ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಮತ್ತೆ ಸದ್ದು ಮಾಡುತ್ತಿದೆ. ಮಹದೇವಪುರ ವ್ಯಾಪ್ತಿಯ ಬೆಳ್ಳಂದೂರಿನಲ್ಲಿರುವ ಎಸ್ಜೆಆರ್ ವಾಟರ್ ಮಾರ್ಕ್ ಅಪಾರ್ಟ್ಮೆಂಟ್ನಲ್ಲಿ ಮತ್ತೆ ಇಂದು 10 ಮಂದಿಗೆ ಸೋಂಕು ತಗುಲಿದ್ದು, ಸೋಂಕಿತರ ಒಟ್ಟು ಸಂಖ್ಯೆ 20ಕ್ಕೆ ಏರಿಕೆಯಾಗಿದೆ.
ನಿನ್ನೆ 10 ಮಂದಿಗೆ ಕೊರೊನಾ ದೃಢವಾಗಿತ್ತು. ಇಂದು ಮತ್ತೆ 10 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ. ಇವರೆಲ್ಲರೂ 40ರಿಂದ 50 ವರ್ಷದವರು ಎನ್ನುವುದು ಆತಂಕಕ್ಕೆ ಕಾರಣವಾಗಿದೆ.
Advertisement
Advertisement
ಈ ಸೋಂಕಿತರನ್ನು ಹೋಂ ಐಸೂಲೇಷನ್ನಲ್ಲಿಡಲು ನಿರ್ಧರಿಸಲಾಗಿದೆ. ನಿನ್ನೆ ಸಂಗ್ರಹಿಸಿದ್ದ 511 ಮಂದಿಯ ಸ್ಯಾಂಪಲ್ನಲ್ಲಿ 501 ಮಂದಿಯ ರಿಪೋರ್ಟ್ ನೆಗೆಟಿವ್ ಬಂದಿದೆ. ಮಾ.7ವರೆಗೆ ಇಡೀ ಅಪಾರ್ಟ್ಮೆಂಟನ್ನೇ ಕಂಟೈನ್ಮೆಂಟ್ ಝೋನ್ ಆಗಿ ಘೋಷಿಸಲಾಗಿದೆ. ಅಪಾರ್ಟ್ಮೆಂಟ್ನಿಂದ ಯಾರೂ ಹೊರಗಡೆ ಕಾಲಿಡದಂತೆ ಸೂಚಿಸಲಾಗಿದೆ.
Advertisement
ನಾಳೆ 544 ಮಂದಿಯ ವರದಿ ಬರಲಿದೆ. ಸ್ಥಳಕ್ಕೆ ಭೇಟಿ ನೀಡಿದ ಬಿಬಿಎಂಪಿ ವಿಶೇಷ ಆಯುಕ್ತ ರಣದೀಪ್ ಸಿಂಗ್, ಅಪಾರ್ಟ್ಮೆಂಟ್ ನಿವಾಸಿಗಳು ಕಂಟೋನ್ಮೆಂಟ್ ಝೋನ್ನಲ್ಲಿ ಇರುವುದರಿಂದ ಯಾರೂ ಕೂಡ ಹೊರಗೆ ಓಡಾಡುವಂತಿಲ್ಲ. ಪಾರ್ಟಿ, ಸಮಾರಂಭ ಆಯೋಜಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
Advertisement
ಸೋಂಕು ಪತ್ತೆಯಾಗ್ತಿದ್ದಂತೆ ಅಪಾರ್ಟ್ಮೆಂಟ್ಗೆ ಸ್ಯಾನಿಟೈಸ್ ಮಾಡಲಾಗಿದೆ. ತುರ್ತು ಸಂಪರ್ಕಕ್ಕಾಗಿ ಬಿಬಿಎಂಪಿ ವತಿಯಿಂದ ಫೋನ್ ನಂಬರ್ ಕೂಡ ನೀಡಲಾಗಿದೆ.
ಆರ್.ಟಿ. ನಗರದ ನರ್ಸಿಂಗ್ ಕಾಲೇಜಿನಲ್ಲಿ 53 ವಿದ್ಯಾರ್ಥಿಗಳಿಗೆ ಸೋಂಕು ಪತ್ತೆಯಾಗಿರುವ ಕಾರಣ ಇಡೀ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿಗಳನ್ನು ಕ್ವಾರಂಟೈನ್ ಮಾಡಲಾಗಿದೆ.