ಟೋಕಿಯೊ: ಸಾಮಾಜಿಕ ಜಾಲತಾಣದಲ್ಲಿ ತನ್ನ ನಡತೆಯ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಜಪಾನಿಸ್ ನಟಿ ಹಾಗೂ ವೃತ್ತಿಪರ ಕುಸ್ತಿಪಟು ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದ ನಟಿಯನ್ನು 22 ವರ್ಷದ ಹಾನಾ ಕಿಮುರಾ ಎಂದು ಗುರುತಿಸಲಾಗಿದೆ. ಈಕೆ ನೆಟ್ಫ್ಲಿಕ್ಸ್ ನಲ್ಲಿ ಪ್ರಸಾರವಾಗುವ ಜಪಾನಿಸ್ನ ಜನಪ್ರಿಯ ವೆಬ್ ಸೀರೀಸ್ ‘ಟೆರೇಸ್ ಹೌಸ್’ ನಲ್ಲಿ ನಟಿಸುತ್ತಿದ್ದರು. ಜೊತೆಗೆ ಈಕೆ ವೃತ್ತಿಪರ ಕುಸ್ತಿಪಟು ಆಗಿದ್ದರು. ಆದರೆ ಆನ್ಲೈನ್ ಅಲ್ಲಿ ತನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ ಎಂದು ಸಾವನ್ನಪ್ಪಿದ್ದಾರೆ.
Advertisement
Advertisement
ಈ ಬಗ್ಗೆ ಮಾತನಾಡಿರುವ ಹಾನಾ ಕಿಮುರಾಳ ಕುಸ್ತಿ ಸಂಸ್ಥೆ, ಆಕೆಯ ಸಾವಿಗೆ ನಿಖರವಾದ ಕಾರಣ ನಮಗೂ ಗೊತ್ತಿಲ್ಲ. ಆಕೆ ತುಂಬ ಪ್ರತಿಭಾನ್ವಿತ ನಟಿ ಮತ್ತು ಕುಸ್ತಿಪಟು. ಬಹಳ ಗಟ್ಟಿ ಮನಸ್ಸು ಇದ್ದ ಹುಡುಗಿ ಎಂದು ಹೇಳಿದ್ದಾರೆ. ಜೊತೆಗೆ ಅವಳು ಸಾಯುವ ಮುನ್ನ ಸಾಮಾಜಿಕ ಜಾಲತಾಣದಲ್ಲಿ ತನ್ನ ಅಭಿಮಾನಿಗಳಿಗೆ ಗುಡ್ಬಾಯ್ ಎಂಬ ಪೋಸ್ಟ್ ಅನ್ನು ಹಾಕಿಕೊಂಡಿದ್ದಾಳೆ ಎಂದು ಕುಸ್ತಿ ಸಂಸ್ಥೆ ತಳಿಸಿದೆ.
Advertisement
Advertisement
ಈ ಬಗ್ಗೆ ಜಪಾನಿನ ಲೋಕಲ್ ಸುದ್ದಿ ವಾಹಿನಿಯೊಂದು ವರದಿ ಮಾಡಿದ್ದು, ಹಾನಾ ಕಿಮುರಾ ಟೆರೇಸ್ ಹೌಸ್ ನಲ್ಲಿ ಮಾಡಿದ ಪಾತ್ರವನ್ನು ಗುರಿಯಾಗಿ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ಆಕೆಯ ನಡತೆಯ ಬಗ್ಗೆ ಕೆಟ್ಟದಾಗ ಟ್ರೋಲ್ ಮಾಡಲಾಗಿತ್ತು. ಈ ಕಾರಣದಿಂದ ಆಕೆ ಮನನೊಂದು ಸಾವನ್ನಪ್ಪಿರಬಹುದು ಎಂದು ಹೇಳಿದೆ. ಆದರೆ ಆಕೆ ಶನಿವಾರ ಸಾವನ್ನಪ್ಪಿದ್ದು, ಹಾನಾ ಯಾಕೆ ಸಾವನ್ನಪ್ಪಿದಳು ಎಂದು ನಿಖರ ಕಾರಣ ತಿಳಿದು ಬಂದಿಲ್ಲ.
ಈ ಬಗ್ಗೆ ನೆಟ್ಫ್ಲಿಕ್ಸ್ ಮತ್ತು ಜಪಾನ್ನ ಫ್ಯೂಜಿ ಟೆಲಿವಿಷನ್ ಕೂಡ ಸುದ್ದಿ ಪ್ರಸಾರ ಮಾಡಿದ್ದು, ನಟಿ ಹಾನಾ ಕಿಮುರಾ ಸಾವನ್ನಪ್ಪಿದರು ಎಂದು ಹೇಳಲು ದುಖಃವಾಗುತ್ತಿದೆ. ಜಪಾನಿನ ಮಹಿಳಾ ಕುಸ್ತಿಪಟು ಆಗಿದ್ದ ಹಾನಾ ಸಾವಿಗೆ ಗೌರವ ಸಿಗಲಿ. ಅವಳ ಕುಟುಂಬಕ್ಕೆ ಮತ್ತು ಸ್ನೇಹಿತರಿಗೆ ಆಕೆಯ ಸಾವನ್ನು ಭರಿಸುವ ಶಕ್ತಿಯನ್ನು ಆ ದೇವರು ನೀಡಲಿ ಎಂದು ಎರಡು ಮಾಧ್ಯಮಗಳು ಹೇಳಿವೆ.
https://www.instagram.com/p/CAf_XFcJ8jQ/
ಹಾನಾ ತಾನು ಸಾಯುವುದಕ್ಕೂ ಮುನ್ನಾ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಹಾಕಿದ್ದು, ಇದರಲ್ಲಿ ಒಂದು ಬೆಕ್ಕಿನ ಜೊತೆ ಫೋಟೋ ಹಾಕಿ ‘ಐ ಲವ್ ಯು, ಖುಷಿಯಾದ ಜೀವನ, ನನ್ನನ್ನು ಕ್ಷಮಿಸು’ ಎಂದು ಬರೆದುಕೊಂಡಿದ್ದಾರೆ. ಆಸ್ಪತ್ರೆಯಲ್ಲಿ ಆಕೆ ಸಾವು ದೃಢಪಟ್ಟ ಕೂಡಲೇ ಮಾಧ್ಯಮವೊಂದು ಆಕೆಯ ಶವದ ಫೋಟೋವನ್ನು ಪ್ರಸಾರ ಮಾಡಿದೆ. ಆದರ ಜೊತೆಗೆ ಆಕೆ ಕೊನೆಯದಾಗಿ ಗುಡ್ಬಾಯ್ ಎಂದು ಪೋಸ್ಟ್ ಮಾಡಿದ್ದಾಳೆ ಎಂದು ಹೇಳಿದೆ.
https://www.instagram.com/p/BwHSq4HnBDF/
ಜಪಾನ್ನಲ್ಲಿ ಕಳೆದ ವರ್ಷ ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗಿ ಇಬ್ಬರು ಕೆ-ಪಾಪ್ ಸಿಂಗರ್ಗಳು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಸಾಲಿಗೆ ಹಾನಾ ಕಿಮೂರಾ ಅವರು ಸೇರಿದ್ದಾರೆ. ಆದರೆ ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿರುವ ಜಪಾನಿನ ಸೈಬರ್ ಪೊಲೀಸರು ತನಿಖೆ ಮಾಡುತ್ತಿದ್ದಾರೆ.