ಬೆಂಗಳೂರು: ಸ್ಯಾಂಡಲ್ವುಡ್ ನಟ ಅರ್ಜುನ್ ಗೌಡ ಕಾಶಿಗೆ ತೆರಳಿ, ಕೊರೊನಾದಿಂದ ಮೃತಪಟ್ಟವರ ಅಸ್ಥಿಯನ್ನು ಗಂಗೆಯಲ್ಲಿ ವಿಸರ್ಜಿಸಿದ್ದಾರೆ.
Advertisement
ಕೊರೊನಾ 2ನೇ ಅಲೆ ದೇಶದಾದ್ಯಂತ ಅಬ್ಬರಿಸಿದಾಗಿನಿಂದಲೂ ಕೊರೊನಾದಿಂದ ಬಳಲಿರುವ ಜನರಿಗೆ ಸಹಾಯ ಮಾಡಲು ಸ್ವರ್ಯ ಪ್ರೇರಿತವಾಗಿ ಅರ್ಜುನ್ ಗೌಡ ಕೊರೊನಾ ವಾರಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಜನರ ಸಹಾಯಕ್ಕೆ ನಿಂತಿರುವ ಅರ್ಜುನ್, ಅಂಬುಲೆನ್ಸ್ ಡ್ರೈವರ್ ಆಗಿ ಆಸ್ಪತ್ರೆಗಳಿಗೆ ಸೋಂಕಿತರನ್ನು ಕರೆದುಕೊಂಡು ಹೋಗುವುದರ ಜೊತೆಗೆ, ಮೃತ ದೇಹಗಳ ಅಂತ್ಯ ಸಂಸ್ಕಾರವನ್ನೂ ಮಾಡುತ್ತಿದ್ದಾರೆ. ಇದೀಗ ಕೊರೊನಾದಿಂದ ಮೃತಪಟ್ಟವರ ಅಸ್ಥಿಯನ್ನು ನಟ ಅರ್ಜುನ್ ಗೌಡಾ ಕಾಶಿಗೆ ತೆರಳಿ ಗಂಗೆಯಲ್ಲಿ ವಿಸರ್ಜಿಸಿದ್ದಾರೆ.
Advertisement
View this post on Instagram
Advertisement
ಸುಮಾರು 100 ಮಂದಿ ಕೊರೊನಾ ಸೋಂಕಿತರ ದೇಹವನ್ನು ಸಂಸ್ಕಾರ ಮಾಡಿದ್ದ ಅರ್ಜುನ್ ಗೌಡ, ಸದ್ಯ ಅದೇ ಮೃತ ದೇಹಗಳ ಅಸ್ಥಿಯನ್ನೂ ತೆಗೆದುಕೊಂಡು ಕಾಶಿಯ ಗಂಗೆಯಲ್ಲಿ ಬಿಟ್ಟಿದ್ದಾರೆ. ಅದೆಷ್ಟೋ ಮನೆಯವರು ಕೊರೊನಾದಿಂದ ಮೃತರಾದ ತಂದೆ, ತಾಯಿಯರ ದೇಹದ ಬಳಿಯೂ ಬರದಿದ್ದಾಗೆ ಖದ್ದು ಅರ್ಜುನ್ ಅವರು ಮೃತದೇಹಗಳನ್ನು ತೆಗೆದುಕೊಂಡು ಹೋಗಿ ಅಂತ್ಯಸಂಸ್ಕಾರ ನೆರವೇರಿಸಿದ್ದಾರೆ. ಅದೇ ರೀತಿ ಆಮೃತದೇಹಗಳ ಅಸ್ಥಿಯನ್ನು ಗಂಗೆಯಲ್ಲಿ ವಿಸರ್ಜನೆ ಮಾಡಿದ್ದಾರೆ. ಇದನ್ನೂ ಓದಿ: ಹೆಣ, ಔಷಧಿಯಲ್ಲೂ ಜನರ ದುಡ್ಡನ್ನು ಲೂಟಿ ಹೊಡೆದ ಪಿಕ್ ಪಾಕೆಟ್ ಸರ್ಕಾರ: ಡಿಕೆಶಿ
Advertisement
ಅರ್ಜುನ್ ಈ ಸೇವೆಗೆ ಪ್ರಾಜೆಕ್ಟ್ ಸ್ಮೈಲ್ ಟ್ರಸ್ಟ್ ಅಂತ ಹೆಸರಿಟ್ಟಿದ್ದು, ರೋಗಿಗಳನ್ನೂ ಆಸ್ಪತ್ರೆಗೆ ಕರೆದುಕೊಂಡು ಹೋಗುವುದು ಹಾಗೂ ಮೃತ ದೇಹಗಳ ಅಂತ್ಯಸಂಸ್ಕಾರದ ನೆರವಿನ ಜೊತೆಗೆ ಆಕ್ಸಿಜನ್ ಪೂರೈಸುವಲ್ಲೂ ಅರ್ಜುನ್ ಸಹಾಯ ಮಾಡೋದಾಗಿ ಹೇಳಿದ್ದರು. ಅದರಂತೆ ಕೆಲಸವನ್ನೂ ಮಾಡಿದ್ದಾರೆ. ಅರ್ಜುನ್ ಅವರ ಸೇವೆಗೆ ಹಲವರು ಸೋಶಿಯಲ್ ಮೀಡಿಯಾಗಳಲ್ಲಿ ಮೆಚ್ಚುಗೆಯ ಕಮೆಂಟ್ ಮಾಡುತ್ತಿದ್ದಾರೆ.