ಸ್ಯಾಂಡಲ್ವುಡ್ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾ ಬಿಡುಗಡೆಗೆ ಕೆಲವೇ ಕೆಲವು ದಿನಗಳು ಬಾಕಿ ಇದೆ. ಬಿಡುಗಡೆ ಹಂತದಲ್ಲಿರುವ ‘ಪೊಗರು’ ಚಿತ್ರದ ಹವಾ ಜೋರಾಗಿದೆ. ಡೈಲಾಗ್ ಟ್ರೇಲರ್ ಹಾಗೂ ಕರಾಬು ಹಾಡು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಮಟ್ಟದ ಮ್ಯಾಜಿಕ್ ಕ್ರಿಯೇಟ್ ಮಾಡಿದ್ದು ಎಲ್ಲೆಡೆ ಸಿಕ್ಕಾಪಟ್ಟೆ ವೈರಲ್ ಆಗಿದೆ. ಧ್ರುವ ಅಭಿಮಾನಿ ಬಳಗ ಸಿನಿಮಾ ಬಿಡುಗಡೆಯ ಸಂಭ್ರಮಕ್ಕೆ ಎಲ್ಲಾ ಸಿದ್ದತೆಯಲ್ಲಿದ್ದು, ಇದೇ ಸಂದರ್ಭದಲ್ಲಿ ಚಿತ್ರಕ್ಕೆ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಸಿಕ್ಕಿದೆ. ಧ್ರುವ ಸರ್ಜಾ ಟ್ವೀಟ್ ಮಾಡುವ ಮೂಲಕ ಚಿತ್ರಕ್ಕೆ ಯು/ಎ ಸರ್ಟಿಫಿಕೇಟ್ ಸಿಕ್ಕಿರುವ ಸಂತಸವನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಕುಟುಂಬ ಸಮೇತರಾಗಿ ಪೊಗರು ಸಿನಿಮಾ ನೋಡಿ ಎಂದೂ ಕೇಳಿಕೊಂಡಿದ್ದಾರೆ ಆಕ್ಷನ್ ಪ್ರಿನ್ಸ್.
Advertisement
ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳಿನಲ್ಲಿ ಆಕ್ಷನ್ ಪ್ರಿನ್ಸ್ ‘ಪೊಗರು’ ಬಿಡುಗಡೆಯಾಗುತ್ತಿದ್ದು, ತಮಿಳಿನಲ್ಲಿ ಪ್ರಚಾರ ಕಾರ್ಯ ಮುಗಿಸಿರೋ ಚಿತ್ರತಂಡ ಹೈದ್ರಾಬಾದ್?ನತ್ತ ಮುಖ ಮಾಡಿದೆ. ಅಲ್ಲಿ ಪ್ರಚಾರ ಮುಗಿಯುತ್ತಿದ್ದಂತೆ ಫೆಬ್ರವರಿ 14ರ ಪ್ರೇಮಿಗಳ ದಿನದಂದು ಚಿತ್ರದ ಆಡಿಯೋ ಬಿಡುಗಡೆ ಕಾರ್ಯಕ್ರಮ ನಡೆಸಲಿದೆ. ದಾವಣಗೆರೆಯ ಸರ್ಕಾರಿ ಹೈಸ್ಕೂಲ್ ಗ್ರೌಂಡ್ ನಲ್ಲಿ ನಡೆಯುವ ಅದ್ದೂರಿ ಆಡಿಯೋ ಬಿಡುಗಡೆ ಕಾರ್ಯಕ್ರಮದಲ್ಲಿ ಇನ್ನಷ್ಟು ಸರ್ಪ್ರೈಸ್ ಅಭಿಮಾನಿಗಳಿಗೆ ನೀಡಲು ನಿರ್ಧರಿಸಿದೆ ಪೊಗರು ಚಿತ್ರತಂಡ.
Advertisement
Advertisement
ನಂದಕಿಶೋರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಪೊಗರು’ ಚಿತ್ರದಲ್ಲಿ ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಗಳಿಸಿದ ಕುಸ್ತಿಪಟುಗಳು ಧ್ರುವ ಎದುರು ಸೆಣಸಾಡಲಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಆಕ್ಷನ್ ಪ್ರಿನ್ಸ್ ಗೆ ನಾಯಕಿಯಾಗಿ ಚಿತ್ರದಲ್ಲಿ ಮಿಂಚಿದ್ದಾರೆ. ಚಿತ್ರದಲ್ಲಿನ ಧ್ರುವ ಲುಕ್, ಮ್ಯಾನರಿಸಂ ಸರ್ಜಾ ಅಭಿಮಾನಿ ಬಳಗಕ್ಕೆ ಸಖತ್ ಥ್ರಿಲ್ಲ್ ನೀಡಿದ್ದು ಸಿನಿಮಾ ಬಿಡುಗಡೆಯಾಗುವುದನ್ನೇ ಎದುರು ನೋಡುತ್ತಿದ್ದಾರೆ. ‘ಪೊಗರು’ ಚಿತ್ರವನ್ನು ಬಿ.ಕೆ ಗಂಗಾಧರ್ ನಿರ್ಮಾಣ ಮಾಡಿದ್ದು ಕೆ.ವಿ.ಎನ್ ಪ್ರೊಡಕ್ಷನ್ಸ್ ಸಂಸ್ಥೆಯಡಿ ಸಿನಿಮಾ ಫೆಬ್ರವರಿ 19ಕ್ಕೆ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.