ಧಾರವಾಡ: ಅಂಬುಲೆನ್ಸ್ ಚಾಲಕನ ಅಜಾಗರೂಕತೆಯಿಂದ ರೋಗಿಯೊಬ್ಬರು ಸಾವನ್ನಪ್ಪಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಧಾರವಾಡ ತಾಲೂಕಿನ ಕೋಟೂರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಖುತಬುದ್ದಿನ್ ನನ್ನೆಸಾಬನವರ (50) ಮೃತಪಟ್ಟ ವ್ಯಕ್ತಿ. ಕಳೆದ ರಾತ್ರಿ ಖುತಬುದ್ದಿನರಿಗೆ ಎದೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಅವರನ್ನು ಕೋಟೂರು ಗ್ರಾಮದಿಂದ ಧಾರವಾಡ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯುತ್ತಿರುವ ವೇಳೆ ದಾರಿ ಮಧ್ಯೆ ಕೊನೆಯುಸಿರೆಳೆದಿದ್ದಾರೆ.
ಮೃತ ವ್ಯಕ್ತಿಯ ಕುಟುಂಬದವರು ವೀಡಿಯೋವೊಂದನ್ನು ಮಾಡಿ, ಅಂಬುಲೆನ್ಸ್ ಚಾಲಕ ಆಕ್ಸಿಜನ್ ನೀಡದೇ ಅಜಾಗರೂಕತೆ ತೋರಿಸಿದ್ದಾನೆ. ಅಲ್ಲದೇ ಅಂಬುಲನ್ಸ್ನಲ್ಲಿ ಚಾಲಕನೊಬ್ಬನೇ ರೋಗಿಗೆ ಆಕ್ಸಿಜನ್ ಹಾಕಿದ್ದ, ಅಂಬುಲನ್ಸ್ನಲ್ಲಿ ನರ್ಸ್ ಕೂಡಾ ಇರಲಿಲ್ಲ ಎಂದು ಆರೋಪಿಸಿದ್ದಾರೆ. ಜಿಲ್ಲಾ ಆಸ್ಪತ್ರೆಗೆ ಬರುತಿದ್ದಂತೆಯೇ ಅಂಬುಲನ್ಸ್ ಚಾಲಕ ವಾಹನ ನಿಲ್ಲಿಸಿ ಪರಾರಿಯಾದ್ದಾನೆ ಎಂದು ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಿಸಲು ರೋಗಿಯನ್ನು ಗ್ರಾಮದಿಂದ ಅರ್ಧ ದಾರಿಗೆ ಟಮ್ ಟಮ್ ವಾಹನದಲ್ಲಿ ಮನೆಯವರೇ ಕರೆದೊಯ್ದಿದ್ದರು. ನಂತರ ಅರ್ಧ ದಾರಿಗೆ ಬಂದ ಮೇಲೆ ಅಂಬುಲನ್ಸ್ ಬಂದಿತ್ತು. ಇದನ್ನೂ ಓದಿ: ಡ್ರೋನ್ ಮೂಲಕ ಔಷಧಿಗಳ ರವಾನೆಯ ಪರೀಕ್ಷಾರ್ಥ ಹಾರಾಟ