ಭೋಪಾಲ್: ಆನ್ಲೈನ್ ಗೇಮ್ನಲ್ಲಿ 40 ಸಾವಿರ ಕಳೆದುಕೊಂಡ ಬಾಲಕ ಅಮ್ಮ ಬೈದ್ಲು ಎಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಛತ್ರಪುರ ಜಿಲ್ಲೆಯಲ್ಲಿ ನಡೆದಿದೆ.
Advertisement
13 ವರ್ಷದ ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಬಾಲಕನ ಕುಟುಂಬ ಛತ್ರಪುರದ ಶಾಂತಿನಗರದಲ್ಲಿ ನೆಲೆಸಿತ್ತು. ಪೋಷಕರಿಗೆ ಗೊತ್ತಿಲ್ಲದೇ ಆನ್ಲೈನ್ಗೇಮ್ಗೆ ಅಡಿಕ್ಟ್ ಆಗಿದ್ದನು. ಗೇಮ್ನಲ್ಲಿ ಒಟ್ಟು 40 ಸಾವಿರ ರೂಪಾಯಿ ಕಳೆದುಕೊಂಡಿದ್ದನು ಎನ್ನಲಾಗಿದೆ.
Advertisement
Advertisement
ಆತ್ಮಹತ್ಯೆ ಮಾಡಿಕೊಂಡಿರುವ ದಿನ ಮನೆಯಲ್ಲಿ ಬಾಲಕ ಮತ್ತು ಆತನ ಸಹೋದರಿ ಮಾತ್ರ ಇದ್ದರು. ಕೆಲಸಕ್ಕೆ ಹೋಗಿದ್ದ ತಾಯಿಗೆ ಬ್ಯಾಂಕ್ನಿಂದ ಮೇಸೆಜ್ ಬರುತ್ತದೆ. ಮೊಬೈಲ್ಗೆ ಆಕೆಯ ಖಾತೆಯಿಂದ 40,000 ರೂ. ಕಟ್ ಆಗಿರುವುದಾಗಿ ಮೆಸೇಜ್ ಬಂದಿತ್ತು. ಇದರಿಂದ ಗಾಬರಿಯಾದ ಆಕೆ ತನ್ನ ಗಂಡ, ಮಕ್ಕಳ ಬಳಿ ಈ ಬಗ್ಗೆ ವಿಚಾರಿಸಿದ್ದಳು ಕೂಡಲೇ ತಮ್ಮ ಮಗ ಆನ್ಲೈನ್ ಗೇಮ್ಗಾಗಿ ಮತ್ತೆ ಹಣವನ್ನು ಕಳೆದುಕೊಂಡಿದ್ದನೆ ಎಂದು ಅವರಿಗೆ ಗೊತ್ತಾಗಿದೆ. ಇದರಿಂದ ಕೋಪಗೊಂಡ ತಾಯಿ ಫೋನ್ ಮಾಡಿ ಮಗನಿಗೆ ಬುದ್ದಿ ಮಾತುಗಳನ್ನು ಹೇಳಿದ್ದಾಳೆ.
Advertisement
ಈ ವಿಚಾರವಾಗಿ ಮನನೊಂದ ಬಾಲಕ ತನ್ನ ರೂಮಿಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ತಕ್ಷಣ ಆತನ ಸಹೋದರಿ ಪೋಷಕರಿಗೆ ಈ ವಿಚಾರವನ್ನು ತಿಳಿಸಿದ್ದಾಳೆ. ತಕ್ಷಣ ವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾರೆ. ಆದರೆ ವೈದ್ಯರು ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ನಾವು ತನಿಖೆಯನ್ನು ಮುಂದುವರಿಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.