ಶಶಿಕುಮಾರ್ ಪುತ್ರ ಅಕ್ಷಿತ್ ಶಶಿಕುಮಾರ್ ನಟನೆಯ ‘ಓ ಮೈ ಲವ್’ ಸಿನಿಮಾ ಅದ್ಧೂರಿಯಾಗಿ ಸೆಟ್ಟೇರಿದೆ. ಇತ್ತೀಚೆಗೆ ನಡೆದ ಚಿತ್ರದ ಅದ್ಧೂರಿ ಮುಹೂರ್ತದಲ್ಲಿ ಸಚಿವ ಶ್ರೀರಾಮುಲು ಭಾಗವಹಿಸಿ ಕ್ಲ್ಯಾಪ್ ಮಾಡುವ ಮೂಲಕ ಚಿತ್ರೀಕರಣಕ್ಕೆ ಚಾಲನೆ ನೀಡಿದ್ದಾರೆ.
‘ಓ ಮೈ ಲವ್’ ಬಿಗ್ ಬಜೆಟ್ ಸಿನಿಮಾವಾಗಿದ್ದು, ಸ್ಮೈಲ್ ಶ್ರೀನು ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಕ್ಷಿತ್ ಶಶಿಕುಮಾರ್ ಜೋಡಿಯಾಗಿ ನಟಿ ಕೀರ್ತಿ ಕಲಕೇರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ. ಚಿತ್ರದ ಟೈಟಲ್ ಹೇಳುವಂತೆ ಲವ್ ಕಹಾನಿ ಸಿನಿಮಾ ಇದಾಗಿದ್ದು ಜಿ. ರಾಮಾಂಜಿನಿ ಚಿತ್ರಕ್ಕೆ ಕಥೆ ಬರೆದು ನಿರ್ಮಾಣ ಮಾಡುತ್ತಿದ್ದಾರೆ.
Advertisement
Advertisement
ತೂಫಾನ್, ಬಳ್ಳಾರಿ ದರ್ಬಾರ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರೋ ನಿರ್ದೇಶಕ ಸ್ಮೈಲ್ ಶ್ರೀನು ಈ ಬಾರಿ ಲವ್ ಸಬ್ಜೆಕ್ಟ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರೆ. ಚಿತ್ರದ ನಿರೂಪಣೆ ಹಾಗೂ ಚಿತ್ರಕಥೆಯಲ್ಲಿ ಹೊಸ ಪ್ರಯತ್ನವನ್ನು ಸ್ಮೈಲ್ ಶ್ರೀನ್ ಮಾಡಿದ್ದಾರೆ. ಕೇವಲ ಪ್ರೀತಿ- ಪ್ರೇಮ ಕಥೆ ಮಾತ್ರವಿರದೆ ಫ್ಯಾಮಿಲಿ ಎಂಟಟೈನ್ರ್ಮೆಂಟ್ ಎಲಿಮೆಂಟ್ ‘ಓ ಮೈ ಲವ್’ ಚಿತ್ರದಲ್ಲಿರಲಿದೆ. ಹದಿಹರೆಯದ ಮನಸ್ಸುಗಳ ಪ್ರೀತಿ-ಪ್ರೇಮ ತಳಮಳಗಳ ಜೊತೆ ಇಂಟರ್ನೆಟ್ ಜಮಾನದಲ್ಲಿ ಕಳೆದು ಹೋಗುತ್ತಿರುವ ಸಂಬಂಧಗಳ ಬಗ್ಗೆಯೂ ಸಿನಿಮಾದಲ್ಲಿ ಬೆಳಕು ಚೆಲ್ಲಲಾಗಿದೆ.
Advertisement
ಮಗಧೀರ ಖ್ಯಾತಿಯ ದೇವ್ಗಿಲ್ ‘ಓ ಮೈ ಲವ್’ ಚಿತ್ರದಲ್ಲಿ ಖಳನಟನ ಪಾತ್ರದಲ್ಲಿ ಅಭಿನಯಿಸುತ್ತಿದ್ದು, ಅಲಾ ವೈಕುಂಟ ಪುರಂಲೋ ಸಿನಿಮಾ ಖ್ಯಾತಿಯ ಸತೀಶ್ ಸಾಹಸ ನಿರ್ದೇಶನ, ಮುರಳಿ ಮಾಸ್ಟರ್ ಕೊರಿಯೋಗ್ರಫಿ ಚಿತ್ರಕ್ಕಿದೆ. ಮೇಕಿಂಗ್ ನಿಂದ ಹಿಡಿದು ಆಕ್ಷನ್, ಸಾಂಗ್ಸ್ ಪ್ರತಿಯೊಂದರಲ್ಲೂ ಚಿತ್ರ ಅದ್ಧೂರಿತನದಿಂದ ಕೂಡಿರಲಿದೆ ಎಂದು ನಿರ್ಮಾಪಕ ಜಿ. ರಾಮಾಂಜಿನಿ ತಿಳಿಸಿದ್ದಾರೆ. ಜಿ ರಾಮಾಂಜಿನಿ ಅವರ ಜಿಸಿಬಿ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಿನಿಮಾ ನಿರ್ಮಾಣವಾಗುತ್ತಿದ್ದು, ಚರಣ್ ಅರ್ಜುನ್ ಸಂಗೀತ ನಿರ್ದೇಶನ, ವಿ. ನಾಗೇಂದ್ರ ಪ್ರಸಾಧ್ ಸಾಹಿತ್ಯ ‘ಓ ಮೈ ಲವ್’ ಚಿತ್ರಕ್ಕಿದೆ.
Advertisement