– 2 ವರ್ಷ ಜೈಲು ವಾಸ ಅನುಭವಿಸಿದ ಅಮಾಯಕ
– ಇಬ್ಬರು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದಾನೆಂದು ಆರೋಪ
– ಅಕ್ರಮ ಸಂಬಂಧದ ಬಗ್ಗೆ ಪತಿಗೆ ತಿಳಿಯುವ ಭಯದಲ್ಲಿ ಕೃತ್ಯ
ಮುಂಬೈ: ತನ್ನ ಅಕ್ರಮ ಸಂಬಂಧ ಬಯಲಿಗೆ ಬರುತ್ತೆ ಎಂಬ ಭಯದಲ್ಲಿ ಮಹಿಳೆಯೊಬ್ಬಳು ಅಮಾಯಕನ ಮೇಲೆ ಅತ್ಯಾಚಾರ ಆರೋಪ ಹೊರಿಸಿದ್ದಾಳೆ. ಇದರಿಂದಾಗಿ ವ್ಯಕ್ತಿ 2 ವರ್ಷ ಜೈಲು ಶಿಕ್ಷೆ ಅನುಭವಿಸುವಂತಾಗಿದೆ.
ಮಹಿಳೆಯ ಸುಳ್ಳು ಆರೋಪದಿಂದಾಗಿ ಆರೋಪಿ 2 ವರ್ಷ ಜೈಲು ವಾಸ ಅನುಭವಿಸುವಂತಾಗಿದೆ. ತನ್ನ ಇಬ್ಬರು ಮಕ್ಕಳ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೋಕ್ಸೋ ಕಾಯ್ದೆಯಡಿ ಮಹಿಳೆ ದೂರು ಸಲ್ಲಿಸಿದ್ದಳು. ವಿಚಾರಣೆ ನಡೆಸಿದ ಮುಂಬೈನ ಪೋಕ್ಸೋ ಕೋರ್ಟ್, 52 ವರ್ಷದ ಆರೋಪಿಯನ್ನು ಖುಲಾಸೆಗೊಳಿಸಿದೆ. ಅತ್ಯಾಚಾರದ ಸುಳ್ಳು ಆರೋಪಗಳು ಸಾಕಷ್ಟು ನೋವು, ಅವಮಾನ ಹಾಗೂ ವ್ಯಕ್ತಿಯ ಪ್ರತಿಷ್ಠೆಗೆ ಹಾನಿಯುಂಟು ಮಾಡಿದೆ ಎಂದು ಹೇಳಿದೆ.
Advertisement
Advertisement
ತನ್ನ ಇಬ್ಬರು ಮಕ್ಕಳ ಮೇಲೆ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಸುಳ್ಳು ಆರೋಪ ಮಾಡಿದ್ದಳು. ಈ ಕುರಿತು ವಾದ, ವಿವಾದ ಆಲಿಸಿದ ಬಳಿಕ ಮಹಿಳೆ ಸುಳ್ಳು ಆರೋಪ ಮಾಡಿರುವುದು ತಿಳಿದಿದೆ. ಅಲ್ಲದೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಮಹಿಳೆ ಹೊಂದಿದ್ದ ಅಕ್ರಮ ಸಂಬಂಧ ಪತಿಗೆ ತಿಳಿಯುತ್ತದೆ ಎನ್ನುವ ಉದ್ದೇಶದಿಂದ ಮಹಿಳೆ ಈ ರೀತಿ ಸುಳ್ಳು ಆರೋಪ ಮಾಡಿದ್ದಾಳೆ ಎಂದು ನ್ಯಾಯಾಲಯಕ್ಕೆ ತಿಳಿದಿದೆ. ಹೀಗಾಗಿ ಕೋರ್ಟ್ ಆರೋಪಿಯನ್ನು ಖುಲಾಸೆಗೊಳಿಸಿದೆ. ಮಹಿಳೆ ಆರೋಪಿ ವಿದೇಶದಲ್ಲಿ ಕೆಲಸ ಮಾಡುತ್ತಾರೆ.
Advertisement
ಆರೋಪಿ ಮಹಿಳೆಯ ಕೌಟುಂಬಿಕ ಸ್ನೇಹಿತರಾಗಿದ್ದು, ನೀನು ಇನ್ನೊಬ್ಬ ವ್ಯಕ್ತಿಯೊಂದಿಗೆ ಹೊಂದಿದ ಅಕ್ರಮ ಸಂಬಂಧದ ಕುರಿತು ವದಂತಿ ಹಬ್ಬುತ್ತಿದೆ. ಅವನಿಂದ ದೂರ ಇರು ಎಂದು ಸಲಹೆ ನೀಡಿದ್ದ. ಇದರಿಂದಾಗಿ ಮಹಿಳೆ ಆತನ ಮೇಲೆ ಸುಳ್ಳು ಆರೋಪ ಹೊರಿಸಿದ್ದಾಳೆ.
Advertisement
ಮಹಿಳೆ ಯಾವುದೇ ವ್ಯಕ್ತಿಯೊಂದಿಗೆ ಸಂಪರ್ಕ ಹೊಂದಬಹುದು ಎಂದು ಇದೇ ವೇಳೆ ಕೋರ್ಟ್ ಹೇಳಿದೆ. ತಾಯಿ ಏನೇನು ಹೇಳಿಕೊಟ್ಟಿದ್ದಾಳೆ ಎಂಬುದರ ಕುರಿತು ಮಕ್ಕಳು ತಿಳಿಸಿದ್ದಾರೆ. ಮಕ್ಕಳನ್ನು ನಿಯಂತ್ರಿಸಲು ತಾಯಿ ಅವರ ಭಾವನಗೆಳನ್ನು ಬಳಸಿಕೊಂಡಿದ್ದಾಳೆ. ಅಲ್ಲದೆ ಮಹಿಳೆ ಆಗಾಗ ಹೈಪರ್ ಆಗುತ್ತಾಳೆ. ನಿರಂತರವಾಗಿ ಅಳುವ ಮೂಲಕ ಮಕ್ಕಳನ್ನು ಹೆದರಿಸುತ್ತಿದ್ದಳು. ತಮ್ಮ ತಾಯಿಯ ಮೇಲಿನ ಪ್ರೀತಿಯಿಂದ ಆಕೆ ಹೇಳಿದ್ದನ್ನು ಮಕ್ಕಳು ಮಾಡುತ್ತಿದ್ದರು ಎಂದು ನ್ಯಾಯಾಲಯ ಸಾಕ್ಷ್ಯಗಳ ಆಧಾರದ ಮೇಲೆ ಹೇಳಿದೆ.
ಮಹಿಳೆಯ ಆರೋಪವನ್ನು ವೈದ್ಯಕೀಯ ಸಾಕ್ಷ್ಯಗಳು ತೋರಿಸುತ್ತಿಲ್ಲ. ಹೀಗಾಗಿ ಮಹಿಳೆ ಹಾಗೂ ಮಕ್ಕಳ ಆರೋಪವನ್ನು ನಂಬಲು ಇದು ಸೂಕ್ತ ಪ್ರಕರಣವಲ್ಲ ಎಂದು ನ್ಯಾಯಾಧೀಶರು ತಿಳಿಸಿದ್ದಾರೆ.
ಅಲ್ಲದೆ ಪ್ರಕರಣದ ಸಾಕ್ಷ್ಯಾಧಾರಗಳು ವಿಶ್ವಾಸಾರ್ಹವಾಗಿಲ್ಲ, ನಂಬಲು ಸಾಧ್ಯವಿಲ್ಲ. ಸಂತ್ರಸ್ತರ ಮೇಲೆ ಯಾವುದೇ ಗಾಯಗಳು ಕಂಡು ಬಂದಿಲ್ಲ. ಹೀಗಾಗಿ ಪ್ರಾಸಿಕ್ಯೂಟ್ರಿಕ್ಸ್ ಅವಲಂಬಿಸುವ ನಿಯಮ ಸಹ ಅನ್ವಯಿಸುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಪ್ರಕರಣದ ಆರೋಪಿಯು ಜುಲೈ 18,2018ರಂದು ಬಂಧನಕ್ಕೊಳಗಾಗಿದ್ದ. ಇದೀಗ ಕೋರ್ಟ್ ಖುಲಾಸೆಗೊಳಿಸಿದೆ.