– ಸೌಹಾರ್ದತೆಗೆ ಸಾಕ್ಷಿಯಾದ ವಿಜಯಪುರದ ಮಹಿಬೂಬ
– ಸಾಕು ಮಗಳ ಅದ್ಧೂರಿ ಮದುವೆ
ವಿಜಯಪುರ: ಅನಾಥ ಹಿಂದು ಬಾಲಕಿಯನ್ನ ಸಾಕಿ, ಸಲುಹಿ ನಂತರ ಹಿಂದು ಧರ್ಮದಂತೆಮದುವೆ ಮಾಡಿಸಿದ ಅಪರೂಪದ ಘಟನೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ನಡೆದಿದೆ.
Advertisement
10 ವರ್ಷದ ಹಿಂದೆ ತಂದೆ, ತಾಯಿಯನ್ನ ಕಳೆದುಕೊಂಡ ಪೂಜಾ ಅಜ್ಜಿಯ ಊರಾದ ಆಲಮೇಲದಲ್ಲಿ ಬಂದು ವಾಸವಾಗಿದ್ದಳು. ಅದೇ ಓಣಿಯಲ್ಲಿ ಮಹಿಬೂಬ ಮಸಳಿ ಎಂಬವರು ವಾಸವಿದ್ದರು. ಪೂಜಾಳ ದುರಾದೃಷ್ಟಕ್ಕೆ ಅವಳ ಅಜ್ಜಿಯೂ ಸಾವನ್ನಪ್ಪಿದ್ದರು. ಇದನ್ನೂ ಓದಿ: ಹಿಂದೂಗಳ ಅಂಗಡಿ ರಕ್ಷಿಸಿದ ಮುಸ್ಲಿಂ, ಮುಸ್ಲಿಮರ ಜೀವ ಉಳಿಸಿದ ಹಿಂದೂ- ಘರ್ಷಣೆಯಲ್ಲೂ ಸೌಹಾರ್ದ ಗೀತೆ
Advertisement
Advertisement
ತದನಂತರ ಮಹಿಬೂಬ ಅವರೇ ಪೂಜಾಳನ್ನ ತಮ್ಮ ಮನೆಯಲ್ಲಿಟ್ಟುಕೊಂಡು ಮಗಳಂತೆ ಸಾಕಿ, ಸಲುಹಿದ್ದರು. ಇದೀಗ ಮಹಿಬೂಬ ಅವರು ತಮ್ಮ ಮನೆಯ ಮುಂದೆ ಪೂಜಾಳನ್ನ ಹಿಂದು ಸಂಪ್ರದಾಯದಂತೆ ಹಿಂದು ಯುವಕನಿಗೆ ಕೊಟ್ಟು ಅದ್ಧೂರಿ ಮದುವೆ ಮಾಡಿಕೊಟ್ಟು ಇತರರಿಗೆ ಮಾದರಿ ಆಗಿದ್ದಾರೆ. ಇದನ್ನೂ ಓದಿ: ಹಿಂದೂ ಯುವತಿಯ ಮದುವೆ ಮಾಡಿದ ಉಳ್ಳಾಲದ ಮುಸ್ಲಿಂ ಕುಟುಂಬ