ಮುಂಬೈ: ಅಕ್ಕ ರಿಯಾ ಚಕ್ರವರ್ತಿಗಾಗಿ ಡ್ರಗ್ಸ್ ಖರೀದಿಸುತ್ತಿದ್ದೆ ಎಂದು ಎನ್ಸಿಬಿ ಮುಂದೆ ಶೌವಿಕ್ ಚಕ್ರವರ್ತಿ ತಮ್ಮ ಹೇಳಿಕೆ ದಾಖಲಿಸಿರುವ ಬಗ್ಗೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಶುಕ್ರವಾರ ವಿಚಾರಣೆಗೆ ಹಾಜರಾಗಿದ್ದ ಶೌವಿಕ್ ಚಕ್ರವರ್ತಿಯನ್ನು ಎನ್ಸಿಬಿ ಬಂಧಿಸಿದೆ. ಇತ್ತ ರಿಯಾ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ್ ನನ್ನ ಸಹ ಬಂಧಿಸಲಾಗಿದೆ.
Advertisement
ಶೌವಿಕ್ ಡ್ರಗ್ಸ್ ಖರೀದಿಗಾಗಿ ಸಂಬಂಧಿ ಬಾಸಿತ್ ಪರಿಹಾರ್ ಮತ್ತು ಜೈದ್ ಜೊತೆ ಸಂಪರ್ಕದಲ್ಲಿದ್ದನು. ಶೌವಿಕ್ ಫುಟ್ಬಾಲ್ ಕ್ಲಬ್ ನಲ್ಲಿ ಬಾಸಿತ್ ನನ್ನ ಮೊದಲ ಬಾರಿಗೆ ಭೇಟಿಯಾಗಿದ್ದ. ನಂತರ ಡ್ರಗ್ ಪೆಡ್ಲರ್ ಸೋಹೆಲ್ ಎಂಬಾತನನ್ನ ಬಾಸಿತ್ ಮೂಲಕ ಶೌವಿಕ್ ಭೇಟಿಯಾಗಿದ್ದ. ಸೋಹೆಲ್ ಇವರಿಗೆ ಡ್ರಗ್ಸ್ ಪೂರೈಕೆ ಮಾಡುತ್ತಿದ್ದನು. ಇದನ್ನೂ ಓದಿ: ರಿಯಾ ಚಕ್ರವರ್ತಿ ಹೊರ ನಡೆದ ಬಳಿಕ ಸುಶಾಂತ್ ಮನೆಯಲ್ಲಿ ಜೂನ್ 8 ರಿಂದ 14ರ ನಡುವೆ ನಡೆದಿದ್ದೇನು?
Advertisement
Advertisement
ಶೌವಿಕ್ ಚಕ್ರವರ್ತಿಗಾಗಿ ನಾನು ಡ್ರಗ್ಸ್ ಖರೀದಿಸುತ್ತಿದ್ದೆ ಎಂದು ಬಾಸಿತ್ ಹೇಳಿದ್ದಾನೆ. ವಿಚಾರಣೆ ವೇಳೆ ಸ್ಯಾಮುಯೆಲ್ ಮಿರಂಡಾ ಸಹ ಸುಶಾಂತ್ ಗಾಗಿ ಡ್ರಗ್ಸ್ ಖರೀದಿಸುತ್ತಿರೋದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ವರದಿಯಾಗಿದೆ. ಸ್ಯಾಮುಯೆಲ್ ಜೈದ್ ಎಂಬವನ ಮೂಲಕ ಡ್ರಗ್ಸ್ ಖರೀದಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಸುಶಾಂತ್ ನಿಧನದ ಬಳಿಕ ಅಂದ್ರೆ ಜುಲೈ ಅಂತ್ಯದವರೆಗೂ ಸ್ಯಾಮುಯೆಲ್ ಮಿರಾಂಡಗೆ ಜೈದ್ ಡ್ರಗ್ಸ್ ಪೂರೈಕೆ ಮಾಡಿದ್ದ. ಶೌವಿಕ್ ಸಹ ನಗದು ನೀಡಿ ಜೈದ್ ಬಳಿ ಡ್ರಗ್ಸ್ ಪಡೆದುಕೊಂಡಿದ್ದನು. ಇದನ್ನೂ ಓದಿ: ಸುಶಾಂತ್ ಸಿಂಗ್ ರಜಪೂತ್ ಕೇಸ್- ಸ್ಪೋಟಕ ಆಡಿಯೋ ಕ್ಲಿಪ್ ಔಟ್
Advertisement
ಶುಕ್ರವಾರ ಪ್ರಕರಣದ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ ಎನ್ಸಿಬಿ ಡೈರೆಕ್ಟರ್ ಎಂಕೆ ಜೈನ್, ರಿಯಾ ಚಕ್ರವರ್ತಿ ಸಹೋದರ ಶೋವಿಕ್ ನೀಡಿದ ಮಾಹಿತಿ ಅನ್ವಯ ಸುಶಾಂತ್ ಸಿಂಗ್ ಮ್ಯಾನೇಜರ್ ಡ್ರಗ್ಸ್ ಸಂಗ್ರಹಿಸಿರುವ ಬಗ್ಗೆ ನಮಗೆ ತಿಳಿದು ಬಂದಿದೆ. ಈ ಹಿನ್ನೆಲೆಯಲ್ಲಿ ನಟಿ ರಿಯಾ, ಆಕೆಯ ಸಹೋದರ ಶೋವಿಕ್ ಹಾಗೂ ಸ್ಯಾಮುಯೆಲ್ಗೆ ಸಮನ್ಸ್ ಜಾರಿ ಮಾಡುತ್ತಿದ್ದೇವೆ ಎಂದು ತಿಳಿಸಿದ್ದಾರೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಸ್ಯಾಮುಯೆಲ್ನನ್ನು ಸುಶಾಂತ್ ಸಿಂಗ್ ಮನೆಯಲ್ಲಿ ಮ್ಯಾನೇಜರ್ ಆಗಿ ರಿಯಾ ನೇಮಕ ಮಾಡಿದ್ದಳು. ಆಕೆಯಾ ಕಾರಣದಿಂದಲೇ ಸುಶಾಂತ್ ಡ್ರಗ್ಸ್ ಸೇವನೆ ಆರಂಭಿಸಿದ್ದ ಎಂಬ ಅನುಮಾನದ ಪ್ರಶ್ನೆ ಎದ್ದಿದೆ. ಇದನ್ನೂ ಓದಿ: ಹೌದು, ಸುಶಾಂತ್ ಶವದ ಮುಂದೆ ಕ್ಷಮೆ ಕೇಳಿದ್ದೆ: ರಿಯಾ ಚಕ್ರವರ್ತಿ