ಕ್ಯಾಲಿಫೋರ್ನಿಯಾ: ಐಫೋನ್ ತಯಾರಕಾ, ಜಾಗತಿಕ ಐಟಿ ಕಂಪನಿ ಆಪಲ್ 1.5 ಟ್ರಿಲಿಯನ್(1.5 ಲಕ್ಷ ಕೋಟಿ) ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ ಅಮೆರಿಕದ ಮೊದಲ ಕಂಪನಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಆಪ್ ಸ್ಟೋರ್ ಮಾರಾಟ, ಎಆರ್ಎಂ ಚಿಪ್ ಇರುವ ಮ್ಯಾಕ್ ಮತ್ತು 5ಜಿ ಐಫೋನ್ನಿಂದಾಗಿ ಆಪಲ್ ಷೇರು ಮೌಲ್ಯ ಏರಿಕೆಯಾಗಿದೆ. ಆಪಲ್ ಒಂದು ಷೇರಿನ ಬೆಲೆ 352 ಡಾಲರ್(26,700 ರೂ.) ಇರುವ ಕಾರಣ ಆಪಲ್ ಕಂಪನಿಯ ಮೌಲ್ಯ 1.53 ಟ್ರಿಲಿಯನ್ ಡಾಲರ್ಗೆ ಏರಿಕೆಯಾಗಿದೆ.
Advertisement
Advertisement
ಆಪಲ್ ಮೌಲ್ಯ ಪ್ರತಿ ವರ್ಷವೂ ಏರಿಕೆ ಆಗುತ್ತಿದ್ದು, ಇದೇ ರೀತಿ ಬೆಳವಣಿಗೆ ಸಾಧಿಸುತ್ತಾ ಹೋದರೆ ಮುಂದಿನ 4 ವರ್ಷದ ಒಳಗಡೆ 2 ಟ್ರಿಲಿಯನ್ ( 2 ಲಕ್ಷ ಕೋಟಿ)ಡಾಲರ್ನ್ ತಲುಪಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಭವಿಷ್ಯ ನುಡಿದಿದ್ದಾರೆ.
Advertisement
2018ರಲ್ಲಿ 1 ಟ್ರಿಲಿಯನ್ ಡಾಲರ್ ಮಾರುಕಟ್ಟೆ ಮೌಲ್ಯ ಹೊಂದಿದ ಮೊದಲ ಅಮೆರಿಕದ ಕಂಪನಿ ಎಂಬ ಸಾಧನೆ ನಿರ್ಮಿಸಿತ್ತು.
Advertisement
ಆಪಲ್ ವೇರೆಬಲ್ ಬಿಸಿನೆಸ್ನಲ್ಲಿ ಉತ್ತಮ ಬೆಳವಣಿಗೆ ಸಾಧಿಸುತ್ತಿದೆ. ಏರ್ಪಾಡ್ ಮತ್ತು ವಾಚ್ 60 ಶತಕೋಟಿ ಡಾಲರ್ ಬೆಳವಣಿಗೆ ಸಾಧಿಸಿದರೆ ಮುಂದಿನ 4 ವರ್ಷದಲ್ಲಿ ಸೇವಾ ಬಿಸಿನೆಸ್ 100 ಶತಕೋಟಿ ಡಾಲರ್ ತಲುಪಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಂದು ಕಡೆ ಕಂಪನಿಯ ಮೌಲ್ಯ ಹೆಚ್ಚಾಗುತ್ತಿದ್ದರೂ ಇನ್ನೊಂದು ಕಡೆಯಲ್ಲಿ ಆಪಲ್ ತನ್ನ ಷೇರನ್ನು ಖರೀದಿ ಮಾಡಬಹುದು ಎಂದು ಹೂಡಿಕೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಐಫೋನ್ ಮಾರುಕಟ್ಟೆ ಕುಸಿದರೂ ಆಪಲ್ ಕಂಪನಿಯ ಬೆಳವಣಿಗೆಗೆ ಯಾವುದೇ ಸಮಸ್ಯೆ ಆಗಲಿಲ್ಲ. ಈ ವರ್ಷ ಒಟ್ಟು ಶೇ.17ರಷ್ಟು ಪ್ರಗತಿ ಸಾಧಿಸಿದೆ. ಇಲ್ಲಿಯವರೆಗಿನ ಅತ್ಯುತ್ತಮ ಸಾಧನೆ ಇದಾಗಿದ್ದು, 13.3 ಶತಕೋಟಿ ಡಾಲರ್ ಆದಾಯವನ್ನು ಆಪಲ್ ಕಂಪನಿ ಗಳಿಸಿದೆ.
ಆಪ್ ಸ್ಟೋರ್, ಆಪಲ್ ಮ್ಯೂಸಿಕ್, ವಿಡಿಯೋ, ಕ್ಲೌಡ್ ಸರ್ವಿಸ್, ಆಪ್ ಸ್ಟೋರ್ ಆಡ್ ಬಿಸಿನೆಸ್, ಆಪಲ್ ಕೇರ್, ಆಪಲ್ ಟಿವಿ ಪ್ಲಸ್, ಆಪಲ್ ನ್ಯೂಸ್ ಪ್ಲಸ್, ಆಪಲ್ ಕಾರ್ಡ್ನಂತ ಸೇವಾ ವಲಯದಿಂದ ಆಪಲ್ ಹೆಚ್ಚು ಆದಾಯಗಳಿಸಿದೆ.
1976ರಲ್ಲಿ ಆಪಲ್ ಕಂಪನಿಯನ್ನು ಸ್ವೀವ್ ಜಾಬ್ಸ್ ಸ್ಥಾಪಿಸಿದ್ದರು. ಸದ್ಯ ಟಿಮ್ ಕುಕ್ ಕಂಪನಿಯ ಸಿಇಒ ಆಗಿ ಕಾರ್ಯವಿರ್ವಹಿಸುತ್ತಿದ್ದಾರೆ.