ಚಂಡೀಗಢ: ಕೊರೊನಾ ವೈರಸ್ ಮಹಾಮಾರಿ ಭಾರತಕ್ಕೆ ಕಾಲಿಟ್ಟ ಬಳಿಕ ಬಾಲಿವುಡ್ ನಟ ಸೋನು ಸೂದ್ ಅನೇಕರಿಗೆ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಲೇ ಬಂದಿದ್ದಾರೆ. ಇದೀಗ ನಟ ಮತ್ತೊಂದು ಮಾನವೀಯ ಕಾರ್ಯ ಮಾಡುವ ಮೂಲಕ ವಿದ್ಯಾರ್ಥಿಗಳ ಮನ ಗೆದ್ದಿದ್ದಾರೆ.
Advertisement
ಹೌದು. ಹರಿಯಾಣದ ಮೊರ್ನಿ ಎಂಬ ಪುಟ್ಟ ಹಳ್ಳಿಯ ಮಕ್ಕಳು ಮೊಬೈಲ್ ಇಲ್ಲದೆ ಆನ್ ಲೈನ್ ಕ್ಲಾಸಿಗೆ ಹಾಜರಾಗಲು ಅಸಾಧ್ಯವಾಗಿತ್ತು. ಬಡುಕುಟುಂಬದ ಮಕ್ಕಳಾಗಿದ್ದರಿಂದ ಮೊಬೈಲ್ ಖರೀದಿಸಿ ಕೊಡಲು ಹೆತ್ತವರಿಗೆ ಕಷ್ಟ ಸಾಧ್ಯವಾಗಿತ್ತು. ಈ ವಿಚಾರವನ್ನು ಪತ್ರಕರ್ತರೊಬ್ಬರು ಸುದ್ದಿ ಮಾಡಿದ್ದರು. ಅಲ್ಲದೆ ನಟ ಸೋನು ಸೂದ್ ಬಳಿ ಮಕ್ಕಳಿಗೆ ಸಹಾಯ ಮಾಡುವಂತೆ ಕೇಳಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ನಟ ಸೋನು ಸೂದ್, ಈ ಮಕ್ಕಳು ನಾಳೆಯೊಳಗೆ ಅವರು ತಮ್ಮ ಸ್ಮಾರ್ಟ್ ಫೋನ್ ಗಳನ್ನು ಹೊಂದಿರುತ್ತಾರೆ ಎಂದು ತಿಳಿಸಿದ್ದಾರೆ.
Advertisement
Advertisement
ಜುಲೈ 26 ರಂದು ಪತ್ರಕರ್ತರು ಮಕ್ಕಳಿಗೆ ಸ್ಮಾರ್ಟ್ ಫೋನ್ ಕೊರತೆ ಎಂಬ ವಿಚಾರವನ್ನು ಇಟ್ಟುಕೊಂಡು ಒಂದು ಸುದ್ದಿ ಬರೆದಿದ್ದರು. ಈ ಸುದ್ದಿಯ ತುಣುಕನ್ನು ನಟನಿಗೆ ಕಳುಹಿಸಿದ್ದರು. ಸುದ್ದಿಯ ಪ್ರತಿ ಪ್ರಕಾರ ಹಿರಿಯ ಮಾಧ್ಯಮಿಕ ಶಾಲೆಯ ಶೇ 20ರಷ್ಟು ಮಕ್ಕಳು ಮೊಬೈಲ್ ಹೊಂದಿಲ್ಲ. ಹೀಗಾಗಿ ಅವರಿಗೆ ಆನ್ಲೈನ್ ತರಗತಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ಬರೆದಿದ್ದರು.
Advertisement
Students of Govt school Morni were in for a surprise when they got a call from Actor Sonu Sood, his friend Karan Gilhotra this mrng who announced that thy need not travel miles for phones as they handedover new smart phones to their Principal@iepunjab @SonuSood @Karan_Gilhotra pic.twitter.com/2jQgnQT94E
— Hina Rohtaki (@HinaRohtaki) August 25, 2020
ಸದ್ಯ ನಟ ಮಕ್ಕಳಿಗೆ ಸ್ಮಾರ್ಟ್ ಪೂನ್ ಗಳನ್ನು ಕಳುಹಿಸಿದ್ದಾರೆ. ಮಕ್ಕಳಿಗೆ ಇದು ತಲುಪಿದ ಬಳಿಕ ಸಂತಸ ವ್ಯಕ್ತಪಡಿಸಿದ ಸೋನು ಸೂದ್, ತಮ್ಮ ಸ್ಮಾರ್ಟ್ ಫೋನ್ ಗಳ ಮೂಲಕ ಇಂದು ಎಲ್ಲಾ ವಿದ್ಯಾರ್ಥಿಗಳು ತರಗತಿಗೆ ಹಾಜರಾಗುವುದನ್ನು ನೋಡುವ ಅದ್ಭುತ ದಿನ ಆರಂಭವಾಗಿದೆ ಎಂದು ಬರೆದುಕೊಂಡಿದ್ದಾರೆ. ಅಲ್ಲದೆ ಸಂಕಷ್ಟವನ್ನು ತನ್ನ ಗಮನಕ್ಕೆ ತಂದವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
A wonderful beginning to my day watching all the students get their smartphones to attend their online classes. @Karan_Gilhotra पढ़ेगा इंडिया तभी तो बढ़ेगा इंडिया। ???????? n thanks to @HinaRohtaki for bringing this need for the students to our notice. https://t.co/6Pn9QH0o4H
— sonu sood (@SonuSood) August 26, 2020
ಸೋನು ಸೂದ್ ಅವರು ಈ ಹಿಂದೆ ಅಂದರೆ ಕೊರೊನಾ ಲಾಕ್ಡೌನ್ ಆದ ಬಳಿಕ ವಲಸೆ ಕಾರ್ಮಿಕರು, ವಿದೇಶದಲ್ಲಿದ್ದವರನ್ನು ತಾಯ್ನಾಡಿಗೆ ಕರೆತರುವ ಮೂಲಕ ಅನೇಕ ಮಾನವೀಯ ಕಾರ್ಯಗಳನ್ನು ಮಾಡುತ್ತಿದ್ದು, ದೇಶದ ಜನರ ಹೃದ ಗೆದ್ದಿದ್ದಾರೆ. ಇದನ್ನೂ ಓದಿ: ಬಿಗ್ ಇಂಪ್ಯಾಕ್ಟ್ – ತ್ರಿವಳಿ ಮಕ್ಕಳ ಕುಟುಂಬಕ್ಕೆ ಸೋನು ಸೂದ್ ಸಹಾಯ ಹಸ್ತ