ನವದೆಹಲಿ: ಶಾಂಘೈ ಸಹಕಾರ ಸಂಘಟನೆ(ಎಸ್ಸಿಒ) ಸದಸ್ಯ ರಾಷ್ಟ್ರಗಳ ಭದ್ರತಾ ಸಲಹೆಗಾರರ ಸಭೆಯ ವೇಳೆ ಅಕ್ರಮ ನಕ್ಷೆಯನ್ನು ಪ್ರದರ್ಶಿಸಿದ ಪಾಕಿಸ್ತಾನಕ್ಕೆ ಅಜಿತ್ ದೋವಲ್ ಭರ್ಜರಿಯಾಗಿ ಬಿಸಿ ಮುಟ್ಟಿಸಿದ್ದಾರೆ.
ಮಂಗಳವಾರ ರಷ್ಯಾ ನೇತೃತ್ವದಲ್ಲಿ ಆಯೋಜಿಸಿದ್ದ ವಿಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಭಾರತ ಪರವಾಗಿ ದೋವಲ್ ನೇತೃತ್ವದಲ್ಲಿ ಅಧಿಕಾರಿಗಳು ಪಾಲ್ಗೊಂಡಿದ್ದರು. ಈ ಸಭೆಯಲ್ಲಿ ಪಾಕಿಸ್ತಾನ ಇತ್ತೀಚೆಗೆ ಬಿಡುಗಡೆ ಮಾಡಿದ್ದ ಅಕ್ರಮ ನಕ್ಷೆಯನ್ನು ಪ್ರದರ್ಶಿಸಿತ್ತು. ಪಾಕಿಸ್ತಾನ ನಿಯಮಗಳನ್ನು ಉಲ್ಲಂಘಿಸಿ ಈ ನಕ್ಷೆಯನ್ನು ತೋರಿಸಿದ್ದಕ್ಕೆ ಪ್ರತಿಭಟನೆಯ ಭಾಗವಾಗಿ ಭಾರತ ಸಭೆಯಿಂದ ಹೊರ ನಡೆದಿದೆ. ಇದನ್ನೂ ಓದಿ: ಶ್ವೇತಭವನದಲ್ಲಿ ಪ್ರಧಾನಿಯನ್ನು ಮುಜುಗರದಿಂದ ಪಾರು ಮಾಡಿದ್ರು ಅಜಿತ್ ದೋವಲ್!
Advertisement
https://twitter.com/MichailBoris/status/1305826574919499777
Advertisement
ಪಾಕಿಸ್ತಾನ ಅಕ್ರಮ ನಕ್ಷೆಯನ್ನು ಸಭೆಯಲ್ಲಿ ಬಳಸುವುದಕ್ಕೆ ಭಾರತ ಮೊದಲೇ ಆಕ್ಷೇಪ ವ್ಯಕ್ತಪಡಿಸಿತ್ತು. ನಕ್ಷೆಯನ್ನು ಪ್ರಸ್ತುತಪಡಿಸದಂತೆ ಪಾಕಿಸ್ತಾನಕ್ಕೆ ರಷ್ಯಾ ಸೂಚಿಸಿತ್ತು. ಆದರೂ ಪಾಕಿಸ್ತಾನದ ರಾಷ್ಟ್ರೀಯ ಭದ್ರತೆ ಪ್ರತಿನಿಧಿಯಾಗಿ ಭಾಗವಹಿಸಿದ್ದ ಪ್ರಧಾನಮಂತ್ರಿಯ ವಿಶೇಷ ಸಹಾಯಕ ಮೊಯೀದ್ ಡಬ್ಲ್ಯೂ ಯೂಸುಫ್ ನಕ್ಷೆಯನ್ನು ಪ್ರಸ್ತುತ ಪಡಿಸಿದ್ದರು.
ಇದನ್ನೂ ಓದಿ: ವಿಶ್ವಸಂಸ್ಥೆಯಲ್ಲಿ ಚೀನಾವನ್ನು ಸೋಲಿಸಿದ ಭಾರತ
Advertisement
Advertisement
ಪಾಕಿಸ್ತಾನದ ನಡೆ ಸಭೆಯ ನಿಯಮಾವಳಿಯ ಉಲ್ಲಂಘನೆ ಆಗಿದ್ದ ಕಾರಣ ಭಾರತ ಹೊರ ನಡೆದಿದೆ. ಈ ಸಭೆಯನ್ನು ಆಯೋಜಿಸಿದ್ದ ರಷ್ಯಾ ಕೂಡ ಪಾಕಿಸ್ತಾನದ ನಡೆಯನ್ನು ಖಂಡಿಸಿದೆ. ಸಭೆಯಲ್ಲಿ ಪಾಲ್ಗೊಂಡಿದ್ದಕ್ಕೆ ರಷ್ಯಾದ ರಾಷ್ಟ್ರೀಯ ಭದ್ರತಾ ಸಲಹೆಗಾರ ನಿಕೊಲಾಯ್ ಅವರು ಭಾರತಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಜಮ್ಮು- ಕಾಶ್ಮೀರ, ಲಡಾಖ್ ಹಾಗೂ ಗುಜರಾತ್ನ ಕೆಲವು ಭಾಗಗಳನ್ನು ಒಳಗೊಂಡ ಹೊಸ ನಕ್ಷೆಯನ್ನು ಆ.4ರಂದು ಪಾಕಿಸ್ತಾನ ಬಿಡುಗಡೆ ಮಾಡಿತ್ತು. ಈ ನಕ್ಷೆಯನ್ನು ಮೊಯೀದ್ ಡಬ್ಲ್ಯೂ ಯೂಸುಫ್ ಕುಳಿತುಕೊಂಡ ಗೋಡೆಯ ಹಿಂಬಂದಿಯಲ್ಲಿ ಪ್ರದರ್ಶಿಸಲಾಗಿತ್ತು.