ಹೈದರಾಬಾದ್: ಹತ್ತು ವರ್ಷದ ಬಾಲಕನೋರ್ವ ಬ್ರೈನ್ ಕ್ಯಾನ್ಸರ್ನಿಂದ ಬಳಲುತ್ತಿರುವ ತನ್ನ ಸಹೋದರಿಗೆ ಚಿಕಿತ್ಸೆ ಕೊಡಿಸಲು ಪಕ್ಷಿಗಳ ಆಹಾರವನ್ನು ಮಾರಾಟ ಮಾಡುವ ಮೂಲಕ ಹಣ ಸಂಗ್ರಹಿಸುತ್ತಿದ್ದಾನೆ.
ಹೈದರಾಬಾದಿನ ಸೈಯದ್ ಅಜೀಜ್ನ ಸಹೋದರಿ ಕಳೆದ ಎರಡು ವರ್ಷಗಳಿಂದ ಬ್ರೈನ್ ಕ್ಯಾನ್ಸರ್ನಿಂದ ಬಳಲುತ್ತಿದ್ದು, ಕುಟುಂಬ ನಿರ್ವಹಣೆಗೆ ಬಾಲಕ ಬೀಜಗಳನ್ನು ಮಾರಾಟ ಮಾಡುತ್ತಿದ್ದಾನೆ. ವ್ಯಾಪಾರದಲ್ಲಿ ಮಾಡಲು ನಿರ್ಧರಿಸಿದರೂ, ಸೈಯದ್ ಅಜೀಜ್ ಶಿಕ್ಷಣವನ್ನು ಬಿಡದೇ ವಿದ್ಯಾಭ್ಯಾಸವನ್ನು ಮುಂದುವರಿಸುತ್ತಿದ್ದಾನೆ. ಈ ಕುರಿತಂತೆ ಸೈಯದ್ ಅಜೀಜ್, ನಾನು ಬೆಳಗ್ಗೆ 6 ರಿಂದ 8 ವರೆಗೆ ಪಕ್ಷಿ ಆಹಾರವನ್ನು ಮಾರಾಟ ಮಾಡುತ್ತೇನೆ ಮತ್ತು 8 ರಿಂದ ಸಂಜೆ 5 ಗಂಟೆಯವರೆಗೆ ಮದರಸದಲ್ಲಿರುವ ನನ್ನ ತರಗತಿಗೆ ಹಾಜರಾಗುತ್ತೇನೆ ಎಂದಿದ್ದಾನೆ.
Advertisement
Advertisement
ಸೈಯದ್ ಅಜೀಜ್ ತಾಯಿ ಬಿಲ್ಕೆಸ್ ಬೇಗಂ, ನನ್ನ ಮಗಳಿಗೆ 2 ವರ್ಷಗಳ ಹಿಂದೆ ಮೆದುಳಿನ ಕ್ಯಾನ್ಸರ್ ಇರುವುದು ಪತ್ತೆಯಾಯಿತು. ಅಂದಿನಿಂದ ಇಡೀ ಕುಟುಂಬ ಅವಳ ಚಿಕಿತ್ಸೆಗಾಗಿ ಕಷ್ಟವನ್ನು ಎದುರಿಸುತ್ತಿದ್ದೇವೆ. ಮೊದಲು ವೈದ್ಯರು ಆಕೆಯ ಆರೋಗ್ಯ ಸ್ಥಿತಿಯ ಬಗ್ಗೆ ಹೇಳಿದಾಗ ನಮಗೆ ಭಯವಾಯಿತು. ಸಕೀನಾರನ್ನು ಗುಣಮುಖಪಡಿಸಬೇಕೆಂದರೆ ರೇಡಿಯೋ ಥೆರಪಿಗೆ ಒಳಪಡಿಸಬೇಕು ಎಂದು ವೈದ್ಯರು ತಿಳಿಸಿದರು. ನಾವು ತೆಲಂಗಾಣ ಸರ್ಕಾರದಿಂದ ಹಣವನ್ನು ಸ್ವೀಕರಿಸಿ ಮತ್ತು ಆ ಸಂಪೂರ್ಣ ಹಣವನ್ನು ರೇಡಿಯೋ ಥೆರಪಿಗೆ ಬಳಸಿದ್ದೇವೆ. ಕುಟುಂಬದ ಸ್ಥಿತಿಯನ್ನು ನೋಡುತ್ತಾ ಬಂದ ಮಗ ಸೈಯದ್ ಅಜೀಜ್ ಸಹಾಯ ಮಾಡಲು ನಿರ್ಧರಿಸಿದ್ದಾನೆ. ಬಳಿಕ ಪಕ್ಷಿಗಳ ಆಹಾರವನ್ನು ಮಾರಾಟ ಮಾಡುತ್ತೇನೆ ಎಂದು ತಿಳಿಸಿ ರಸ್ತೆಗಳಲ್ಲಿ ಮೇಜಿನ ಮೇಲೆ ಪಕ್ಷಿಗಳ ಆಹಾರ ಪದಾರ್ಥವನ್ನು ಮಾರಾಟ ಮಾಡುತ್ತಿದ್ದಾನೆ ಎಂದು ಹೇಳಿದರು.
Advertisement
Telangana | A 10-yr-old boy sells bird food in Hyderabad to pay for his sister Sakeena Begum’s brain cancer treatment.
“We haven’t received any help. We received govt funds only till radiation therapy. The medication is too expensive,” says Bilkes Begum, Sakeena’s mother pic.twitter.com/S5G5l9cKWq
— ANI (@ANI) August 6, 2021
Advertisement
ಪಕ್ಷಿ ಆಹಾರವನ್ನು ಮಾರಾಟ ಮಾಡುವುದರಿಂದ ಬರುವ ಇಬ್ಬರ ಹಣದಿಂದ ಔಷಧಿ, ಎಂಆರ್ಐ, ಎಕ್ಸ್ ರೇ ಮತ್ತು ರಕ್ತ ಪರೀಕ್ಷೆ ಹೀಗೆ ಚಿಕಿತ್ಸೆಯ ಖರ್ಚುಗಳನ್ನು ನೋಡಿಕೊಳ್ಳಲಾಗುತ್ತದೆ. ಸೈಯದ್ ಅಜೀಜ್ ತಂದೆ ಮನೆಗಳಿಗೆ ಬಣ್ಣ ಹೊಡೆಯುವ ಕೆಲಸ ಮಾಡುತ್ತಿದ್ದು, ಅವರು ಆದಾಯದಿಂದ ಕುಟುಂಬ ನಿರ್ವಹಣೆ ಆಗುತ್ತಿದೆ. ಇದನ್ನೂ ಓದಿ:ನನಗೆ ಪರೀಕ್ಷೆ ಮಾಡಬೇಕು ಅಂತ ಯಾವುದೇ ಹಠ, ಪ್ರತಿಷ್ಠೆ ಇರಲಿಲ್ಲ: ಸುರೇಶ್ ಕುಮಾರ್