ಭೋಪಾಲ್: ಅನ್ಯಪುರುಷನ ಜೊತೆ ಸಂಬಂಧ ಹೊಂದಿದ್ದಕ್ಕಾಗಿ ವಿಚ್ಚೇದಿತ ಪತಿ ಕುಟುಂಬದ ಸದಸ್ಯನನ್ನು ಹೆಗಲು ಮೇಲೆ ಹೊತ್ತುಕೊಂಡು ನಡೆಯುವ ವಿಚಿತ್ರ ಶಿಕ್ಷೆಯನ್ನು ನೀಡಿದ ಘಟನೆ ಮಧ್ಯಪ್ರದೇಶದ ಗುನಾದಲ್ಲಿ ನಡೆದಿದೆ.
Advertisement
ಪತಿಯಿಂದ ವಿಚ್ಚೇದನ ಪಡೆದಿರುವ ಮಹಿಳೆ ಅನ್ಯ ಪುರುಷನೊಂದಿಗೆ ಸಂಬಂಧ ಹೊಂದಿದ್ದಳು. ಈ ವಿಚಾರವಾಗಿ ಆಕೆಯ ಮಾಜಿ ಪತಿ ಹೆಗಲ ಮೇಲೆ ಬಾಲಕನನ್ನು ಹೊತ್ತುಕೊಂಡು 3 ಕಿಮೀ ನಡೆಯುವಂತೆ ಶಿಕ್ಷೆಯನ್ನು ಕೊಟ್ಟಿದ್ದಾನೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
Advertisement
A married tribal woman in Guna was beaten up, shamed and forced to carry her relatives on her shoulders as punishment @ndtv @ndtvindia @NCWIndia @sharmarekha @ChouhanShivraj @drnarottammisra @OfficeOfKNath @manishndtv @GargiRawat @vinodkapri @rohini_sgh pic.twitter.com/H8ZJL8m86g
— Anurag Dwary (@Anurag_Dwary) February 15, 2021
Advertisement
ಮಹಿಳೆ ಪತಿಗೆ ವಿಚ್ಚೇದನ ನೀಡಿದ್ದಳು. ಇಬ್ಬರು ಒಪ್ಪಿಗೆಯಿಂದಲೇ ವೈವಾಹಿಕ ಸಂಬಂಧದಿಂದಾಗಿ ಹೊರಬಂದಿದ್ದರು. ನಂತರ ಮಹಿಳೆ ಬೇರೆ ವ್ಯಕ್ತಿಯೊಂದಿಗೆ ಸಂಬಂಧವನ್ನು ಹೊಂದಿದ್ದಳು. ಆದರೆ ಮಾಜಿ ಪತಿಯ ಕುಟುಂಬದವರು ಹಾಗೂ ಗ್ರಾಮದ ಕೆಲವರು ನನಗೆ ಕಿರುಕುಳ ನೀಡಿದ್ದಾರೆ ಎಂದು ಮಹಿಳೆ ದೂರಿನನಲ್ಲಿ ಆರೋಪಿಸಿದ್ದಾಳೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
Advertisement