– ಸಿಎಂಗೆ ಹೆಚ್ಡಿಡಿ ಮನೆಗೆ ಹೋಗುವ ಅವಶ್ಯಕತೆ ಏನಿತ್ತು?
ಹಾಸನ: ಅಡ್ಜೆಸ್ಟ್ಮೆಂಟ್ ರಾಜಕಾರಣ ಮಾಡಿಕೊಳ್ಳಲು ನಾವು ಯಾರು ಕೂಡ ರಾಜಕೀಯದಲ್ಲಿ ಸನ್ಯಾಸಿಗಳಲ್ಲ. ನಾನು ರಾಜಕಾರಣ ಮಾಡಬೇಕೆಂದೇ ಬಂದಿರುವುದು ಎಂದು ಶಾಸಕ ಪ್ರೀತಂ ಗೌಡ ಹೇಳಿದ್ದಾರೆ.
Advertisement
ಇಂದು ಹಾಸನದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿಯವರು ಮೊದಲು ಸಿದ್ದಗಂಗಾ ಶ್ರೀ, ಸುತ್ತೂರು ಶ್ರೀ, ಸಿರಿಗೆರೆ ಸ್ವಾಮೀಜಿಗಳಿಗೆ ಅಥವಾ ಆದಿ ಚುಂಚನಗಿರಿ ಶ್ರೀಗಳ ಆಶೀರ್ವಾದ ಪಡೆಯಬೇಕಾಗಿತ್ತು. ಆದರೆ ಅವರ ತಂದೆ ಸರ್ಕಾರ ಉರುಳಿಸಿದಂತಹವರ ಮನೆಗೆ ಹೋಗಿ ಆಶೀರ್ವಾದ ಪಡೆಯುವ ಅಗತ್ಯ ಇರಲಿಲ್ಲ. ಇದು ನಾನು ಹೇಳುತ್ತಿಲ್ಲ ಎಲ್ಲಾ ಕಾರ್ಯಕರ್ತರು ಮಾತನಾಡುತ್ತಿದ್ದಾರೆ ಎಂದಿದ್ದಾರೆ.
Advertisement
Advertisement
ನಾನು ಯಾವುದೇ ಮುಲಾಜಿಗೆ ಒಳಗಾಗಿ ರಾಜಕಾರಣ ಮಾಡುವಂತನಲ್ಲ. ನಮ್ಮ ಮನೆಗೆ ಕಲ್ಲು ಒಡೆದ ಸಮಯದಲ್ಲಿ ಯಡಿಯೂರಪ್ಪನವರು ಹಾಗೂ ಆರ್. ಅಶೋಕ್ ಬಂದು ಮಾನಸಿಕವಾಗಿ, ನೈತಿಕವಾಗಿ ಧೈರ್ಯ ತುಂಬಿ ಹೆಚ್ಚು ಶಕ್ತಿ ಕೊಟ್ಟಂತಹ ನಾಯಕರ ಮಧ್ಯೆ ನಾನು ಬೆಳೆದು ಬಂದಿದ್ದೇನೆ. ನಾವು ಬೆಳಗಾದರೆ ಜಾತ್ಯತೀಯ ಜನತ ದಳದ ವಿರುದ್ಧ ಗುದ್ದಾಟ ಮಾಡಿ ಪಕ್ಷ ಕಟ್ಟುವುದು, ಇನ್ನೊಬ್ಬರು ಹೋಗಿ ಅಡ್ಜೆಸ್ಟ್ಮೆಂಟ್ ರಾಜಕಾರಣ ಮಾಡಿಕೊಳ್ಳುವುದು. ಇಂತಹ ಅಡ್ಜೆಸ್ಟ್ಮೆಂಟ್ ರಾಜಕಾರಣ ಮಾಡಿಕೊಳ್ಳಲು ನಾವು ಯಾರು ಕೂಡ ರಾಜಕೀಯದಲ್ಲಿ ಸನ್ಯಾಸಿಗಳಲ್ಲ. ನಾನು ರಾಜಕಾರಣ ಮಾಡಬೇಕೆಂದೇ ಬಂದಿರುವುದು. ಹಳೇ ಮೈಸೂರು ಜಿಲ್ಲೆಯಲ್ಲಾಗಲಿ, ಹಾಸನ ಜಿಲ್ಲೆಯಲ್ಲಾಗಲಿ ಎಲ್ಲೆಯಾದರು ಯಾವುದೇ ಕಾರಣಕ್ಕೂ ಅಡ್ಜೆಸ್ಟ್ಮೆಂಟ್ ರಾಜಕಾರಣ ಆಗುವುದಿಲ್ಲ ಎಂದು ನಾನು ಕಾರ್ಯಕರ್ತರಿಗೆ ಪ್ರಾಮಾಣಿಕವಾಗಿ ತಿಳಿಸಿಕೊಡುವಂತಹ ಪ್ರಯತ್ನ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.
Advertisement
ಮುಂದಿನ ದಿನಗಳಲ್ಲಿ ಯಾವುದೇ ಮಂತ್ರಿಗಳಾಗಲಿ ಜನತ ದಳದವರ ಮನೆಗೆ ಹೋಗಿ ಊಟ ಮಾಡುವುದು, ಮುಖ್ಯಮಂತ್ರಿಯವರನ್ನು ಭೇಟಿ ಮಾಡಿ, ಮುಂದೆ ಬರುವ ಚುನಾವಣೆಯಲ್ಲಿ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವಂತಹ ಕೆಲಸವನ್ನು ಮುಂದಿನ ದಿನಗಳಲ್ಲಿ ಮಾಡಬಾರದು. ಈ ಬಗ್ಗೆ ಹಳೇ ಮೈಸೂರಿನ ಕಡೆ ರಾಜಕಾರಣ ಮಾಡುವವರಿಗೆ ನೋವಿನ ಬಗ್ಗೆ ಗೊತ್ತಿರುತ್ತದೆ ಎಂದು ನುಡಿದಿದ್ದಾರೆ.
ಪಕ್ಕದ ಭಾಗದವರು ಬಂದು ಹೈದರಾಬಾದ್ ಕರ್ನಾಟಕ, ಉತ್ತರ ಕರ್ನಾಟಕದವರಿಗೆ ಜನತ ದಳ ಅಂದರೆ ಫ್ರೆಂಡ್ಸ್. ಆದ್ರೆ ಹಳೇ ಮೈಸೂರು ಭಾಗದಲ್ಲಿ ಜಂಜಾಟ ಮಾಡಿಕೊಂಡು ಗುದ್ದಾಟ ಮಾಡಿಕೊಳ್ಳುವವರು ನಮ್ಮ ಕಾರ್ಯಕರ್ತರು ಟಿಪಿ, ಜೆಡ್ಪಿ ಚುನಾವಣೆ ಇದೆ. ಆ ಸಮಯದಲ್ಲಿ ಇದೆಲ್ಲಾ ನಡೆದಿದ್ದು, ನಮ್ಮ ಕಾರ್ಯಕರ್ತರಿಗೆ ನೋವುಂಟಾಗಿದೆ. ಆ ನೋವನ್ನು ನನ್ನ ಬಳಿ ವ್ಯಕ್ತಪಡಿಸಿದ್ದಾರೆ. ಅದರ ಬಗ್ಗೆ ನಾನು ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಚರ್ಚೆ ಮಾಡುತ್ತೇನೆ. ರಾಜ್ಯಾಧ್ಯಕ್ಷರಿಗೆ ಮನವಿ ಮಾಡುತ್ತೇನೆ, ನಮ್ಮ ಪರಿವಾರದ ಹಿರಿಯರ ಬಳಿ ಈ ಬಗ್ಗೆ ಚರ್ಚಿಸುತ್ತೇನೆ ಎಂದಿದ್ದಾರೆ. ಇದನ್ನೂ ಓದಿ:ಖಾತೆ ಹಂಚಿಕೆ ಸಿಎಂ ಪರಮಾಧಿಕಾರ, ವಸತಿ ಖಾತೆ ಮತ್ತೆ ನಿಭಾಯಿಸುತ್ತೇನೆ: ವಿ.ಸೋಮಣ್ಣ