ನವದೆಹಲಿ: ದೇಶದಲ್ಲಿ ಕೋವಿಶೀಲ್ಡ್, ಕೋವ್ಯಾಕ್ಸಿನ್, ಸ್ಪುಟ್ನಿಕ್ ಬಳಿ ಇದೀಗ ನಾಲ್ಕನೇ ಲಸಿಕೆಯಾಗಿ ಅಮೆರಿಕದ ಮಡೆರ್ನಾ ಎಂಟ್ರಿಯಾಗಿದೆ. ಶೇ.94.1ರಷ್ಟು ಸಾಮರ್ಥ್ಯ ಹೊಂದಿರುವ ಮಡೆರ್ನಾ ಖರೀದಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ.
Cipla Limited is supporting Moderna, Inc. with the regulatory approval and importation of vaccines to be donated to India. At this stage, there is no definitive agreement on commercial supplies: Cipla Limited
— ANI (@ANI) June 29, 2021
Advertisement
ಮಡೆರ್ನಾ ಲಸಿಕೆಯನ್ನು ಸಿಪ್ಲಾ ಕಂಪನಿಯ ಆಮದು ಹಾಗೂ ಮಾರಾಟ ಮಾಡುವುದಕ್ಕೆ ಡಿಸಿಜಿಐ ಸಿಗ್ನಲ್ ಕೊಟ್ಟಿದೆ. ಫೈಜರ್ ಕೂಡ ಶೀಘ್ರವೇ ಭಾರತಕ್ಕೆ ಬರುವ ಸಾಧ್ಯತೆ ಇದೆ. ಜುಲೈನಲ್ಲಿ ಲಸಿಕೆ ಕೊರತೆ ನೀಗಬಹುದು ಎನ್ನಲಾಗ್ತಿದೆ. ದಿನಕ್ಕೆ 1 ಕೋಟಿ ಲಸಿಕೆ ವಿತರಣೆ ಗುರಿ ಹೊಂದಿರುವುದಾಗಿ ಸುಪ್ರೀಂಕೋರ್ಟ್ಗೆ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.
Advertisement
Advertisement
ಮೇನಿಂದ ಜುಲೈವರೆಗೆ 16 ಕೋಟಿ ಲಸಿಕೆ ಕೇಳಲಾಗಿತ್ತು. ಈ ಪೈಕಿ ಸೆರಂನಿಂದ 11 ಕೋಟಿ ಕೋವಿಶೀಲ್ಡ್ ಲಸಿಕೆ ಪೈಕಿ ಸದ್ಯ 3.43 ಕೋಟಿ ಮಾತ್ರ ಸಿಕ್ಕಿದೆ. ಕೋವ್ಯಾಕ್ಸಿನ್ನಿಂದಲೂ 5 ಕೋಟಿ ಲಸಿಕೆ ಖರೀದಿಸಿದ್ದೇವೆ. ಮೇ-ಜುಲೈ ಕೋಟಾದ ಕೋವಾಕ್ಸಿನ್ ಲಸಿಕೆ ಇನ್ನೂ ಪೂರೈಕೆ ಆಗಿಲ್ಲ. ಹಾಗಾಗಿ ಜುಲೈನಲ್ಲಿ ಸಿಗುವ ಭರವಸೆ ಇದೆ ಅಂತ ಅಫಿಡವಿಟ್ನಲ್ಲಿ ಕೇಂದ್ರ ಉಲ್ಲೇಖಿಸಿದೆ. ಇದನ್ನೂ ಓದಿ: ತೆಂಗಿನಮರದ ಕಾಯಿ ಬಿದ್ದು 11 ತಿಂಗಳ ಹಸುಗೂಸು ಸಾವು
Advertisement
New drug permission has been granted to Moderna, the first internationally developed vaccine. This new drug permission is for restricted use: Dr. VK Paul, Member-Health, Niti Aayog pic.twitter.com/c84VWDL4GZ
— ANI (@ANI) June 29, 2021
ಈ ಮಧ್ಯೆ ಮುಂದಿನ 10 ದಿನಗಳಲ್ಲಿ ಎಲ್ಲಾ ಡಿಗ್ರಿ ಕಾಲೇಜ್ಗಳಿಗೆ ವ್ಯಾಕ್ಸಿನ್ ಕೊಡ್ತೇವೆ ಅಂತ ಡಿಸಿಎಂ ಅಶ್ವಥ್ ನಾರಾಯಣ್ ಹೇಳಿದ್ದಾರೆ. ನಿನ್ನೆಯಿಂದ ವಿದ್ಯಾರ್ಥಿಗಳಿಗೆ ವ್ಯಾಕ್ಸಿನ್ ಸಿಗ್ತಿದ್ದು, ಇಂದು ತುಮಕೂರು, ಉಡುಪಿ, ಚಾಮರಾಜನಗ, ಹುಬ್ಬಳ್ಳಿ-ಧಾರವಾಡ, ಕೊಪ್ಪಳದಲ್ಲಿ ವ್ಯಾಕ್ಸಿನ್ ಪಡೆದುಕೊಂಡಿದ್ದಾರೆ.