– ರಾಜ್ಯದ ಜನರಿಗೆ ಬಿಜೆಪಿಯವರು ಸುಳ್ಳು ಹೇಳಿದ್ದಾರೆ
– ಹಣದ ಕುರಿತು ತನಿಖೆಗೆ ಮಾಜಿ ಸಿಎಂ ಆಗ್ರಹ
ಬೆಂಗಳೂರು: ಯಡಿಯೂರಪ್ಪ ಅವರು ಜನರ ಆಶೀರ್ವಾದದಿಂದ ರಾಜ್ಯದ ಮುಖ್ಯಮಂತ್ರಿ ಆಗಿಲ್ಲ. ಆಪೆರೇಷನ್ ಕಮಲ, ಹಣದ ಪ್ರಭಾವದಿಂದ ಮುಖ್ಯಮಂತ್ರಿಯಾಗಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಎಸ್ವೈ ಆಪರೇಷನ್ ಕಮಲದ ಜನಕರಾಗಿದ್ದಾರೆ. ಬಿಎಸ್ವೈ ಸುಳ್ಳು ಹೇಳಿ, ಎಂಎಲ್ಎಗಳನ್ನು ಕೊಂಡುಕೊಂಡು, 9 ಕೋಟಿ ಹಣವನ್ನು ಖರ್ಚು ಮಾಡಿ ಮುಖ್ಯಮಂತ್ರಿ ಆಗಿದ್ದಾರೆ. ಸ್ವತಃ ಅವರ ಪಕ್ಷದವರೇ ಹಣ ಖರ್ಚು ಮಾಡಿರುವ ಕುರಿತು ಹೇಳಿದ್ದಾರೆ. ಈ ಬಗ್ಗೆ ತನಿಖೆ ಆಗಲಿ ಎಂದು ಆಗ್ರಹಿಸಿದ್ದಾರೆ.
Advertisement
Advertisement
ಬಿಜೆಪಿಯವರು ಸಜ್ಜನರಂತೆ ಹಣ ಖರ್ಚು ಮಾಡಿಲ್ಲ ಅಂತ ಹೇಳಿದ್ದರು. ಆದರೆ ಆಪರೇಷನ್ ಕಮಲಕ್ಕೆ ಯೋಗೇಶ್ವರ್ ಹಣ ಖರ್ಚು ಮಾಡಿದ್ದಾರೆ ಎಂದು ರಮೇಶ್ ಜಾರಕಿಹೊಳಿ ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲ ಮಾಡುವುದು ಎಂದರೆ ದುಡ್ಡುಕೊಟ್ಟು ಎಂಎಲ್ಎಗಳನ್ನು ಕೊಂಡುಕೊಳ್ಳುವುದು ಎಂದು ಆಗುತ್ತದೆ. ಇದನ್ನು ಅವರೇ ಈಗ ಒಪ್ಪಿಕೊಂಡಿದ್ದಾರೆ. ಆಪರೇಷನ್ ಕಮಲದಲ್ಲಿ ಹಣದ ಪ್ರಭಾವ ಇದೆ ಎಂದು ಈ ಮೂಲಕವಾಗಿ ತಿಳಿಯುತ್ತದೆ. ಆದರೆ ಬಿಜೆಪಿಯವರು ನಾವು ಹಣ ಕೊಟ್ಟಿಲ್ಲ ಯಾರನ್ನೂ ಕೊಂಡುಕೊಂಡಿಲ್ಲ, 17 ಎಂಎಲ್ಎಗಳು ಅವರಾಗಿಯೇ ಬಿಜೆಪಿಗೆ ಬಂದಿದ್ದಾರೆ ಎಂದು ಹೇಳಿದ್ದರು. ಆದರೆ ಯೋಗೇಶ್ವರ್ 9 ಕೋಟಿ ಹಣವನ್ನು ಖರ್ಚು ಮಾಡಿದ್ದಾರೆ ಎಂದು ಅವರ ಪಕ್ಷದವರೇ ಹೇಳಿದ್ದಾರೆ. ಈ ಕುರಿತಾಗಿ ಸ್ಪಷ್ಟ ಮತ್ತು ನಿಖರವಾದ ತನಿಖೆ ಆಗಬೇಕು ಎಂದು ಮಾಜಿ ಸಿಎಂ ಆಗ್ರಹಿಸಿದ್ದಾರೆ.
Advertisement
ರಾಜಕೀಯ ಎಂದರೆ ವಿರೋಧ ಪಕ್ಷದವರು ಆರೋಪ ಮಾಡಿದರೆ, ಅವರು ಮಾಡುತ್ತಾರೆ ಎಂದು ಆಗುತ್ತಿತ್ತು. ಆದರೆ ಆರೋಪ ಮಾಡಿರುವವರು ಅವರ ಪಕ್ಷದವರಾಗಿದ್ದಾರೆ. ರಾಜ್ಯದ ಜನರಿಗೆ ಬಿಜೆಪಿಯವರು ಸುಳ್ಳು ಹೇಳಿದ್ದಾರೆ. ಬಿಜೆಪಿಯವರು ಏನು ಎಂದು ಗೊತ್ತಾಗಬೇಕು. ಸಿಡಿ ಕುರಿತಾಗಿ ತನಿಖೆ ಆಗಬೇಕು. ಬಿಜೆಪಿ ಒಬ್ಬ ಸೀನಿಯರ್ ಬಿಜೆಪಿ ಲೀಡರ್ ಆಗಿರುವ ಯತ್ನಾಳ್ ಅವರೇ ಬಾಯಿ ಬಿಟ್ಟು ಹೆಳ್ತಾ ಇದ್ದಾರೆ, ಯಡಿಯೂರಪ್ಪ ಅಲ್ಲಿ ಕೊಳಕು ದೃಶ್ಯಗಳಿವೆ ಎಂದು ಹೇಳುತ್ತಾರೆ. ಇದು ರಾಜ್ಯದ ಜನರಿಗೆ ಗೊತ್ತಾಗಬೇಕು ಎಂದು ಸಿದ್ದರಾಮಯ್ಯ ಹೇಳಿದ್ದಾರೆ.