ಹಾವೇರಿ: ಜಿಲ್ಲೆಯ ರಾಣೇಬೆನ್ನೂರಿನಲ್ಲಿ ಸಾಂಗತ್ಯ ವೇದಿಕೆಯ ಮೂಲಕ ಮಕ್ಕಳಲ್ಲಿನ ಸೃಜನಾತ್ಮಕತೆಯನ್ನು ಗುರುತಿಸುವ ನಿಟ್ಟಿನಲ್ಲಿ ಮಕ್ಕಳಿಗಾಗಿ ಆಟ-ಗೀಚಾಟ ಮಕ್ಕಳ ಚಿತ್ರಕಲಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು.
ಮಾಲಿನ್ಯದ ವಿರುದ್ಧ ಹೋರಾಟ ಮತ್ತು ಬದುಕು ವಿಷಯದಡಿ ಮಕ್ಕಳು ಚಿತ್ರ ರಚಿಸಿದ್ದರು. ಉತ್ತಮವಾಗಿ ರಚಿಸಿದ ಮಕ್ಕಳಿಗಾಗಿ ಅಭಿನಂದನಾ ಸಮಾರಂಭ ಹಾಗೂ ಚಿತ್ರಕಲಾ ಪ್ರಾತ್ಯೆಕ್ಷಿಕೆ ನಡೆಸಲಾಯಿತು.
Advertisement
Advertisement
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ನಗರದ ಟ್ಯಾಗೋರ್ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ವೀರೇಶ್ ಹನಗೋಡಿಮಠ ಮಾತನಾಡಿ, ನಮ್ಮ ಸಮಾಜದ ಪ್ರತಿಯೊಂದು ಮಕ್ಕಳು ಚಿತ್ರಕಲೆಯ ಮೂಲಕ ಹೊರಜಗತ್ತಿನೊಂದಿಗೆ ಸಂವಾದಿಸುತ್ತವೆ. ಪ್ರತಿ ಮಗುವಿನಲ್ಲೂ ಕಲಾಜ್ಞಾನ ಇದ್ದೇ ಇರುತ್ತದೆ. ಆ ಜ್ಞಾನವನ್ನು ನಾವು ಅರಿತು ಅವರಿಗೆ ಕಲಾಶಿಕ್ಷಣ ಕೊಡಬೇಕು. ಮಕ್ಕಳಲ್ಲಿ ಈ ಎಲ್ಲಾ ಬೆಳವಣಿಗೆಗಳ ಸಾಮಥ್ರ್ಯವನ್ನು ಬೆಳೆಸುವ ಮನಸ್ಸು ಮಾಡಿದರೆ ಮಕ್ಕಳಲ್ಲಿ ಏನೆಲ್ಲಾ ಕ್ರಿಯಾಶೀಲತೆಯನ್ನು ತುಂಬಬಹುದು ಎನ್ನುವುದಕ್ಕೆ ಈ ಆಟ ಗೀಚಾಟವೇ ಸಾಕ್ಷಿಯಾಗುತ್ತದೆ. ಚಿತ್ರಗಳ ಮೂಲಕ ಸಾಮಾಜಿಕ ಜಾಗೃತಿ ಮೂಡಿಸುತ್ತಿರುವುದು ಒಂದು ಪರಿಣಾಮಕಾರಿ ಮಾಧ್ಯಮವಾಗಿದೆ. ಮಕ್ಕಳ ಶಿಕ್ಷಣದಲ್ಲಿ ಚಿತ್ರಕಲೆಯೇ ಮಹತ್ವವಾಗಿದ್ದು, ಚಿತ್ರಕಲೆ ಒಂದು ವಿಶ್ವ ಭಾಷೆಯಾಗಿದೆ. ನಮ್ಮ ನಿತ್ಯ ಜೀವನದಲ್ಲಿ ಪ್ರತಿಯೊಂದು ವಿಷಯಗಳಲ್ಲಿ ಕಲೆಯ ಪ್ರಭಾವ ಇದ್ದೇ ಇರುತ್ತದೆ ಎಂದು ಮಕ್ಕಳನ್ನು ಉದ್ದೇಶಿಸಿ ಮಾತನಾಡಿದರು.
Advertisement
Advertisement
ಚಿತ್ರಕಲಾ ಸ್ಪರ್ಧೆಯಲ್ಲಿ ಉತ್ತಮವಾಗಿ ಚಿತ್ರ ರಚಿಸಿದ ತನಿಷ್ಕಾ ಎಸ್. ಕುಬಸದ, ಸಂಜನಾ.ಪಿ.ಸಿ, ಖುಷಿ ಉಜ್ಜಪ್ಪನಳ್ಳಿ, ಸುನಿಧಿ ಗುಡ್ಡದ, ಕೆ. ರಾಜನಂದಿನಿ, ನಮನಾ ಸಿ.ಮಾಳಿಗೇರ, ಸಮರ್ಥ.ಪಿ.ಸಿ, ವರ್ಷಿಣಿ.ಎ.ಎಮ್, ಮದಿಹಾ ಖಾಜಿ, ನಿಹಾಲ್ ಬಣಕಾರ ಇವರುಗಳಿಗೆ ಪುರಸ್ಕಾರ ನೀಡಲಾಯಿತು.
ಈ ಸಂದರ್ಭದಲ್ಲಿ ದೇವರಾಜ ಹುಣಸಿಕಟ್ಟಿ, ಸವಿತಾ ಮಲ್ಲಾಡದ, ಸುಮಂಗಲಾ ಹೊಸಳ್ಳಿ, ಡಾ.ವೆಂಕಟೇಶ.ಹೆಚ್ ಹಾಗೂ ಪಾಲಕರು ಉಪಸ್ಥಿತರಿದ್ದರು. ಕು.ಸೌಜನ್ಯ ಹೊಸಳ್ಳಿ ಪ್ರಾರ್ಥಿಸಿದರು. ಕು.ಪಂಕಜ್ ಕಾಗದಗಾರ ವಂದಿಸಿದರು. ಕು.ಕುಶಾಲ್ ಕಾಗದಗಾರ ಸ್ವಾಗತಿಸಿದರು.