ಬಿಗ್ಬಾಸ್ ಮನೆಯ ಎರಡನೇ ಇನ್ನಿಂಗ್ಸ್ ನ 7ನೇ ದಿನ ಅರವಿಂದ್ ಕೆಪಿ ಮತ್ತು ನಿಧಿ ಸುಬ್ಬಯ್ಯ ನಡುವೆ ಭಾರೀ ಮಾತಿನ ಚಕಮಕಿ ನಡೆದಿದೆ.
‘ಥರ ಥರ ಈ ಎತ್ತರ’ ಟಾಸ್ಕ ನ ಮೂರನೇ ಸುತ್ತು ವೇಳೆ ಅರವಿಂದ್ ತರುತ್ತಿದ್ದಾಗ ಟಿಶ್ಯು ರೋಲ್ ಗಾರ್ಡನ್ ಏರಿಯಾದಲ್ಲಿ ಬಿದ್ದಿತ್ತು. ಈ ಟಿಶ್ಯುವನ್ನು ಮಂಜು ಮತ್ತು ನಿಧಿ ಎತ್ತಿದ್ದರು. ಈ ವಿಚಾರದ ಬಗ್ಗೆ ಅರವಿಂದ್ ಅಲ್ಲೇ ಆಕ್ಷೇಪ ವ್ಯಕ್ತಪಡಿಸಿ ಎತ್ತುವಂತಿಲ್ಲ ಎಂದು ಸಿಟ್ಟು ಹೊರಹಾಕಿದರು.
Advertisement
Advertisement
ಈ ಟಾಸ್ಕ್ ಕೊನೆಯಲ್ಲಿ ಫಲಿತಾಂಶಕ್ಕೂ ಮೊದಲು ಸೂರ್ಯಸೇನೆ ಸದಸ್ಯರು ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಅರವಿಂದ್, ಸಂಬರಗಿ, ಚಕ್ರವರ್ತಿ ಚಂದ್ರಚೂಡ್ ಎತ್ತುವಂತಿಲ್ಲ ಎಂದು ಹೇಳಿದರೆ, ದಿವ್ಯಾ ಈ ನಿಯಮದ ಬಗ್ಗೆ ಪುಸ್ತಕದಲ್ಲಿ ಪ್ರಸ್ತಾಪ ಮಾಡಿಲ್ಲ ಎಂದರು. ಕೊನೆಗೆ ಅರವಿಂದ್ “ಥಟ್ ಶೋಸ್ ಕ್ಯಾರೆಕ್ಟರ್” ಎಂದು ಹೇಳಿ 90 ಸೆಕೆಂಡ್ ಒಳಗಡೆ ರಿಂಗ್ ಒಳಗಡೆ ಸದಸ್ಯ ಟಿಶ್ಯು ಇಡಬೇಕು ಎನ್ನುವುದು ನಿಯಮ. ಹೀಗಾಗಿ ಸ್ಟೋರ್ ರೂಮಿಗೆ ಹೋದ ಸದಸ್ಯ ಮಾತ್ರ ಟಿಶ್ಯು ಕೊಡಬೇಕು ವಿನಾ: ಬೇರೆ ಸದಸ್ಯರು ಎತ್ತುವಂತಿಲ್ಲ ಎಂದು ತಮ್ಮ ವಾದವನ್ನು ಸಮರ್ಥಿಸಿಕೊಂಡರು. ಇದನ್ನೂ ಓದಿ: ನಿಧಿ ದೊಡ್ಡ ಫಿಗರ್ ಎಂದರೆ ನಾನು ದೊಡ್ಡ ಫಿಗರೇ
Advertisement
Advertisement
ಈ ಚರ್ಚೆಯನ್ನು ಗಮನಿಸಿದ ನಿಧಿ ಮಂಜು ಬಳಿ ನಮ್ಮ ‘ಕ್ಯಾರೆಕ್ಟರ್’ ಬಗ್ಗೆ ಅರವಿಂದ್ ಮಾತನಾಡಿದ್ದಾನೆ ಎಂದು ದೂರಿದರು. ಸೃಷ್ಟಿಯಾಗಿರುವ ಗೊಂದಲ ಸರಿಪಡಿಸಲು ಅರವಿಂದ್ ಮಂಜು ಜೊತೆ ಮಾತನಾಡಲು ತೆರಳಿದರು. ನಿಯಮದ ಪ್ರಕಾರ ತಂಡದ ಬೇರೆ ಸದಸ್ಯರು ಟಿಶ್ಯುವನ್ನು ಎತ್ತುವಂತಿಲ್ಲ. ಮೊದಲು ನೀವು ಬೀಳಿಸಿದಾಗ ನಮ್ಮ ತಂಡದ ಸದಸ್ಯರು ಎತ್ತಿಲ್ಲ ಎಂದು ಹೇಳಿದರು. ಆದರೆ ಮಂಜು ಎತ್ತಬಹುದು ಎಂದು ಉತ್ತರಿಸಿದರು. ಈ ಸುತ್ತಿನಲ್ಲಿ ಕ್ವಾಟ್ಲೆ ಕಿಲಾಡಿಗಳು ತಂಡ ಜಯವನ್ನು ಗಳಿಸಿತು. ಇದನ್ನೂ ಓದಿ: ಒಂದೇ ಡೈಲಾಗಿನಿಂದ ನಿಧಿ, ದಿವ್ಯಾ, ಮಂಜುಗೆ ತಿವಿದ ಅರವಿಂದ್
ಮುಂದಿನ ಸುತ್ತುಗಳಲ್ಲಿ ಈ ರೀತಿ ಗೊಂದಲ ಆಗದೇ ಇರಲು ಮತ್ತೆ ಅರವಿಂದ್ ಮಂಜು ಜೊತೆ ಮಾತನಾಡುತ್ತಿದ್ದಾಗ ನಿಧಿ ಮಧ್ಯೆ ಮಾತನಾಡಲು ಆರಂಭಿಸಿದರು. ಈ ವೇಳೆ ಅರವಿಂದ್, “ನಾನು ಕ್ಯಾಪ್ಟನ್ ಜೊತೆ ಮಾತನಾಡುತ್ತಿದ್ದೇನೆ. ನೀವು ಸ್ವಲ್ಪ ಮುಚ್ಕೊಳ್ಳಿ” ಎಂದು ನಿಧಿಗೆ ಹೇಳಿದರು.
ಕ್ಯಾರೆಕ್ಟರ್ ವಿಚಾರ ಪ್ರಸ್ತಾಪ ಮಾಡಿದ್ದಕ್ಕೆ ನಿಧಿ ಮೊದಲೇ ಅರವಿಂದ್ ವಿರುದ್ಧ ಸಿಟ್ಟಾಗಿದ್ದರು. ಈಗ ಮತ್ತೆ ಅರವಿಂದ್ ಸಿಟ್ಟಿನಲ್ಲಿ ಪ್ರತಿಕ್ರಿಯಿಸಿದ್ದಕ್ಕೆ ಮತ್ತೆ ಆಕ್ರೋಶಗೊಂಡರು. ಟಾಸ್ಕ್ ಮುಗಿದ ಬಳಿಕ ಅರವಿಂದ್ ನಿಧಿ ಬಳಿ ಹೋದಾಗ,”ನೋ ನೋ ಅರವಿಂದ್. ಮುಚ್ಚೊಂಡು ಹೋಗಿ”ಎಂದಾಗ ಅರವಿಂದ್,”ನೀವು ಮುಚ್ಕೊಂಡು ಇರಿ. ಜಾಸ್ತಿ ಮಾತನಾಡಬೇಡಿ” ಎಂದು ತಿರುಗೇಟು ನೀಡಿದರು. ಇದಕ್ಕೆ ನಿಧಿ,”ಕ್ರೀಡಾ ಸ್ಫೂರ್ತಿ ಇಲ್ಲ. ಪಾರ್ಟಿಸಿಪೇಷನ್ ಮೆಡಲ್ನಲ್ಲಿ ಬಂದಿರೋದು, ಗೆದ್ದು ತೋರಿಸು ಡಾಕರ್ ರ್ಯಾಲಿನ. ಲೂಸರ್ ಗೆಟ್ ಲಾಸ್ಟ್” ಎಂದು ಆಕ್ರೋಶ ಹೊರಹಾಕಿದರು. ಇದಕ್ಕೆ ಅರವಿಂದ್ ನಗುತ್ತಾ ಮುಂದಕ್ಕೆ ಸಾಗಿದರು.
ಕೊನೆಗೆ ಶುಭಾ ಜೊತೆ ಮಾತನಾಡಿದ ಅರವಿಂದ್, ನಾನು ಇಲ್ಲಿಯವರೆಗೂ ಯಾರಿಗೂ ಕೆಟ್ಟ ಉದ್ದೇಶದಲ್ಲಿ ಮಾತನಾಡಿಲ್ಲ. ನಾನು ಹೇಳುವುದನ್ನು ನೇರವಾಗಿ ಹೇಳುತ್ತೇನೆ ಹೊರತು ಹಿಂದೆ ಹೇಳುವುದಿಲ್ಲ. ನಾಯಕರ ಮಧ್ಯೆ ಹೀಟ್ ಡಿಸ್ಕಷನ್ ಆಗಿದ್ದಾಗ ಮಧ್ಯೆ ಮಾತನಾಡಿದ್ದಕ್ಕೆ ನಾನು ಹೇಳಿದ್ದೇನೆ ಹೊರತು ಬೇರೆ ಯಾವುದೇ ಕೆಟ್ಟ ಉದ್ದೇಶ ಇರಲಿಲ್ಲ ಎಂದು ತಾನ್ನ ಹೇಳಿಕೆಯನ್ನು ಸಮರ್ಥಿಸಿಕೊಂಡರು.
ಒಟ್ಟಿನಲ್ಲಿ ಸುದೀಪ್ ನಡೆಸಿಕೊಡು ‘ವಾರದ ಕಥೆ ಕಿಚ್ಚನ ಜೊತೆ’ ಕಾರ್ಯಕ್ರಮದಲ್ಲಿ ಈ ವಿಚಾರ ಚರ್ಚೆಗೆ ಬರುವ ಸಾಧ್ಯತೆಯಿದೆ. ಹೀಗಾಗಿ ಇಲ್ಲಿ ನಿಧಿ, ಅರವಿಂದ್ ಹೇಳಿಕೆಯನ್ನು ನೀಡಲಾಗಿದ್ದು ಇದರಲ್ಲಿ ಯಾರು ಸರಿ? ಯಾರು ತಪ್ಪು? ನಿಮ್ಮ ಅಭಿಪ್ರಾಯವನ್ನು ಕಮೆಂಟ್ ಮಾಡಿ.