– ಮಕ್ಕಳ ಪ್ರೀತಿಗೆ ಕುಟುಂಬಸ್ಥರ ಒಪ್ಪಿಗೆ
ಲಕ್ನೋ: ಸದ್ಯ ಉತ್ತರ ಪ್ರದೇಶದಲ್ಲಿ ಲವ್ ಜಿಹಾದ್ ಹೆಚ್ಚು ಸದ್ದು ಮಾಡುತ್ತಿರುವ ಸುದ್ದಿ. ಈ ನಡುವೆ ಎರಡು ಭಿನ್ನ ಸಂಪ್ರದಾಯದ ಜೋಡಿಗಳು ದೇವಸ್ಥಾನದಲ್ಲಿ ಮದುವೆಯಾಗುವ ಮೂಲಕ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದಾರೆ.
ಅಮನ್ ಮತ್ತು ರೇಷ್ಮಾ ಪ್ರೀತಿಸಿ, ಕುಟುಂಬಸ್ಥರ ಒಪ್ಪಿಗೆ ಪಡೆದು ಮದುವೆಯಾದ ಜೋಡಿ. ಶನಿವಾರ ಬಿದೂನಾ ನಗರದ ಶಂಕರ ದೇವಸ್ಥಾನದಲ್ಲಿ ಈ ಮದುವೆ ನಡೆದಿದ್ದು, ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.
Advertisement
Advertisement
ಉತ್ತರ ಪ್ರದೇಶದ ಔರಿಯಾ ಮೂಲದ ಅಮನ್ ಕೆಲಸದ ನಿಮಿತ್ ದೆಹಲಿಯಲ್ಲಿ ಕಳೆದ ಒಂದು ವರ್ಷದಿಂದ ವಾಸವಾಗಿದ್ದನು. ಈ ವೇಳೆ ದೆಹಲಿಯ ರೇಷ್ಮಾಳ ಪರಿಚತವಾಗಿದೆ. ಇಬ್ಬರ ಸ್ನೇಹ ಪ್ರೀತಿಯಾಗಿ ಬದಲಾಗಿದ್ದು, ಮದುವೆ ಆಗಲು ನಿರ್ಧರಿಸಿದ್ದರು. ಇಬ್ಬರ ಮದುವೆಗೂ ಎರಡು ಕುಟುಂಬಗಳ ಒಪ್ಪಿಗೆ ನೀಡಿದ್ದರಿಂದ ಜೋಡಿ ಸರಳವಾಗಿ ದೇವಸ್ಥಾನದಲ್ಲಿ ಮದುವೆಯಾಗಲು ನಿಶ್ಚಯಿಸಿತ್ತು. ಇದಕ್ಕೂ ಪೋಷಕರು ಗ್ರೀನ್ ಸಿಗ್ನಲ್ ನೀಡಿದ್ದರು.
Advertisement
Advertisement
ಎರಡೂ ಕುಟುಂಬದ ಸದಸ್ಯರು ಮತ್ತು ಆಪ್ತರ ಸಮ್ಮುಖದಲ್ಲಿ ಮದುವೆ ನಡೆದಿದೆ. ಮಗಳ ಖುಷಿಗಾಗಿ ಆಕೆ ಪ್ರೀತಿಸಿದ ಹುಡುಗನ ಜೊತೆ ಮದುವೆ ಮಾಡಿಕೊಟ್ಟಿದ್ದೇವೆ. ಇದರಿಂದ ನಮಗೆ ಯಾವುದೇ ಸಮಸ್ಯೆ ಇಲ್ಲ ಎಂದು ವಧುವಿನ ತಂದೆ ಸಲೀಂ ಹೇಳಿದ್ದಾರೆ.