ಧಾರವಾಡ: ಗುಜರಾತಿನ ಅಹಮದಾಬಾದಿನಿಂದ ಜಿಲ್ಲೆಗೆ ಆಗಮಿಸಿ ಕೊರೊನಾ ಪಾಸಿಟಿವ್ ದೃಢಪಟ್ಟಿರುವ 09 ಮಂದಿಯ ಪ್ರಯಾಣ ಮಾಹಿತಿಯನ್ನು ಜಿಲ್ಲಾಧಿಕಾರಿ ದೀಪಾ ಚೋಳನ್ ಸಾರ್ವಜನಿಕ ತಿಳುವಳಿಕೆಗಾಗಿ ಪ್ರಕಟಿಸಿದ್ದಾರೆ.
ಪಿ- 879, ಪಿ-880, ಪಿ-881, ಪಿ-882, ಪಿ-883, ಪಿ-884, ಪಿ-885, ಪಿ-886, ಪಿ-887 ರವರು ಕೊರೊನಾ ಸೋಂಕಿತರಾಗಿದ್ದಾರೆ. ಹುಬ್ಬಳ್ಳಿ ನಗರದ 06, ಕುಂದಗೋಳದ ಇಬ್ಬರು ಮತ್ತು ಕಲಘಟಗಿಯ ಒಬ್ಬರು ಸೇರಿ ಧಾರವಾಡ ಜಿಲ್ಲೆಯ ಒಟ್ಟು 9 ಜನ ಹಾಗೂ ಗದಗ ಜಿಲ್ಲೆಯ ನರಗುಂದ ತಾಲೂಕಿನ 2 ಜನ ಸೇರಿಕೊಂಡು ಅಹಮದಾಬಾದ್ನ ಸರಕೆಜ್ ಹಾಲಿ ಮಹಮದ್ ಮಸೀದಿಯಿಂದ ಮೇ 5ರ ಬೆಳಿಗ್ಗೆ 7 ಗಂಟೆಗೆ ಸ್ಥಳೀಯ ಸ್ವಯಂ ಸೇವಾ ಸಂಸ್ಥೆಯವರು ವ್ಯವಸ್ಥೆ ಮಾಡಿದ ಜಿಜೆ 01 – ಬಿಯು 9986 ಸಂಖ್ಯೆಯ ವಾಹನದ ಮೂಲಕ ಹೊರಟು ಮುಂಬೈ ಮೂಲಕ ಮೇ.5 ರಂದು ಸಾಯಂಕಾಲ 07 ಗಂಟೆಗೆ ನಿಪ್ಪಾಣಿಗೆ ತಲುಪಿದ್ದರು.
Advertisement
Advertisement
ಕರ್ನಾಟಕ ರಾಜ್ಯವನ್ನು ಪ್ರವೇಶ ಮಾಡಲು ಸರ್ಕಾರದಿಂದ ಅನುಮತಿ ಸಿಗುವವರೆಗೂ 3 ದಿವಸಗಳ ಕಾಲ ಚೆಕ್ಪೋಸ್ಟಿನಲ್ಲಿ ವಾಸ್ತವ್ಯ ಮಾಡಿದ್ದರು. ನಂತರ ಮೇ.8 ರಂದು ಸಾಯಂಕಾಲ 5 ಗಂಟೆಗೆ ಸ್ಥಳೀಯರು ವ್ಯವಸ್ಥೆ ಮಾಡಿದ ಕೆಎ 09 – ಸಿ 2579 ಸಂಖ್ಯೆಯ ಟಾಟಾ 407 ಮ್ಯಾಕ್ಸಿ ಕ್ಯಾಬ್ ವಾಹನದ ಮುಖಾಂತರ ನಿಪ್ಪಾಣಿಯಿಂದ ಧಾರವಾಡ ಕೃಷಿ ವಿ.ವಿ.ಆವರಣಕ್ಕೆ ರಾತ್ರಿ 8.30 ಗಂಟೆಗೆ ಆಗಮಿಸಿದ್ದರು.
Advertisement
ಅಂದು ಅವರನ್ನು ಕ್ವಾರಂಟೈನ್ ಮಾಡಿ, ಗಂಟಲು ದ್ರವ ಪರೀಕ್ಷೆಗೊಳಪಡಿಸಲಾಗಿತ್ತು. ಮೇ.12 ರಂದು 9 ಜನರಿಗೆ ಕೋವಿಡ್ 19 ಪಾಸಿಟಿವ್ ವರದಿ ಬಂದಿರುವ ಕಾರಣ ಈ ಎಲ್ಲಾ ಜನರನ್ನು ಹುಬ್ಬಳ್ಳಿಯ ಕಿಮ್ಸ್ ಕೋವಿಡ್ ಹಾಸ್ಪಿಟಲ್ಗೆ ಸ್ಥಳಾಂತರಿಸಲಾಗಿದೆ.