-ಜಾಗತಿಕ ಮಟ್ಟದಲ್ಲಿ ಇಂಟರ್ ನೆಟ್ ಬಳಕೆದಾರರಿಗೆ ಸಮಸ್ಯೆ
ಬೆಂಗಳೂರು: ಇಂದು ಬೆಳಗ್ಗೆ ಆರು ಗಂಟೆಯಿಂದ ಅರ್ಧಕ್ಕಿಂತ ಹೆಚ್ಚು ಆನ್ಲೈನ್ ವಿಡಿಯೋ ಗೇಮ್ ಗಳ ಲೋಡಿಂಗ್ ಆಗದೇ ಬಳಕೆದಾರರು ತೊಂದರೆ ಅನುಭವಿಸಿದ್ದಾರೆ. ಜೊತೆ ಬಹುತೇಕ ವೆಬ್ಸೈಟ್ ಗಳು ಪಾಸ್ಟ್ ಎರರ್/ಲೋಡಿಂಗ್ ಪ್ರಾಬ್ಲಂ ಫೇಸ್ ಮಾಡಿವೆ.
ಕ್ಲೌಡ್ಫ್ಲೇರ್ ಜಗತ್ತಿನ ಲಕ್ಷಾಂತರ ಇಂಟರ್ ನೆಟ್ ಪೈಸ್ ಜೊತೆ ಕಾರ್ಯನಿರ್ವಹಿಸುತ್ತಿದೆ. ಒಂದು ವೇಳೆ ಕ್ಲೌಡ್ಫ್ಲೇರ್ ನಲ್ಲಿ ಸಮಸ್ಯೆಯುಂಟಾದ್ರೆ ಅದು ನೇರವಾಗಿ ಹಲವು ಸೈಟ್ ಮತ್ತು ಸರ್ವಿಸ್ ಗಳ ಮೇಲೆ ಪರಿಣಾಮ ಬೀರುತ್ತದೆ.
Advertisement
Advertisement
ಆನ್ಲೈನ್ ವಿಡಿಯೋ ಗೇಮ್ ಗಳಾದ ಕಾಲ್ ಆಫ್ ಡ್ಯೂಟಿ ಮಾಡರ್ನ್ ವಾರ್ ಫೇರ್, ವಾರ್ ಝೋನ್, ಜಿಟಿಎ 5, ಲೀಗ್ ಆಫ್ ಲಜೆಂಡ್ಸ್, ಅಪೆಕ್ಸ್ ಲೆಜೆಂಡ್ಸ್, ವಲೊರಂಟ್, ಡೆಸ್ಟಿನಿ 2, ಎಫ್ಐಎಫ್ಎ, ಫಾಲ್ ಗೈಸ್ ಬಳಕೆದಾರರು ಲೋಡಿಂಗ್ ಸಮಸ್ಯೆ ಎದುರಿಸಿದ್ದಾರೆ. ಇನ್ನು ಪಿಎಸ್ಎನ್, ಎಕ್ಸ್ ಬಾಕ್ಸ್ ಲೈವ್ ಆ್ಯಂಡ್ ಸ್ಟೀಮ್ ಇತ್ಯಾದಿ ಸರ್ವಿಸ್ ಗಳ ಕಾನ್ಟ್ ಲೋಡ್/ ಎರರ್ ಸಮಸ್ಯೆ ಎದುರಿಸಿವೆ.
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಕ್ಲೌಡ್ಫ್ಲೇರ್, ಹೆಚ್ಟಿಟಿಪಿ 522, 502, 503 ಎರರ್ ಸಮಸ್ಯೆ ಗಮನಕ್ಕೆ ಬಂದಿದೆ. ಇದು ಎಲ್ಲ ಟ್ರಾನ್ಸಿಟ್ ಪ್ರೈವಡೈರ್ ಡೇಟಾ ಸೆಂಟರ್ ಗಳಲ್ಲಿ ಅಫೆಕ್ಟ್ ಆಗಿದೆ. ಶೀಘ್ರದಲ್ಲಿಯೇ ಸಮಸ್ಯೆ ಬಗೆಹರಿಸಲಾಗುವುದು ಎಂದು ಹೇಳಿದೆ.