ಸಿಡ್ನಿ: ಸೂಪರ್ ಕಾರ್ ರೇಸರ್ ಆಗಿದ್ದ ನಾನು ಅಡಲ್ಟ್ ಇಂಡಸ್ಟ್ರಿ ಬಂದಿದಕ್ಕೆ ನನ್ನ ತಂದೆ ಹೆಮ್ಮೆ ಪಡುತ್ತಾರೆ ಎಂದು ನೀಲಿ ಚಿತ್ರ ತಾರೆ ರೆನೀ ಗ್ರೇಸಿ ಹೇಳಿದ್ದಾಳೆ.
25 ವರ್ಷದ ರೆನೀ ಗ್ರೇಸಿ ಈಗ ಡ್ರೈವಿಂಗ್ ವೃತ್ತಿಯನ್ನು ಸಂಪೂರ್ಣವಾಗಿ ತ್ಯಜಿಸಿದ್ದಾಳೆ. ಈ ಹೊಸ ವೃತ್ತಿಗೆ ಕುಟುಂಬದ ಪೂರ್ಣ ಸಹಕಾರವಿದೆ. ಹೀಗಾಗಿ ಅಡಲ್ಟ್ ಸಿನಿಮಾಗಳಲ್ಲಿ ನಟಿಸುತ್ತಿದ್ದೇನೆ ಎಂದು ಹೇಳಿದ್ದಾಳೆ. ಜೊತೆಗೆ ನನಗೆ ಸೂಪರ್ ಕಾರ್ ರೇಸಿಂಗ್ನಲ್ಲಿ ಹೆಚ್ಚು ಯಶಸ್ಸು ಸಿಗಲಿಲ್ಲ. ಜೊತೆಗೆ ಆರ್ಥಿಕ ಸಮಸ್ಯೆಯಿಂದ ತನ್ನ ವೃತ್ತಿಯನ್ನು ಈಗ ಬದಲಾವಣೆ ಮಾಡಿದ್ದೇನೆ ಎಂದು ಹೇಳಿದ್ದಾಳೆ.
Advertisement
Advertisement
ಆಸ್ಟ್ರೇಲಿಯಾದ ಮೊದಲ ಮಹಿಳಾ ಫುಲ್ ಟೈಮ್ ಕಾರ್ ರೇಸರ್ ಆಗಿದ್ದ ರೆನೀ, ಅಲ್ಲಿ ಹೆಚ್ಚು ಹಣ ಸಿಗಲ್ಲ ಎಂಬ ಕಾರಣಕ್ಕೆ ನೀಲಿ ಚಿತ್ರದಲ್ಲಿ ನಟಿಸುತ್ತಿದ್ದಾಳೆ. ಜೊತೆಗೆ ಇನ್ನೂ ಮುಂದಿನ ತನ್ನ ವೃತ್ತಿ ಜೀವನವನ್ನು ನೀಲಿ ಚಿತ್ರತಾರೆಯಾಗಿ ಕಳೆಯಲು ತೀರ್ಮಾನಿದ್ದಾಳೆ. ಜನ ನಾವು ಏನೂ ಮಾಡುತ್ತಿದ್ದೇವೆ ಎಂಬದನ್ನು ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ. ನಾವು ಏನೂ ಸಾಧನೆ ಮಾಡಿದ್ದೇವೆ ಎಂದು ನೆನಪಿನಲ್ಲಿ ಇಟ್ಟುಕೊಳ್ಳುತ್ತಾರೆ ಎಂದು ರೆನೀ ಹೇಳಿದ್ದಾಳೆ.
Advertisement
Advertisement
ಈ ವಿಚಾರದ ಬಗ್ಗೆ ಒಂದು ಸಂದರ್ಶನದಲ್ಲಿ ಮಾತನಾಡಿರುವ ರೇನಿ, ನೀವು ನಂಬಿ ಬಿಡಿ ಇದಕ್ಕೆ ನಮ್ಮ ತಂದೆಯೂ ಕೂಡ ಸಪೋರ್ಟ್ ಮಾಡಿದ್ದಾರೆ. ನಮ್ಮ ಆರ್ಥಿಕ ಪರಿಸ್ಥಿತಿಗೆ ನೊಡಿಕೊಂಡರೆ, ನಮ್ಮ ತಂದೆ ನಾನು ಮಾಡುತ್ತೀರುವ ಕೆಲಸದ ಬಗ್ಗೆ ಹೆಮ್ಮೆ ಪಡುತ್ತಾರೆ. ನೀವು ನಾನು ಏನೂ ಮಾಡುತ್ತಿದ್ದೇನೆ ಎಂಬುದಕ್ಕಿಂತ ನಾನು ಏನೂ ಸಾಧಿಸಿದ್ದೇನೆ ಎಂದು ನೋಡಲು ಇಷ್ಟಪಡುತ್ತೀರಾ ಅಲ್ಲವೇ ಎಂದು ತಿಳಿಸಿದ್ದಾಳೆ.
ಆಸ್ಟ್ರೇಲಿಯಾದಲ್ಲಿ ನಡೆದ ಸೂಪರ್-2 ಕಾರ್ ರೇಸಿಂಗ್ನಲ್ಲಿ ಒಟ್ಟು 17 ರೇಸ್ನಲ್ಲಿ ಭಾಗವಹಿಸಿದ್ದ ರೆನೀ ಕೇವಲು ಒಂದು ಬಾರಿ ಮಾತ್ರ ಟಾಪ್-10ರಲ್ಲಿ ಕಾಣಿಸಿಕೊಂಡಿದ್ದಳು. ಈ ವಿಚಾರದ ಬಗ್ಗೆಯೂ ಮಾತನಾಡಿರುವ ರೆನೀ ಗ್ರೇಸಿ, ಕಾರ್ ರೇಸಿಂಗ್ನಲ್ಲಿ ನಾವು ನಮ್ಮ ಜೀವವನ್ನೇ ಪಣಕ್ಕೆ ಇಟ್ಟು ಕಾರನ್ನು ಓಡಿಸುತ್ತೇವೆ. ಅಲ್ಲಿ ಒಂದು ಸೆಕೆಂಡ್ ಕೂಡ ಲೆಕ್ಕಕ್ಕೆ ಬರುತ್ತದೆ. ಆದರೆ ಅಲ್ಲಿ ಹಣ ಗಳಿಸುವುದು ಬಹಳ ಕಷ್ಟ ಎಂದು ಅಭಿಪ್ರಾಯ ಪಟ್ಟಿದ್ದಾಳೆ.
2014ರಲ್ಲಿ ನಡೆದ ಆಸ್ಟ್ರೇಲಿಯಾನ್ ಕಾರ್ ರೇಸಿಂಗ್ನಲ್ಲಿ ರೆನೀ ಗ್ರೇಸಿ ಮೊದಲು ಕಾರ್ ಓಡಿಸಿದ್ದಳು. ಈಗ ಸಂಪೂರ್ಣವಾಗಿ ನಾನು ಕಾರ್ ರೇಸ್ ಬಿಟ್ಟಿದ್ದೇನೆ. ಸದ್ಯ ನನ್ನ ಫೋಟೋಗಳನ್ನು ಮತ್ತು ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಹಣ ಮಡುತ್ತಿದ್ದೇನೆ. ನನಗೆ ಇನ್ನೂ ಮುಂದೆ ಜೀವನವಿದೆ. ನಾನೂ ಬೇರೆ ಕೆಲಸ ಮಾಡುತ್ತೇನೆ ಎಂದು ರೆನೀ ತಿಳಿಸಿದ್ದಾಳೆ.