ಬೆಂಗಳೂರು: ಅಪ್ರಾಪ್ತೆ ತನ್ನ ತಂದೆಯನ್ನೇ ಕೊಲೆ ಮಾಡಿರುವ ಆಘಾತಕಾರಿ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ.
ಸಪ್ತಿಕ್ ಬ್ಯಾನರ್ಜಿ(45) ಮೃತ ದುರ್ದೈವಿ, ಮೈಕೋ ಲೇಔಟ್ ನ ಮಾರುತಿ ಪ್ಯಾರಡೈಸ್ ಅಪಾಟ್ರ್ಮೆಂಟ್ ನಲ್ಲಿ ನಿನ್ನೆ ಮಧ್ಯರಾತ್ರಿ ಘಟನೆ ನಡೆದಿದ್ದು, ಮೂರ್ನಾಲ್ಕು ವರ್ಷದ ಹಿಂದೆ ಪತ್ನಿ ಮೃತಪಟ್ಟಿದ್ದು, ನೋವಿನಲ್ಲಿದ್ದ ಸಪ್ತಿಕ್ ಖಿನ್ನತೆಗೊಳಗಾಗಿದ್ದ. ಪ್ರತಿ ನಿತ್ಯ ಮನೆಯಲ್ಲೇ ಕುಡಿದು 15 ವರ್ಷದ ಮಗಳು ಮತ್ತು 12 ವರ್ಷದ ಮಗನ ಜೊತೆ ಗಲಾಟೆ ಮಾಡುತ್ತಿದ್ದ.
Advertisement
Advertisement
ಗಲಾಟೆ ಮಾಡಿ, ಮಧ್ಯರಾತ್ರಿಯಾದರೂ ಕುಡಿದು ಹಲ್ಲೆ ಮಾಡುತ್ತಿದ್ದ. ಅಲ್ಲದೆ ಪಿಯಾನೋ ಕೀ ಬೋರ್ಡ್ ವಾದಕನಾಗಿದ್ದ ಮೃತ ಸಪ್ತಿಕ್, ಮಧ್ಯರಾತ್ರಿ ಕುಡಿದು ಜೋರಾಗಿ ನುಡಿಸುತ್ತಿದ್ದ. ಬುಧವಾರವೂ ಅದೇ ರೀತಿ ಕುಡಿದು ಗಲಾಟೆ ಮಾಡಿ ಮಧ್ಯರಾತ್ರಿ ಪಿಯಾನೋ ನುಡಿಸುತ್ತಿದ್ದ. ಇದಕ್ಕೆ ಮಗಳು ಅಕ್ಷೇಪ ವ್ಯಕ್ತಪಡಿಸಿದ್ದಳು. ಇದೇ ವಿಚಾರಕ್ಕೆ ತಂದೆ ಮಗಳನ್ನು ಚಾಕುವಿನಿಂದ ತಿವಿಯಲು ಹೋಗಿದ್ದ. ಈ ವೇಳೆ ತಪ್ಪಿಸಿಕೊಳ್ಳಲು ಮಗಳು ತಂದೆಯನ್ನು ಜೋರಾಗಿ ತಳ್ಳಿದ್ದಾಳೆ.
Advertisement
ಆಗ ತಂದೆ ಕಾಲು ಜಾರಿ ಬಿದ್ದು ಚಾಕುವನ್ನು ತಾನೇ ತಿವಿದುಕೊಂಡಿದ್ದಾನೆ. ಎದೆಗೆ ಚಾಕು ತಿವಿದು ಕೊಂಡಿದ್ದರಿಂದ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಕೋ ಲೇಔಟ್ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 304 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.