ಬಳ್ಳಾರಿ: ಅರಣ್ಯ ಸಚಿವ ಆನಂದ್ ಸಿಂಗ್ ನಿವಾಸದ ಬಳಿ ಮೊಸಳೆಯೊಂದು ಪ್ರತ್ಯಕ್ಷವಾಗಿದ್ದು, ಕೆಲಕಾಲ ಆತಂಕ ಸೃಷ್ಟಿಸಿತ್ತು.
ಬಳ್ಳಾರಿ ಜಿಲ್ಲೆ ಹೊಸಪೇಟೆ ನಗರದ ಬೈಪಾಸ್ ಬಳಿ ಎಲ್ಎಲ್ಸಿ ಕಾಲುವೆ ಇದೆ. ನಿನ್ನೆ ರಾತ್ರಿ ಕಾಲುವೆಯಿಂದ ಮೊಸಳೆಯು ಸಚಿವರ ನಿವಾಸದ ಮುಂಭಾಗದ ರಸ್ತೆಗೆ ಬಂದಿತ್ತು.
Advertisement
Advertisement
ಮೊಸಳೆ ಇರುವ ಮಾಹಿತಿ ಅರಿತ ಕಮಲಾಪುರದ ಅಟಲ್ ವಾಜಪೇಯಿ ಝೂಲಾಜಿಕಲ್ ಪಾರ್ಕ್ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಮೊಸಳೆಯನ್ನು ಸೆರೆ ಹಿಡಿದಿದ್ದಾರೆ. ನಂತರ ಮೊಸಳೆ ಝೂಲಾಜಿಕಲ್ ಪಾರ್ಕ್ಗೆ ಕೊಂಡೊಯ್ದಿದ್ದು, ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.