ಪಣಜಿ: ಆಕ್ಸಿಜನ್ ಕೊರತೆಯಿಂದಾಗಿ ಕಳೆದ ನಾಲ್ಕು ದಿನಗಳಲ್ಲಿ ಗೋವಾದ ಕೋವಿಡ್ ಮೆಡಿಕಲ್ ಕಾಲೇಜ್ ಮತ್ತು ಆಸ್ಪತ್ರೆಯಲ್ಲಿ 74 ಮಂದಿ ರೋಗಿಗಳು ಸಾವನ್ನಪ್ಪಿರುವ ಘಟನೆ ನಡೆದಿರುವುದಾಗಿ ವರದಿ ತಿಳಿಸಿದೆ.
Our Govt has decided to consider workers employed in Pharmaceuticals/medicine supply chain from production to retailing as frontline #COVID healthcare warriors. Divyangs/differently abled people with disability cards to also be considered for priority vaccination: Goa CM P Sawant pic.twitter.com/e5gULrRcEh
— ANI (@ANI) May 14, 2021
Advertisement
13 ಮಂದಿ ಶುಕ್ರವಾರ(ಮೇ 14) ಸಾವನ್ನಪ್ಪಿದ್ದರು ಎಂದು ಮಾಜಿ ಉಪಮುಖ್ಯಮಂತ್ರಿ ವಿಜಯ್ ಸರ್ದೇಸಾಯಿ ತಿಳಿಸಿದ್ದಾರೆ. ಗುರುವಾರ ಬೆಳಗ್ಗೆ 15 ಮಂದಿ ಸಾವನ್ನಪ್ಪಿದ್ದರು. ಬುಧವಾರ 20 ಮಂದಿ ಹಾಗೂ ಮಂಗಳವಾರ 2ರಿಂದ 6ಗಂಟೆಯ ನಡುವೆ 26 ಮಂದಿ ತಮ್ಮ ಪ್ರಾಣ ಕಳೆದುಕೊಂಡಿರುವುದಾಗಿ ವರದಿ ವಿವರಿಸಿದೆ.
Advertisement
Goa | 15 #COVID19 patients died b/w 2-6 am on Thursday allegedly due to oxygen shortage at Goa Medical College & Hospital
“Every day 20-25 people are dying due to oxygen shortage here. My friend died at 45. There is no proper planning by govt,” says a friend of one of deceased pic.twitter.com/z7OwbnnsmL
— ANI (@ANI) May 14, 2021
Advertisement
ಆಸ್ಪತ್ರೆಗೆ ಭೇಟಿ ನೀಡಿರುವ ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್, ಮೆಡಿಕಲ್ ಆಕ್ಸಿಜನ್ ಲಭ್ಯತೆಯ ಕೊರತೆಯಿಂದ ಈ ದುರ್ಘಟನೆ ನಡೆದಿದೆ ಎಂದು ಸುದ್ದಿಗಾರರ ಜತೆ ಮಾತನಾಡುತ್ತ ತಿಳಿಸಿದ್ದಾರೆ. ರಾಜ್ಯದಲ್ಲಿ ಆಕ್ಸಿಜನ್ ಸರಬರಾಜು ಕೊರತೆ ಇಲ್ಲ ಎಂಬುದಾಗಿ ಸಾವಂತ್ ಸಮಜಾಯಿಷಿ ನೀಡಿದ್ದಾರೆ. ಪಿಟಿಐ ನ್ಯೂಸ್ ಏಜೆನ್ಸಿ ವರದಿ ಪ್ರಕಾರ, ಮೇ 1ರಿಂದ 10ರವರೆಗೆ ರಾಜ್ಯವು ಮಹಾರಾಷ್ಟ್ರದ ಕೊಲ್ಹಾಪುರದಿಂದ ನಿಗದಿಪಡಿಸಿದ್ದ 110 ಮೆಟ್ರಿಕ್ ಟನ್ಗಳಲ್ಲಿ ಕೇವಲ 66.74 ಮೆಟ್ರಿಕ್ ಟನ್ ಮೆಡಿಕಲ್ ಆಕ್ಸಿಜನ್ ಪಡೆದಿರುವುದಾಗಿ ಕೇಂದ್ರಕ್ಕೆ ಬರೆದ ಪತ್ರದಲ್ಲಿ ತಿಳಿಸಿದೆ.