ನವದೆಹಲಿ: ಅದು 2017ರ ಅಗಸ್ಟ್ ತಿಂಗಳು, ಗುಜರಾತ್ನಲ್ಲಿ ನಡೆಯುತ್ತಿದ್ದ ರಾಜ್ಯಸಭೆ ಚುನಾವಣೆಯೊಂದು ಕರ್ನಾಟಕದಲ್ಲಿ ಹೆಚ್ಚು ಸದ್ದು ಮಾಡುತ್ತಿತ್ತು. ಅದಕ್ಕೆ ಕಾರಣ ಆಪರೇಷನ್ ಕಮಲದ ಭೀತಿ.
Advertisement
2017ರಲ್ಲಿ ರಾಜ್ಯಸಭೆಯ ಮೂರು ಸ್ಥಾನಗಳಿಗೆ ನಡೆದ ಚುನಾವಣೆ ಇಡೀ ದೇಶದಲ್ಲಿ ದೊಡ್ಡ ಹೈಪ್ ಕ್ರಿಯೇಟ್ ಮಾಡಿತ್ತು. ಬಿಜೆಪಿ ಎರಡು, ಕಾಂಗ್ರೆಸ್ ಒಂದು ಸ್ಥಾನ ಖಚಿತ ಅಂತಾ ಲೆಕ್ಕಚಾರವೂ ನಡೆದಿತ್ತು. ಆದರೆ ಹೀಗೆ ಲೆಕ್ಕಚಾರ ಹಾಕಿಕೊಂಡವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಬಿಗ್ ಶಾಕ್ ನೀಡಿದ್ದರು.
Advertisement
Advertisement
ಈ ಚುನಾವಣೆಗೆ ಕಾಂಗ್ರೆಸ್ ನಿಂದ ಸೋನಿಯಾ ಗಾಂಧಿ ಆಪ್ತ ಅಹ್ಮದ್ ಪಟೇಲ್, ಬಿಜೆಪಿಯಿಂದ ಅಮಿತ್ ಶಾ ಮತ್ತು ಸ್ಮೃತಿ ಇರಾನಿ ಸ್ಪರ್ಧಿಸಿದ್ದರು. ಅಹ್ಮದ್ ಪಟೇಲ್ ಸ್ಪರ್ಧೆ ಬಳಿಕ ಅವರನ್ನು ಸೋಲಿಸುವ ಜಿದ್ದಿಗೆ ಬಿದ್ದಿದ್ದ ಅಮಿತ್ ಶಾ ಬಿಜೆಪಿಯಿಂದ ಮೂರನೇ ಅಭ್ಯರ್ಥಿಯಾಗಿ ಕಾಂಗ್ರೆಸ್ ಬಂಡಾಯ ಶಾಸಕ ಬಲ್ವಂತ್ ಸಿಂಗ್ ರಜಪೂತ್ ಅವರನ್ನ ಕಣಕ್ಕಿಳಿಸಿದ್ದರು.
Advertisement
ಆಗಲೇ ಗುಜರಾತ್ ನಲ್ಲಿ ಆಪರೇಷನ್ ಕಮಲದ ಭೀತಿ ಸೃಷ್ಟಿಯಾಗಿದ್ದು. ರಾಜಕೀಯ ಬೆಳವಣಿಗೆ ಬೆನ್ನಲ್ಲೇ ಕಾಂಗ್ರೆಸ್ ಹಿರಿಯ ನಾಯಕ ಶಂಕರ್ ಸಿನ್ಹಾ ವಘೇಲಾ ತಂಡದ ಏಳು ಮಂದಿ ಶಾಸಕರ ರಾಜೀನಾಮೆಯಿಂದ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ ಸೃಷ್ಟಿಯಾಗಿ ರಾಜ್ಯಸಭೆ ಚುನಾವಣೆ ಅಹ್ಮದ್ ಪಟೇಲ್ ವರ್ಸಸ್ ಅಮಿತ್ ಶಾ ಎನ್ನುವಂತೆ ಬಿಂಬಿತವಾಗಿತ್ತು.
ಬಿಜೆಪಿ ವಿಧಾನಸಭೆಯಲ್ಲಿ 121 ಶಾಸಕರನ್ನು ಹೊಂದಿದ್ದ ಹಿನ್ನೆಲೆ ಅಮಿತ್ ಶಾ, ಸ್ಮೃತಿ ಇರಾನಿ ಗೆಲುವು ಖಚಿತವಾಗಿತ್ತು. ಮತ್ತೊರ್ವ ಅಭ್ಯರ್ಥಿ ಬಲ್ವಂತ್ ಸಿಂಗ್ ರಜಪೂತ್ ಗೆ 31 ಮತಗಳು ಮಾತ್ರ ಇದ್ದವು. ಮೂರನೇ ಅಭ್ಯರ್ಥಿ ಗೆಲವುಗೆ ಒಟ್ಟು 45 ಮತಗಳ ಅವಶ್ಯಕತೆ ಇತ್ತು.
ಅಹ್ಮದ್ ಪಟೇಲ್ ಪರ ಕಾಂಗ್ರೆಸ್ ಶಾಸಕರು 44 ಮಂದಿ ಇದ್ದರು ಎನ್ಸಿಪಿ ಆಗ ಬೆಂಬಲ ನೀಡಿತ್ತು. ಆದರೆ ನಿರ್ಣಾಯಕ ಚುನಾವಣೆಯಲ್ಲಿ ಶಾಸಕರನ್ನು ಆಪರೇಷನ್ ಕಮಲದ ಆಮಿಷ್ಯಕ್ಕೆ ಒಳಪಡಿಸುವ ಭೀತಿ ಹಿನ್ನೆಲೆ ಈ ಎಲ್ಲ ಶಾಸಕರನ್ನು ಕರ್ನಾಟಕಕ್ಕೆ ಶಿಫ್ಟ್ ಮಾಡಲಾಗಿತ್ತು.
ಸಚಿವರಾಗಿದ್ದ ಡಿ.ಕೆ ಶಿವಕುಮಾರ್ ತಮ್ಮ ಗುರುವಿನ ಗೆಲುವಿಗಾಗಿ ಅಮಿತ್ ಶಾ ಎದುರು ಹಾಕಿಕೊಂಡು ಕಾಂಗ್ರೆಸ್ ನ 44 ಶಾಸಕರನ್ನ ಖಾಸಗಿ ರೆಸಾರ್ಟ್ ನಲ್ಲಿ ಇಟ್ಟು ಭದ್ರತೆ ನೀಡಿದ್ದರು. ಬಿಡದಿಯ ಈಗಲ್ ಟನ್ ರೆಸಾರ್ಟ್ ನಲ್ಲಿ ಶಾಸಕರು ತಂಗಿದ್ದರು. ಸ್ವತಃ ಅಮಿತ್ ಶಾ ಕರೆ ಮಾಡಿ ಡಿ.ಕೆ ಶಿವಕುಮಾರ್ ಗೆ ಕೆಲ ಶಾಸಕರನ್ನ ಕಳುಹಿಸುವಂತೆ ಕೇಳಿದ್ದರಂತೆ. ಆದರೆ ಪಟ್ಟು ಬಿಡದ ಡಿಕೆಶಿ ಶಾಸಕರನ್ನು ಮತ್ತೆ ಭದ್ರತೆಯಲ್ಲಿ ಗುಜರಾತ್ ಗೆ ಕಳುಹಿಸಿ ಅಹ್ಮದ್ ಪಟೇಲ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು.
ಹೀಗಾಗಿ ಅಹ್ಮದ್ ಪಟೇಲ್ ಕೊನೆ ಚುನಾವಣೆ ಗೆಲುವಿನಲ್ಲಿ ಕರ್ನಾಟಕ ಅದರಲ್ಲೂ ಡಿ.ಕೆ ಶಿವಕುಮಾರ್ ಮಹತ್ವ ಪಡೆದುಕೊಂಡಿದ್ದರು. ರಾಜ್ಯಸಭೆ ಚುನಾವಣೆ ಬಳಿಕ ಪಬ್ಲಿಕ್ ಟಿವಿಗೆ ಎಕ್ಸಕ್ಲೂಸಿವ್ ಆಗಿ ಅಹ್ಮದ್ ಪಟೇಲ್ ಮಾತನಾಡಿದ್ದರು. ಈ ಚುನಾವಣೆಯಿಂದ ಕಾಂಗ್ರೆಸ್ ಗೆ ಲಾಭವಾಗಲಿದೆ. ಈ ಚುನಾವಣೆಯಲ್ಲಿ ವಿರೋಧ ಪಕ್ಷಗಳ ಮುಖವಾಡ ಕಳಚಿದೆ. ಮುಂದಿನ ಚುನಾವಣೆಗಳಲ್ಲಿ ಕಾಂಗ್ರೆಸ್ ಗೆ ಲಾಭವಾಗಲಿದೆ. ಡಿ.ಕೆ.ಶಿವಕುಮಾರ್ ನಿವಾಸದ ಮೇಲೆ ಐಟಿ ದಾಳಿ ಮೂಲಕ ಬಿಜೆಪಿ ನಮ್ಮನ್ನು ಬೆದರಿಸುವ ಪ್ರಯತ್ನ ಮಾಡಿತ್ತು ಎಂದಿದ್ದರು.
ಅಹ್ಮದ್ ಪಟೇಲ್ ವಿಧಿವಶ – ಮೋದಿ, ರಾಹುಲ್ ಗಾಂಧಿ ಸಂತಾಪhttps://t.co/mPsdqx7YfD#PMModi #AhmedPatel #RahulGandhi #Congress #KannadaNews
— PublicTV (@publictvnews) November 25, 2020