ಚಿಕ್ಕಬಳ್ಳಾಪುರ: ಪಕ್ಷದ ಅಧ್ಯಕ್ಷರ ಸೂಚನೆ ಮೇರೆಗೆ ನಾನು ರಾಜೀನಾಮೆ ನೀಡಿದ್ದೇನೆ. ಪಕ್ಷ ನನಗೆ ಎಲ್ಲವನ್ನೂ ನೀಡಿದೆ. ನಾನು ಸಂತೋಷದಿಂದಲೇ ಇದ್ದೇನೆ. ಅಧಿಕಾರ ಸಿಕ್ಕಾಗ ಮಾತ್ರವಲ್ಲ, ಅಧಿಕಾರ ಕಳೆದುಕೊಂಡಾಗಲೂ ಜನ ನನ್ನೊಂದಿಗೆ ಇದ್ದಾರೆ. ಜನರ ಈ ಪ್ರೀತಿಗೆ ನಾನು ಚಿರರುಣಿ ಎಂದು ನಿರ್ಗಮಿತ ಕೇಂದ್ರ ಸಚಿವ ಡಿ.ವಿ ಸದಾನಂದ ಗೌಡ ಹೇಳಿದ್ದಾರೆ.
Advertisement
ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಇಂದು ದೆಹಲಿಯಿಂದ ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಆಗಮಿಸಿದರು. ಈ ವೇಳೆ ಮಾತನಾಡಿದ ಡಿವಿಎಸ್, ಜನರು ನನ್ನ ಮೇಲೆ ಇಟ್ಟಿರುವ ಅಪಾರ ಪ್ರೀತಿಗೆ ನಾನು ಯಾವತ್ತು ಚಿರರುಣಿ. ರಾಜ್ಯ ರಾಜಕಾರಣದ ಬಗ್ಗೆ ಈಗಲೇ ನಾನು ಏನು ಹೇಳಲಾಗುವುದಿಲ್ಲ. ಪಕ್ಷ ನೀಡುವ ಜವಾಬ್ದಾರಿ ಮತ್ತು ಸೂಚನೆ ಮೆರೆಗೆ ಕೆಲಸ ಮಾಡುತ್ತೇನೆ ಎಂದು ಹೇಳುವ ಮೂಲಕ ಬೇರೆ ಹುದ್ದೆಯ ಬಗ್ಗೆ ಮಾತನಾಡಲು ನಿರಾಕರಿಸಿದರು. ಇದನ್ನೂ ಓದಿ: ಸಿಎಂ ಆಗಿ ಕಟೀಲಿಗೆ ಬಂದಿದ್ದ ಡಿವಿಎಸ್ – 9 ವರ್ಷಗಳ ಬಳಿಕ ಅದೇ ದಿನ ರಾಜೀನಾಮೆ
Advertisement
Advertisement
ಸದಾನಂದಗೌಡರ ಆಗಮನದ ಹಿನ್ನೆಲೆ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬೆಂಗಳೂರು ಉತ್ತರ ತಾಲೂಕಿನ ಡಿವಿಎಸ್ ಬೆಂಬಲಿಗರು ಸೇರಿದಂತೆ ಅನೇಕ ಬಿಜೆಪಿ ಮುಖಂಡರು ಆಗಮಿಸಿ ಡಿವಿಎಸ್ಗೆ ಆತ್ಮಸ್ಥರ್ಯ ತುಂಬುವ ಕೆಲಸ ಮಾಡಿದರು. ವಿಮಾನ ನಿಲ್ದಾಣದಲ್ಲಿ ಕ್ಕಿಕ್ಕಿರಿದು ತುಂಬಿದ್ದ ಡಿವಿಎಸ್ ಬೆಂಬಲಿಗರು ಮುಂದಿನ ಸಿಎಂ ಸದಾನಂದಗೌಡ, ಜೈ ಎನ್ನುವ ಮೂಲಕ ಡಿವಿಎಸ್ ಅವರಿಗೆ ಜೈಕಾರ ಹಾಕಿದರು.
Advertisement