾರೆ.
Advertisement
ಕೊರೊನಾ ನಿಯಮಗಳನ್ನು ಪಾಲನೆ ಮಾಡಿ ಎಂದು ಜನರಿಗೆ ಜಾಗೃತಿ ಮೂಡಿಸಬೇಕಾದ ಆರೋಗ್ಯ ಸಿಬ್ಬಂದಿಯೇ ಹೀಗೆ ನಿರ್ಲಕ್ಷ್ಯ ಮಾಡುತ್ತಿರುವುದರಿಂದ ಸೋಂಕು ಹರಡುವ ಆತಂಕ ಎದುರಾಗಿದೆ.