ಹುಬ್ಬಳ್ಳಿ: ಅಮ್ಮನ ಕೈ ತುತ್ತು ತಿಂದು ಆಟವಾಡಲು ಹೋಗಿ ಮಗುವೊಂದು ನಾಲೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ಹುಬ್ಬಳ್ಳಿಯ ಪ್ರಿಯದರ್ಶಿನಿ ಕಾಲೋನಿಯ ಬಳಿ ನಡೆದಿದೆ.
ಎರಡು ವರ್ಷದ ಶ್ರೀಜೀತ ನವಲೇಕರ್ ಘಟನೆಯಲ್ಲಿ ಸಾವನ್ನಪ್ಪಿದ ಮಗುವಾಗಿದೆ. ತಾಯಿ ಊಟ ಮಾಡಿಸುತ್ತಿರುವ ಸಂದರ್ಭದಲ್ಲಿ ಊಟ ಖಾಲಿಯಾಗಿದ್ದು, ತಾಯಿ ಊಟ ತರಲು ಒಳಗೆ ಹೋದ ಸಂದರ್ಭದಲ್ಲಿ ಮಗು ನಾಲೆಗೆ ಬಿದ್ದು ಸಾವನ್ನಪ್ಪಿದೆ. ಸ್ಥಳೀಯರು ಮಗುವಿನ ಶವ ಶೋಧ ಕಾರ್ಯ ನಡೆಸಿ ಮಗುವಿನ ಮೃತ ದೇಹ ಪತ್ತೆ ಮಾಡಿದ್ದಾರೆ.
Advertisement
ಮಗುವಿನ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಹುಬ್ಬಳ್ಳಿಯ ಗೋಕುಲ್ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.