ಆಪಲ್ ಸೈಡರ್ ವಿನೆಗರ್ ಸಕ್ಕರೆ ಹಾಗೂ ಆಲ್ಕೋಹಾಲ್ ಪರಿವರ್ತಿತ ಪಾನೀಯವಾಗಿದೆ. ಬ್ಯಾಕ್ಟೀರಿಯಾವು ಆಲ್ಕೋಹಾಲ್ ನನ್ನು ಆಮ್ಲವಾಗಿ ಪರಿವರ್ತಿಸಿ ಹುಳಿ ರುಚಿಯನ್ನು ನೀಡುವುದರ ಜೊತೆಗೆ ಸುವಾಸನೆಯನ್ನು ನೀಡುತ್ತದೆ. ವಿವಿಧ ಪಾನೀಯಗಳಲ್ಲಿ ಆಪಲ್ ಸೈಡರ್ ವಿನೆಗರ್ ಕೂಡ ಒಂದಾಗಿದ್ದು ಇದನ್ನು ಸೇವಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ಅಸಿಟಿಕ್ ಆಮ್ಲ ಮತ್ತು ಸಿಟ್ರಿಕ್ ಆಮ್ಲದ ಅಂಶವಿದೆ. ಜೊತೆಗೆ ಇದರಲ್ಲಿ ವಿಟಮಿನ್ ಬಿ ಮತ್ತು ವಿಟಮಿನ್ ಸಿ ಪೋಷಕಾಂಶ ಇದ್ದು ಆಪಲ್ ಸೈಡರ್ನನ್ನು ಔಷಧಿಯಾಗಿ ಕೂಡ ಬಳಸಲಾಗುತ್ತದೆ.
Advertisement
ಇದು ಆರೋಗ್ಯಕರ ಉತ್ಪನ್ನವೆಂದು ಪರಿಗಣಿಸಿದರೂ ಕೂಡ ನೈಸರ್ಗಿಕ ಉತ್ಪನ್ನಗಳು ಯಾವಾಗಲೂ ಸುರಕ್ಷಿತವಾದವೇ ಆದರೂ ಇದನ್ನು ಸೇವಿಸುವಾಗ ಜಾಗರೂಕತೆಯಿಂದ ಇರಬೇಕು. ಸೇವಿಸುವ ಮುನ್ನ ಕೆಲವು ಕ್ರಮಗಳನ್ನು ಅನುಸರಿಸಬೇಕಾಗುತ್ತದೆ ಮತ್ತು ಎಷ್ಟು ಡೋಸೇಜ್ ಪ್ರಮಾಣದಲ್ಲಿ ಸೇವಿಸಬೇಕು ಎಂಬುವುದನ್ನು ತಿಳಿದುಕೊಳ್ಳುವುದು ಅಗತ್ಯ.
Advertisement
Advertisement
ಆಪಲ್ ಸೈಡರ್ ವಿನೆಗರ್ ಆರೋಗ್ಯದ ಪ್ರಯೋಜನಗಳು
Advertisement
* ಆಪಲ್ ಸೈಡರ್ ವಿನೆಗರ್ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ ಮತ್ತು ಮಧುಮೇಹವನ್ನು ನಿಯಂತ್ರಿಸುತ್ತದೆ.
* ಆಪಲ್ ಸೈಡರ್ ವಿನೆಗರ್ ಅನ್ನು ಸೇವಿಸಿದರೆ ನಿಮ್ಮ ದೇಹದಲ್ಲಿನ ಕ್ಯಾಲೋರಿಯನ್ನು ಕಡಿಮೆ ಮಾಡಿ ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
* ಆಪಲ್ ಸೈಡರ್ ವಿನೆಗರ್ ಹೃದಯದಾರೋಗ್ಯವನ್ನು ಸುಧಾರಿಸುತ್ತದೆ ಮತ್ತು ರಕ್ತ ಸಂಚನವನ್ನು ಸುಗಮಗೊಳಿಸುತ್ತದೆ ಮತ್ತು ಕೊಲೆಸ್ಟ್ರಾಲ್ ನನ್ನು ಕಡಿಮೆ ಮಾಡುತ್ತದೆ. ಹೃದೋಗ ಅಪಾಯವನ್ನು ತಡೆಗಟ್ಟುತ್ತದೆ.
* ಆಪಲ್ ಸೈಡರ್ ವಿನೆಗರ್ ದೇಹದಲ್ಲಿನ ಕರುಳಿಗೆ ಒಳ್ಳೆಯದು ಮತ್ತು ಜೀರ್ಣಾಂಗ ವ್ಯವಸ್ಥೆಯನ್ನು ಸುಗಮಗೊಳಿಸುತ್ತದೆ.
* ಆಪಲ್ ಸೈಡರ್ ವಿನೆಗರ್ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ ಮತ್ತು ಸೋಂಕುಗಳಿಂದ ನಿಮ್ಮನ್ನು ರಕ್ಷಿಸುತ್ತದೆ.
* ಆಪಲ್ ಸೈಡರ್ ವಿನೆಗರ್ ನಿಮ್ಮ ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ.
ಆಪಲ್ ಸೈಡರ್ ವಿನೆಗರ್ನಿಂದಾಗುವ ಉಪಯೋಗಗಳು
* ಆಪಲ್ ಸೈಡರ್ ವಿನೆಗರ್ ಉತ್ತಮ ಡೈ ಕ್ಲೀನರ್ ಆಗಿ ಉಪಯೋಗಿಸಲಾಗುತ್ತದೆ. ಇದು ಬ್ಯಾಕ್ಟೀರಿಯಾ ವಿರೋಧಿ ಗುಣಲಕ್ಷಣಗಳನ್ನು ಹೊಂದಿರುವ ಕಾರಣ ಇದನ್ನು ಅಡುಗೆ ಮನೆ,ಕಿಟಕಿ ಫಲಕ, ಸ್ನಾನ ಗೃಹ, ಪಾತ್ರೆಗಳು, ಕನ್ನಡಿ, ಬಾಗಿಲುಗಳಂತಹ ವಸ್ತುಗಳನ್ನು ಸ್ವಚ್ಛಗೊಳಿಸಲು ಬಳಸಬಹುದು.
* ಆಪಲ್ ಸೈಡರ್ ವಿನೆಗರ್ ನ್ನು ಹಣ್ಣು ತರಕಾರಿಗಳನ್ನು ತೊಳೆಯಲು ಬಳಸಬಹುದಾಗಿದೆ. ಇದು ಹಣ್ಣು, ತರಕಾರಿ ಮೇಲಿನ ಬ್ಯಾಕ್ಟೀರಿಯಾಗಳನ್ನು ಕೊಲ್ಲುತ್ತದೆ.
* ನಿಮ್ಮ ಹಲ್ಲುಗಳಲ್ಲಿನ ಕಲೆಗಳನ್ನು ನಾಶಪಡಿಸಲು ಮತ್ತು ಹಲ್ಲನ್ನು ನೈಸರ್ಗಿಕವಾಗಿ ಬಿಳುಪುಗೊಳಿಸಲು ಆಪಲ್ ಸೈಡರ್ ವಿನೆಗರ್ನನ್ನುಬಳಸಬಹುದು.
* ಜೊತೆಗೆ ಬಾಯಿಯಲ್ಲಿ ಬರುವ ದುರ್ವಸನೆಯನ್ನು ತೊಡೆದು ಹಾಕಿ ತಾಜಾ ಉಸಿರನ್ನು ನೀಡಲು ಮೌತ್ ಫ್ರೆಶ್ ನರ್ ಆಗಿ ಕೂಡ ಉಪಯೋಗಿಸಬಹುದಾಗಿದೆ.
* ಆಪಲ್ ಸೈಡರ್ ವಿನೆಗರ್ ನಿಮ್ಮ ಚರ್ಮ ಮತ್ತು ಕೂದಲು ಹೊಳೆಯುವಂತೆ ಮಾಡಲು ಸಹಾಕಾರಿಯಾಗಿದೆ. ಒಂದು ರೀತಿ ಚರ್ಮರೋಗಕ್ಕೆ ಆಪಲ್ ಸೈಡರ್ ವಿನೆಗರ್ ಮದ್ದಾಗಿದೆ.