ಬೆಂಗಳೂರು: ಡ್ರಗ್ಸ್ ಮಾಫಿಯಾ ಪ್ರಕರಣದ 7ನೇ ಆರೋಪಿಯಾಗಿರುವ ಸೆನೆಗಲ್ ದೇಶದ ಪ್ರಜೆ ಡ್ರಗ್ ಪೆಡ್ಲರ್ ಲೂಮ್ ಪೆಪ್ಪರ್ ಸಾಂಬಾ ಎಲ್ಲ ಆರೋಪಿಗಳಿಗೆ ಚೈನ್ ಲಿಂಕ್ ಆಗಿರುವ ವಿಚಾರ ಸಿಸಿಪಿ ವಿಚಾರಣೆ ವೇಳೆ ಗೊತ್ತಾಗಿದೆ.
ಹೌದು. ಸೆರೆ ಸಿಕ್ಕ ಆರಂಭದಲ್ಲಿ “ಐ ದೋಂತ್ ನೋ ಇಂಗ್ಲಿಷ್” ನನಗೆ ಆಫ್ರಿಕನ್ ಭಾಷೆ ಬಿಟ್ಟರೆ ಬೇರೆ ಯಾವುದೇ ಭಾಷೆ ಬರುವುದಿಲ್ಲ ಎಂದು ಸಾಂಬಾ ಹೇಳಿದ್ದ. ಪ್ರಕರಣದಲ್ಲಿ ಈತನ ಪಾತ್ರ ದೊಡ್ಡದಿದೆ ಎಂದು ತಿಳಿದಿದ್ದ ಪೊಲೀಸರಿಗೆ ಈತನ ಬಾಯಿ ಬಿಡಿಸುವುದು ಹೇಗೆ ಎನ್ನುವುದು ದೊಡ್ಡ ಚಿಂತೆಯಾಗಿತ್ತು.
Advertisement
Advertisement
ಮೊದಲ ಎರಡು ದಿನ ನನಗೆ ಇಂಗ್ಲಿಷ್ ಬರುವುದಿಲ್ಲ ಎಂದು ಹೈಡ್ರಾಮಾ ಮಾಡಿದ್ದ. ಈ ವೇಳೆ ಉಳಿದ ಆರೋಪಿಗಳ ಮೊಬೈಲ್ನಲ್ಲಿ ಈತ ಮಾಡಿರುವ ವಾಟ್ಸಪ್ ಚಾಟ್ ಮುಂದಿಟ್ಟು ಈ ಇಂಗ್ಲಿಷ್ ಮಸೇಜ್ ಮಾಡಿದವರು ಯಾರು ಎಂದು ಪ್ರಶ್ನಿಸಿದಾಗ ತನ್ನ ವರಸೆ ಬದಲಾಯಿಸಿ ಡ್ರಗ್ಸ್ ವಿಚಾರಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಯನ್ನು ನೀಡುತ್ತಿದ್ದಾನೆ ಎಂದು ಮೂಲಗಳು ತಿಳಿಸಿವೆ.
Advertisement
ಈ ಲೂಮ್ ಪೆಪ್ಪರ್ ಎಲ್ಲರಿಗೂ ಚೈನ್ ಲಿಂಕ್ ಆಗಿದ್ದಾನೆ. ಡ್ರಗ್ಸ್ ಕೇಸ್ ನಲ್ಲಿ ಆರೋಪಿಗಳ ಜೊತೆಗೆ ಲೂಮ್ ಪೆಪ್ಪರ್ ನೇರ ಸಂಪರ್ಕದಲ್ಲಿದ್ದ. ಬೇರೆ ಬೇರೆ ದೇಶಗಳಿಂದ ವಿವಿಧ ರೀತಿಯ ಡ್ರಗ್ಸ್ ಅನ್ನು ಈತ ಸರಬರಾಜು ಮಾಡುತ್ತಿದ್ದ. ಈತನ ಬಂಧನದ ಬಳಿಕ ಈ ಪ್ರಕರಣದ ಪ್ರಮುಖ ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ. ಇದನ್ನೂ ಓದಿ: ವಯಸ್ಸಿಗೂ ಡ್ರಗ್ಸ್ಗೂ ಕನೆಕ್ಟ್ ಮಾಡಬೇಡಿ: ನಟಿ ರಾಗಿಣಿ
Advertisement
ಈಗ ಸೆರೆಯಾದವರು ಮಾತ್ರವಲ್ಲದೇ ಇನ್ನು ಹಲವು ವ್ಯಕ್ತಿಗಳ ಬಗ್ಗೆ ಲೂಮ್ ಪೆಪ್ಪರ್ ಬಾಯಿಬಿಟ್ಟಿದ್ದಾನೆ. ಈಗ ಆ ವ್ಯಕ್ತಿಗಳ ಪಾತ್ರದ ಬಗ್ಗೆ ಸಿಸಿಬಿ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ.
ಸಂಪರ್ಕ ಆಗಿದ್ದು ಹೇಗೆ?
ವಿದೇಶದಿಂದ ಕಳ್ಳ ಸಾಗಾಣೆಯ ಮೂಲಕ ಬರುತ್ತಿದ್ದ ಡ್ರಗ್ಸ್ ಅನ್ನು ಸಾಂಬಾ ಬೆಂಗಳೂರು ಸೇರಿದಂತೆ ಹಲವು ಪ್ರಮುಖ ನಗರಗಳಿಗೂ ವಿತರಿಸುತ್ತಿದ್ದ. ಆರಂಭದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಹಾಗೂ ಐಟಿ-ಬಿಟಿಯವರಿಗೆ ಡ್ರಗ್ಸ್ ಮಾರಾಟ ಮಾಡುತ್ತಿದ್ದ. ಈ ವೇಳೆ ಪಬ್ವೊಂದರಲ್ಲಿ ಪಾರ್ಟಿ ವೇಳೆ ಪರಿಚಯವಾಗಿದ್ದ ವ್ಯಕ್ತಿಯಿಂದ ದೊಡ್ಡ ಮಟ್ಟದ ಗ್ರಾಹಕರ ಸಂಪರ್ಕ ಬೆಳೆದಿದೆ. ಬಳಿಕ ಪಾರ್ಟಿಗಳಿಗೆ ನೇರವಾಗಿ ಹೋಗಿ ಡ್ರಗ್ಸ್ ಕೊಡುತ್ತಿದ್ದ ಎಂದು ಮೂಲಗಳು ತಿಳಿಸಿವೆ.