ಕೋಲಾರ: ಸಿಐಡಿ, ಡಿವೈಎಸ್ಪಿ ಲಕ್ಷ್ಮಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅನುಮಾನಗಳು ಎದ್ದಿದ್ದು, ಆಕೆ ಆತ್ಮಹತ್ಯೆ ಮಾಡಿಕೊರ್ಳಳುವ ಮಗಳಲ್ಲ, ಆಕೆ ಗಂಡು ಮಗನಂತೆ ಧೈರ್ಯವಂತೆ ಎಂದು ದೊಡ್ಡಮ್ಮ ನಾರಾಯಣಮ್ಮ ಹೇಳಿದ್ದಾರೆ.
ಕೋಲಾರದ ತಮ್ಮ ನಿವಾಸದ ಬಳಿ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಅವರು, ಲಕ್ಷ್ಮೀಗೆ ಯಾರೊ ಏನೋ ಮಾಡಿದ್ದಾರೆ ಆಕೆ ಆತ್ಮಹತ್ಯೆ ಮಾಡಿಕೊಳ್ಳುವುದಿದ್ದರೆ ಮನೆಯಲ್ಲೆ ಮಾಡಿಕೊಳ್ಳುತ್ತಿದ್ದಳು. ಲಕ್ಷ್ಮಿ ಆತ್ಮಹತ್ಯೆ ಮಾಡಿಕೊಳ್ಳುವ ಮಗಳಲ್ಲ, ಆಕೆ ಗಂಡು ಮಗನಂತೆ ಧೈರ್ಯವಂತಳು. ಅದು ಬಿಟ್ಟು ಸ್ನೇಹಿತರ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದು ಅನುಮಾನವಿದೆ ಎಂದು ಅನುಮಾನ ವ್ಯಕ್ತಪಡಿಸಿದ್ರು.
Advertisement
Advertisement
ಪೊಲೀಸ್ ಕೆಲಸಕ್ಕೆ ಸೇರಿದ ಮೇಲೆ ಆಕೆಗೆ ಸ್ವಲ್ಪ ಕೋಪ ಇತ್ತು. ಆದರೆ ಹೀಗೆ ಮಾಡಿಕೊಳ್ಳುವಂತ ಮಗಳಲ್ಲ. ಭಾನುವಾರ ಬರುವುದಾಗಿ ಹೇಳಿದ್ದಳು. ಆದರೆ ಅಷ್ಟರಲ್ಲಿ ಹೀಗಾಗಿದೆ. ಮಕ್ಕಳು ಇಲ್ಲ ಅನ್ನೋ ಕೊರಗುವ ಮಗಳಲ್ಲ ಆಕೆ. ಇನ್ನೂ ಇಲಾಖೆ ಬಡ್ತಿ ವಿಚಾರ ಗೊತ್ತಿಲ್ಲ ಎಂದು ಅವರು ತಿಳಿಸಿದರು. ಇದನ್ನೂ ಓದಿ: ಲಕ್ಷ್ಮಿ ಆತ್ಮಹತ್ಯೆಗೆ ಬಿಗ್ ಟ್ವಿಸ್ಟ್- ಪ್ರಾಣ ಹೋಗೋ ಮುನ್ನ ಕಾರಲ್ಲಿ ಆಸ್ಪತ್ರೆಗೆ ಕರೆತಂದಿದ್ದ ಸ್ನೇಹಿತರು!
Advertisement
Advertisement
ಲಕ್ಷ್ಮಿ ಅವರು ಕಳೆದ 8 ವರ್ಷದ ಹಿಂದೆ ಪೋಷಕರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ಪೋಷಕರಿಂದ ದೂರ ಇದ್ದ ಲಕ್ಷ್ಮೀ, ಬೆಂಗಳೂರಿನಲ್ಲಿ ವಾಸವಾಗಿದ್ದರು. ನಿನ್ನೆ ಮನೋಹರ್ ಮನೆಯಲ್ಲಿ ಲಕ್ಷ್ಮಿ ಸೇರಿ ಐವರು ಸೇರಿ ಪಾರ್ಟಿ ಮಾಡಿದ್ರು. ಪಾರ್ಟಿ ನಂತರ 10 ಗಂಟೆಗೆ ರೂಂಗೆ ತೆರಳಿದ್ದ ಲಕ್ಷ್ಮಿ ಇಂದು ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸದ್ಯ ಲಕ್ಷ್ಮಿ ಆತ್ಮಹತ್ಯೆಯ ಹಿಂದೆ ಅನುಮಾನಗಳು ಹುಟ್ಟಿಕೊಂಡಿದ್ದು, ಮನೋಹರ್, ಪ್ರಜ್ವಲ್ ಸೇರಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
https://www.youtube.com/watch?v=EYEpW8uZsx8&ab_channel=PublicTV%7C%E0%B2%AA%E0%B2%AC%E0%B3%8D%E0%B2%B2%E0%B2%BF%E0%B2%95%E0%B3%8D%E0%B2%9F%E0%B2%BF%E0%B2%B5%E0%B2%BF