ಬೀದರ್: ಕೊರೊನಾ ಸೋಂಕು ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ 19 ಜಿಲ್ಲೆಗಳನ್ನು ಅನ್ಲಾಕ್ ಮಾಡಲು ರಾಜ್ಯ ಸರ್ಕಾರ ಹೊರಟಿದೆ. ಆದರೆ ಅನ್ಲಾಕ್ಗೂ ಮೊದಲೇ ಕೊರೊನಾ ನಿಯಮ ಉಲ್ಲಂಘನೆಯಾಗುತ್ತಿದೆ.
Advertisement
ಗಡಿ ಜಿಲ್ಲೆ ಬೀದರ್ನಲ್ಲಿ ಜನರು ಕೊರೊನಾ ನಿಯಮಗಳನ್ನು ಸಂಪೂರ್ಣವಾಗಿ ಗಾಳಿ ತೂರಿ ಬೇಕಾಬಿಟ್ಟಿಯಾಗಿ ವರ್ತನೆ ಮಾಡುತ್ತಿದ್ದಾರೆ. ನಗರದ ಗಾಂಧಿಗಂಜ್ನ ದಿನಸಿ ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಖರೀದಿಗೆ ಮಾಡಲು ಜನ ಮುಗಿ ಬಿದ್ದಿದ್ದಾರೆ. ಈ ವೇಳೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಹಾಕಿಕೊಳ್ಳದೆ ಸಂಪೂರ್ಣವಾಗಿ ಕೊವೀಡ್ ನಿಯಮಗಳನ್ನು ಉಲ್ಲಂಘನೆ ಮಾಡುತ್ತಾ ಬೇಕಾಬಿಟ್ಟಿಯಾಗಿ ವರ್ತನೆ ಮಾಡುತ್ತಿದ್ದಾರೆ. ಇದನ್ನೂ ಓದಿ: ಅನ್ಲಾಕ್ನಿಂದ ಸೋಂಕು ಹೆಚ್ಚಳ ಆದ್ರೆ ಕಠಿಣ ಕ್ರಮ: ಸುಧಾಕರ್
Advertisement
Advertisement
ಜೂನ್ 14 ರ ಬಳಿಕ ಕೊರೊನಾ ಸೋಂಕು ಅತಿ ಕಡಿಮೆಯಾಗುತ್ತಿರುವ ಗಡಿ ಜಿಲ್ಲೆ ಬೀದರ್ನಲ್ಲೂ ರಾಜ್ಯ ಸರ್ಕಾರ ಅನ್ಲಾಕ್ ಮಾಡಲು ಮುಂದಾಗಿದೆ. ಈ ಸಮಯದಲ್ಲಿ ಕೊವೀಡ್ ನಿಯಮಗಳ ಉಲ್ಲಂಘನೆ ಮಾಡುತ್ತಿರುವುದು ಬೀದರ್ಗೆ ಕಂಟಕವಾಗುವುದು ಪಕ್ಕಾ ಎನ್ನಲಾಗುತ್ತಿದೆ. ಇದನ್ನೂ ಓದಿ: ರೋಮಾಂಚನಕಾರಿ ಕಾರ್ಯಾಚರಣೆ ನಡೆಸಿ ಹಾಸನದಲ್ಲಿ ಪುಂಡಾನೆಗಳ ಸೆರೆ
Advertisement
ಭಾರತದಲ್ಲಿ ಕೊರೋನಾ 2ನೇ ಅಲೆ ಇಳಿಕೆಯ ಹಾದಿ ಮುಂದುವರೆದಿದ್ದು, ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಮುಕ್ತಾಯಾವಾದ 24 ಗಂಟೆಗಳ ಅವಧಿಯಲ್ಲಿ 91,702 ಹೊಸ ಪ್ರಕರಣಗಳು ಪತ್ತೆಯಾಗಿದ್ದು, 3,403 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,92,74,823ಕ್ಕೆ ತಲುಪಿದ್ದು, ಸಾವಿನ ಸಂಖ್ಯೆ 3,63,079ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ದೈನಂದಿನ ಸೋಂಕಿತರ ಸಂಖ್ಯೆ ಇಳಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 11,21,671ಕ್ಕೆ ಇಳಿಕೆಯಾಗಿದೆ.