– ಮಾಧ್ಯಮಗಳಿಗೆ ಹೇಳಿಕೆ ನೀಡದಂತೆ ಅಧಿಕಾರಿಗೆ ಸೂಚನೆ
ಮೈಸೂರು: ವಾಕ್ಸಿನ್ ಖಾಲಿ ಎಂದು ಅಧಿಕೃತವಾಗಿ ನಿನ್ನೆ ಮೈಸೂರು ಜಿಲ್ಲಾ ಆರೋಗ್ಯಾಧಿಕಾರಿ ಹೇಳುವ ಮೂಲಕ ವಾಸ್ತವ ಒಪ್ಪಿಕೊಂಡಿದ್ದರು. ಡಿಎಚ್ಓ ಅವರ ಈ ಮಾತು ಆರೋಗ್ಯ ಸಚಿವರಿಗೆ ಇರಿಸು ಮುರಿಸು ಉಂಟು ಮಾಡಿದೆ.
ಹೀಗಾಗಿಯೆ ಇಂದು ಮೈಸೂರಿಗೆ ಆಗಮಿಸಿದ ಆರೋಗ್ಯ ಸಚಿವ ಡಾ. ಸುಧಾಕರ್ ಕೋವಿಡ್ ನಿರ್ವಹಣಾ ಸಭೆಯ ಆರಂಭದಲ್ಲೆ ಡಿಎಚ್ಓಗೆ ಮೆಲು ದನಿಯಲ್ಲೇ ವಾರ್ನಿಂಗ್ ನೀಡಿದರು. ಡಿಎಚ್ಓ ಪ್ರಸಾದ್ ಅವರೇ ಇನ್ಮುಂದೆ ವಾಕ್ಸಿನ್ ಬಗ್ಗೆ ನೀವು ಮಾಧ್ಯಮಗಳಿಗೆ ಮಾಹಿತಿ ನೀಡಬೇಡಿ. ಜಿಲ್ಲಾಧಿಕಾರಿಗಳೇ ಎಲ್ಲಾ ಮಾತಾಡುತ್ತಾರೆ ಎಂದು ಮೆಲು ದನಿಯಲ್ಲೇ ವಾರ್ನಿಂಗ್ ನೀಡಿದರು.
Advertisement
Advertisement
ಎಲ್ಲೆಡೆ ನೋ ಸ್ಟಾಕ್ ಬೋರ್ಡ್: ಮೈಸೂರಲ್ಲಿ ಲಸಿಕೆ ಇಲ್ಲ ಎಂಬ ಸತ್ಯವನ್ನು ಜಿಲ್ಲಾ ಆರೋಗ್ಯ ಇಲಾಖೆ ಒಪ್ಪಿಕೊಂಡು ಅಧಿಕೃತವಾಗಿಯೆ ವ್ಯಾಕ್ಸಿನ್ ಸ್ಟಾಕ್ ಇಲ್ಲ ಎಂಬ ಬೋರ್ಡ್ ಅನ್ನು ಆರೋಗ್ಯ ಕೇಂದ್ರಗಳ ಮುಂದೆ ಹಾಕಿದೆ. ಜುಲೈ ಒಂದರವರೆಗೆ ಮೈಸೂರಲ್ಲಿ ವಾಕ್ಸಿನ್ ಸಿಗುವುದಿಲ್ಲ. ಕೋವ್ಯಾಕ್ಸಿನ್ ಮತ್ತು ಕೋವಿಶೀಲ್ಡ್ ಎರಡು ವ್ಯಾಕ್ಸಿನ್ ಕೂಡ ಮೈಸೂರಲ್ಲಿ ಲಭ್ಯವಿಲ್ಲ. ಇದನ್ನೂ ಓದಿ: ಮೊದಲು ಲಸಿಕೆ, ನಂತರ ಮನ್ ಕೀ ಬಾತ್: ರಾಹುಲ್ ಕಿಡಿ
Advertisement
Advertisement
ಬೆಂಗಳೂರಿನಲ್ಲಿ ಮಾತನಾಡಿದ್ದ ಆರೋಗ್ಯ ಸಚಿವರು, ಈ ತಿಂಗಳು ಹೆಚ್ಚಾಗಿ ಲಸಿಕೆ ಬರಬೇಕಿತ್ತು. ಆದ್ರೆ ಲಸಿಕೆ ಬರೋದು ತಡವಾಗಿದೆ. ಲಸಿಕೆ ಪೂರೈಕೆ ಹೆಚ್ಚಳ ಮಾಡುವಂತೆ ಮನವಿ ಮಾಡಲು ಸೋಮವಾರ ಅಥವಾ ಮಂಗಳವಾರ ದೆಹಲಿಗೆ ತೆರಳುತ್ತೇನೆ. ಕೇಂದ್ರ ಆರೋಗ್ಯ ಸಚಿವರನ್ನ ಭೇಟಿಯಾಗಿ ರಾಜ್ಯಕ್ಕೆ ಹೆಚ್ಚು ಲಸಿಕೆ ಪೂರೈಕೆ ಮಾಡುವಂತೆ ಮನವಿ ಮಾಡುತ್ತೇನೆ ಎಂದು ಹೇಳುವ ಲಸಿಕೆ ಕೊರತೆಯನ್ನು ಒಪ್ಪಿಕೊಂಡಿದ್ದರು. ಇದನ್ನೂ ಓದಿ: ಮರದ ಕೆಳಗೆ, ನಡು ರಸ್ತೆಯಲ್ಲಿ, ಬೆಳೆಗಳ ಮಧ್ಯೆ, ಜನ ಎಲ್ಲಿ ಸಿಗುತ್ತಾರೋ ಅಲ್ಲಿ ಲಸಿಕೆ
ಕೊಡಗಿನಲ್ಲಿಯೂ ಇಲ್ಲ ಸಂಜೀವಿನಿ: ಬುಧವಾರದಿಂದ ಕೊಡಗಿನಲ್ಲಿ ವ್ಯಾಕ್ಸಿನ್ ಅಭಾವ ಹೆಚ್ಚಾಗುವ ಸಾಧ್ಯತೆ ಇದೆ. ವ್ಯಾಕ್ಸಿನ್ ಗಾಗಿ ಸಾರ್ವಜನಿಕರು ಎರಡ್ಮೂರು ದಿನ ಕಾಯಲೇ ಬೇಕು, ಯಾರೂ ಗೊಂದಲಕ್ಕೊಳಗಾಗಬಾರದು ಎಂದು ಕೊಡಗು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಲಸಿಕೆಗಾಗಿ ಭಿಕ್ಷೆ ಬೇಡುವ ಪರಿಸ್ಥಿತಿ ಬಂದಿದೆ: ಬಾಲಕೃಷ್ಣ
ಈ ಸರ್ಕಾರದಲ್ಲಿ ಅಕ್ಷರ, ಆರೋಗ್ಯ ಎರಡು ಕೆಟ್ಟು ಹೋಗುತ್ತಿದೆ – ವಿಶ್ವನಾಥ್ ವಾಗ್ದಾಳಿ https://t.co/CZPay5z4we#SSLC #Mysuru #KannadaNews #Corona #Covid19 #Vishwanth #Exam @nimmasuresh @BSYBJP @nalinkateel
— PublicTV (@publictvnews) June 29, 2021