– ಸುಖಾಸುಮ್ಮನೆ ಸುಳ್ಳು ಸುದ್ದಿ ಹಬ್ಬಿಸಬೇಡಿ
– ಆಸ್ಪತ್ರೆಯಿಂದ ವಿಡಿಯೋ ಮೂಲಕ ಸ್ಪಷ್ಟನೆ
ಬೆಂಗಳೂರು: ಕೊರೊನಾ ಸೋಂಕಿದ್ದರೂ ಆಸ್ಪತ್ರೆಗೆ ಹೋಗುವುದಿಲ್ಲ ಎಂದು ಹಠ ಹಿಡಿದಿದ್ದ ಕಾಪೋರೇಟರ್ ಇಮ್ರಾನ್ ಪಾಷಾ, ತಮ್ಮ ಮನೆ ಬಳಿ ದೊಡ್ಡ ಹೈಡ್ರಾಮಾ ಮಾಡಿದ್ದರು. ಇದೀಗ ಆಸ್ಪತ್ರೆಯಿಂದಲೇ ವಿಡಿಯೋ ಬಿಡುಗಡೆ ಮಾಡಿದ್ದು, ನಾಲ್ಕು ಜನಕ್ಕೆ ಬುದ್ಧಿ ಹೇಳುವವನು ನಾನು. ಹಾಗೆ ಮಾಡಲು ಸಾಧ್ಯವೇ, ಇದೆಲ್ಲ ಸುಳ್ಳು ಸುದ್ದಿ ಎಂದು ಸ್ಪಷ್ಟನೆ ನೀಡಿದ್ದಾರೆ.
Advertisement
ಆಸ್ಪತ್ರೆಯಿಂದಲೇ ವಿಡಿಯೋ ಮಾಡಿರುವ ಇಮ್ರಾನ್ ಪಾಷಾ, ಮಾಧ್ಯಮಗಳೇ ಸೃಷ್ಟಿಸಿಕೊಂಡು ಏನೇನೋ ಸುದ್ದಿ ಬಿತ್ತರಿಸಿವೆ. ಕೊರೊನಾ ಪಾಸಿಟಿವ್ ಇದ್ದೂ ಆಸ್ಪತ್ರೆಗೆ ಹೋಗಿಲ್ಲ ಎಂದು ಸುದ್ದಿ ಮಾಡಿವೆ. ಇದು ಸುಳ್ಳು ಸುದ್ದಿ. ನಾನೊಬ್ಬ ಜನಪ್ರತಿನಿಧಿಯಾಗಿ, ಇತತರಿಗೆ ಬುದ್ಧಿ ಹೇಳುವವನಾಗಿ ಈ ರೀತಿ ಮಾಡಲು ಸಾಧ್ಯವೇ, ಇದು ಸುಳ್ಳು. ನಾನು ಆ ರೀತಿ ಮಾಡಿಲ್ಲ ಎಂದು ಹೇಳಿದ್ದಾರೆ.
Advertisement
ಘಟನೆ ನಡೆದ ಹಿಂದಿನ ದಿನ ರಾತ್ರಿ ನನಗೆ ಕೊರೊನಾ ವೈರಸ್ ಇದೆ ಎಂದು ಶಂಕಿಸಲಾಯಿತು. ಕನ್ಫರ್ಮ್ ಇಲ್ಲ ಬೆಳಗ್ಗೆ ಖಚಿತಪಡಿಸುತ್ತೇವೆ ಎಂದು ಹೇಳಿದರು. ಸರಿ ರಾತ್ರಿ ಏನು ಮಾಡಲಿಕ್ಕಾಗುತ್ತೆ. ಅಷ್ಟೊತ್ತಿಗೆ ಎಲ್ಲಿ ಹೋಗುವುದು ಎಂದು ಯೋಚಿಸಿ, ಬೆಳಗ್ಗೆ ಎದ್ದು ಹೋಗೋಣ ಎಂದು ಮನೆಗೆ ಹೋದೆ. ಕುಟುಂಬಸ್ಥರನ್ನೆಲ್ಲ ಬೇರೆ ಮಾಡಿ. ಸೆಲ್ಫ್ ಕ್ವಾರಂಟೈನ್ ಮಾಡಿಕೊಂಡು ರೂಮಲ್ಲಿ ಮಲಗಿದ್ದೆ ಎಂದು ತಿಳಿಸಿದ್ದಾರೆ.
Advertisement
Advertisement
ಬೆಳಗ್ಗೆ ಅಂಬುಲೆನ್ಸ್ ಬಂತು, ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಬಂದೆ ಅಷ್ಟೇ, ಅದು ಬಿಟ್ಟರೆ ಬೇರೆನೂ ಇಲ್ಲ. ಆದರೆ ಮಾಧ್ಯಮಗಳಲ್ಲಿ ಇಮ್ರಾನ್ ಪಾಷಾ ಬರಲಿಲ್ಲ. ನಿರ್ಲಕ್ಷ್ಯ ಮಾಡಿದ್ದಾರೆ, ಬೇಜವಾಬ್ದಾರಿ ವರ್ತನೆ ಎಂದು ಹೇಳಿದರು. ಈ ರೀತಿ ವೈದ್ಯರು, ಪೊಲೀಸರು ಹೇಳಿದ್ದರಾ, ನೀವೇ ಸುದ್ದಿ ಮಾಡಿಕೊಂಡು ಏನೇನೋ ತೋರಿಸುತ್ತಿದ್ದೀರಿ. ನಾನು ಆ ತರ ಮಾಡಿಲ್ಲ. ಸುಖಾ ಸುಮ್ಮನೇ ಏನೇನೋ ಸುದ್ದಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸುಮಾರು ಜನ ನಾನು ಗುಣಮುಖವಾಗಲಿ ಎಂದು ಪ್ರಾರ್ಥಿಸುತ್ತಿದ್ದಾರೆ. ನಾನು ಸಾಮಾಜಿಕ ಜಾಲತಾಣಗಳಲ್ಲಿ ಗಮನಿಸಿದೆ. ಅವರೆಲ್ಲರಿಗೂ ಧನ್ಯವಾದ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.