ಮುಂಬೈ: ಭಾರತ ತಂಡದ ಸ್ಸಿನ್ನರ್ ಆರ್ ಅಶ್ವಿನ್ ಐಸಿಸಿಯ ಫೆಬ್ರವರಿ ತಿಂಗಳ ಕ್ರಿಕೆಟಿಗ ಪ್ರಶಸ್ತಿಯನ್ನು ಪಡೆಯುವ ಮೂಲಕ ಭಾರತ ಕ್ರಿಕೆಟ್ ತಂಡಕ್ಕೆ ಮತ್ತೊಂದು ಪ್ರಶಸ್ತಿಯ ಗರಿ ತೊಡಿಸಿದ್ದಾರೆ.
Advertisement
ಭಾರತಕ್ಕೆ ಈ ಮೊದಲು ಜನವರಿ ತಿಂಗಳಲ್ಲಿ ರಿಷಬ್ ಪಂತ್ ಅವರಿಂದ ಐಸಿಸಿಯ ತಿಂಗಳ ಪ್ರಶಸ್ತಿಯ ಗರಿ ಒಲಿದಿತ್ತು. ಇದೀಗ ಆರ್ ಅಶ್ವಿನ್ ತಿಂಗಳ ಕ್ರಿಕೆಟಿಗನಾಗಿ ಹೊರಹೊಮ್ಮುವ ಮೂಲಕ ಭಾರತಕ್ಕೆ ಸತತ ಎರಡನೇ ತಿಂಗಳ ಪ್ರಶಸ್ತಿ ಒಲಿದಂತಾಗಿದೆ.
Advertisement
Advertisement
ಆರ್ ಅಶ್ವಿನ್ ಭಾರತ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯಲ್ಲಿ ಒಟ್ಟು 32 ವಿಕೆಟ್ ಮತ್ತು 189 ರನ್ ಹೊಡೆಯುವ ಮೂಲಕ ಭಾರತ 3-1 ಅಂತರದಲ್ಲಿ ಸರಣಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
Advertisement
24 wickets in February ????
A match-defining hundred vs England ????
ICC Men's Player of the Month ✅
Congratulations, @ashwinravi99! pic.twitter.com/FXFYyzirzK
— ICC (@ICC) March 9, 2021
ಅಶ್ವಿನ್ ಫೆಬ್ರವರಿ ತಿಂಗಳಲ್ಲಿ ಬೌಲಿಂಗ್ ನಲ್ಲಿ ಒಟ್ಟು 24 ವಿಕೆಟ್ ಮತ್ತು ಬ್ಯಾಟಿಂಗ್ನಲ್ಲಿ ಒಟ್ಟು 176 ರನ್ ಸಿಡಿಸಿದ್ದರು. ಇಂಗ್ಲೆಂಡ್ ವಿರುದ್ಧದ ಚೆನ್ನೈನಲ್ಲಿ ನಡೆದ 2 ಟೆಸ್ಟ್ನ ಎರಡನೇ ಇನ್ನಿಂಗ್ಸ್ ನಲ್ಲಿ ಶತಕ ಸಿಡಿಸಿ ಮಿಂಚಿದರೆ ನಾಲ್ಕನೇ ಟೆಸ್ಟ್ನ ಎರಡನೇ ಇನ್ನಿಂಗ್ಸ್ ನಲ್ಲಿ 5 ವಿಕೆಟ್ ಕಬಳಿಸುವ ಮೂಲಕ ಭಾರತದ ಪರ 30 ಬಾರಿ ಐದು ವಿಕೆಟ್ ಕಬಳಿಸಿದ ಆಟಗಾರನಾಗಿ ಮೂಡಿಬಂದರು. ಇದಲ್ಲದೇ ಟೆಸ್ಟ್ ಕ್ರಿಕೆಟ್ನಲ್ಲಿ ಒಟ್ಟು 400 ವಿಕೆಟ್ ಪಡೆಯುವ ಮೂಲಕ ಅತೀ ವೇಗವಾಗಿ 400 ವಿಕೆಟ್ ಪಡೆದ ಎರಡನೇ ಆಟಗಾರ ಎಂಬ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ವೇಗವಾಗಿ 400 ವಿಕೆಟ್ ಪಡೆದ ಮೊದಲ ಆಟಗಾರನಾಗಿ ಶ್ರೀಲಂಕಾದ ಮುತ್ತಯ್ಯ ಮುರುಳಿಧರನ್ ಕಾಣಿಸಿಕೊಂಡಿದ್ದಾರೆ.
ಐಸಿಸಿಯ ಫೆಬ್ರವರಿ ತಿಂಗಳ ಕ್ರಿಕೆಟಿಗರ ಅಂತಿಮ ಪಟ್ಟಿಯಲ್ಲಿ ಆಶ್ವಿನ್ ಅವರೊಂದಿಗೆ ಇಂಗ್ಲೆಂಡ್ ತಂಡದ ನಾಯಕ ಜೋ ರೂಟ್, ವೆಸ್ಟ್ ಇಂಡೀಸ್ ಆಟಗಾರ ಕೈಲ್ ಮೇಯರ್ ಸ್ಪರ್ಧೆಯಲ್ಲಿದ್ದರು. ಆದರೆ ಅಂತಿಮವಾಗಿ ಅಶ್ವಿನ್ ಪ್ರಶಸ್ತಿಗೆ ಪಾತ್ರಗಿದ್ದಾರೆ. ವನಿತ ವಿಭಾಗದಲ್ಲಿ ನ್ಯೂಜಿಲ್ಯಾಂಡ್ ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ ಇಂಗ್ಲೆಂಡ್ನ ಟಾಮಿ ಬ್ಯೂಮಂಟ್ ಐಸಿಸಿಯ ಫೆಬ್ರವರಿ ತಿಂಗಳ ಪ್ರಶಸ್ತಿ ಪಡೆದುಕೊಂಡಿದ್ದಾರೆ.