– ಮನೆಯಲ್ಲಿನ ವಸ್ತು ಕದ್ದು, ಮಾರಿ ಗೇಮ್ ಆಟ
– ಶಿಕ್ಷೆ ನೀಡಿ ಎಂದು ಪೊಲೀಸರ ಬಳಿ ಅಳಲು
ಲಕ್ನೋ: ಅಚ್ಚರಿಯ ಪ್ರಕರಣವೊಂದರಲ್ಲಿ 13 ವರ್ಷದ ಮಗ ಆನ್ಲೈನ್ ತರಗತಿ ಬದಲಿಗೆ ಮೊಬೈಲ್ನಲ್ಲಿ ಹೆಚ್ಚು ಗೇಮ್ ಆಡುತ್ತಲೇ ಕಾಲ ಕಳೆಯುತ್ತಾನೆ ಎಂದು ಆರೋಪಿಸಿ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
Advertisement
ನೋಯ್ಡಾದ ಡಂಕೌರ್ ರಾಮ್ಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ತನ್ನ 13 ವರ್ಷದ ಮಗನ ವಿರುದ್ಧ ಉತ್ತರ ಪ್ರದೇಶದ ಗೌತಮ ಬುದ್ಧ ನಗರದ ನಿವಾಸಿಯಾಗಿರುವ ತಂದೆ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
Advertisement
ಘಟನೆ ಕುರಿತು ಅಳಲು ತೋಡಿಕೊಂಡಿರುವ ಬಾಲಕನ ತಂದೆ, ಆನ್ಲೈನ್ ತರಗತಿಗಳನ್ನು ನಿರ್ಲಕ್ಷಿಸಿ ಯಾವಾಗಲೂ ಗೇಮ್ ಆಡುತ್ತಿರುತ್ತಾನೆ. ಮೊಬೈಲ್ನಲ್ಲಿ ಗೇಮ್ ಆಡದೇ, ಅಧ್ಯಯನದತ್ತ ಗಮನಹರಿಸುವಂತೆ ಮಗನನ್ನು ಹೆದರಿಸಿ ಎಂದು ತಂದೆ ಪೊಲೀಸರ ಬಳಿ ಮನವಿ ಮಾಡಿಕೊಂಡಿದ್ದಾನೆ. ಪೊಲೀಸರು ತಂದೆ ಹಾಗೂ ಮಗನ ಹೇಳಿಕೆ ಪಡೆದು, ಕೌನ್ಸಲಿಂಗ್ ನಡೆಸಿ ಮನೆಗೆ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
Advertisement
Advertisement
ಮಂಗಳವಾರ ಸಂಜೆ ವ್ಯಕ್ತಿ ತನ್ನ ಮಗನೊಂದಿಗೆ ಪೊಲೀಸ್ ಠಾಣೆಗೆ ತೆರಳಿದ್ದು, ಮಗ ನನ್ನ ಮಾತು ಕೇಳುತ್ತಿಲ್ಲ ಎಂದು ಪೊಲೀಸರಿಗೆ ವ್ಯಕ್ತಿ ತಿಳಿಸಿದ್ದಾರೆ. ಗೇಮ್ ಆಡಬೇಡ ಎಂದು ನಾನು ಬೈದರೆ, ಪಕ್ಕದ ಮನೆಗೆ ಹೋಗಿ ಅಲ್ಲಿ ಗೇಮ್ ಆಡುತ್ತಾನೆ ಎಂದು ದೂರಿದ್ದಾರೆ.
ಇನ್ನೂ ಆಘಾತಕಾರಿ ಮಾಹಿತಿಯನ್ನು ಬಾಲಕನ ತಂದೆ ತಿಳಿಸಿದ್ದು, ನನ್ನ ಮಗ ಕೆಲವು ಬಾರಿ ಮನೆಯಲ್ಲಿ ವಸ್ತುಗಳನ್ನು ಕದ್ದು, ಅವುಗಳನ್ನು ಅಂಗಡಿಗಳಲ್ಲಿ ಮಾರುತ್ತಾನೆ. ಈತ 4ನೇ ತರಗತಿ ಓದುತ್ತಿದ್ದಾನೆ ಎಂದು ತಿಳಿಸಿದ್ದಾರೆ.
ಮಗನ ಆನ್ಲೈನ್ ತರಗತಿಗಳಿಗಾಗಿ ತೊಂದರೆಯಾಗುವುದನ್ನು ಮನಗಂಡು ಮೊಬೈಲ್ ಖರೀದಿಸಿದೆ. ಆದರೆ ಇದೀಗ ಗೇಮ್ ಆಡುವ ಮೂಲಕ ನನ್ನ ಮಾತನ್ನೇ ಕೇಳುತ್ತಿಲ್ಲ. ಅವನಿಗೆ ಹೆದರಿಸಿ, ಸಣ್ಣ ಪ್ರಮಾಣದ ಶಿಕ್ಷೆ ನೀಡಿ ಎಂದು ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಪೊಲೀಸರು, ವಾಪಸ್ ಮನೆಗೆ ತೆರಳಿ, ಮಗನೊಂದಿಗೆ ಮಾತುಕತೆ ನಡೆಸಿ, ಆತ ಇನ್ನೂ ಅಪ್ರಾಪ್ತ ಎಂದು ಸಲಹೆ ನೀಡಿ ಕಳುಹಿಸಿದ್ದಾರೆ.