– ಅಭಿಮಾನಿಗಳ ಬಗ್ಗೆ ಮಾತಾಡಲು ನಂಗೆ ಅಧಿಕಾರವಿಲ್ಲ
ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ವಿಧಿವಶರಾಗಿ ಇಂದಿಗೆ 2 ವರ್ಷವೇ ಕಳೆದು ಹೋಗಿದೆ. ಇಂದು ಅಂಬಿ ಪುಣ್ಯತಿಥಿಯಾಗಿದ್ದು, ಪತ್ನಿ ಸುಮಲತಾ, ಪುತ್ರ ಅಭಿಷೇಕ್, ದರ್ಶನ್ ಹಾಗೂ ಇತರ ಗಣ್ಯರು ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು.
Advertisement
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅಭಿಷೇಕ್, ಅರ್ಜುನ್ ಸರ್ಜಾ ಅವರು ಮನೆಗೆ ಬಂದಿದ್ದ ಸಮಯದಲ್ಲಿ ಸುಮಾರು 4 ಗಂಟೆಗಳ ಕಾಲ ಅಪ್ಪನ ಬಗ್ಗೆ ಚರ್ಚೆ ಮಾಡಿದ್ವಿ. ನಿನ್ನೆ ಕೂಡ ನಾನು ಹಾಗೂ ದರ್ಶನ್ ಅಣ್ಣ ಇಬ್ಬರೇ ಮನೆಯಲ್ಲಿ ಕುಳಿತುಕೊಂಡು ಹಳೆಯ ನೆನಪುಗಳನ್ನು ಹಂಚಿಕೊಳ್ತಿದ್ವಿ. ಹೀಗೆ ಅಪ್ಪ ತುಂಬಾ ನೆನಪಾಗ್ತಾರೆ ಎಂದರು.
Advertisement
Advertisement
ಅಪ್ಪ ನನಗೆ ಪ್ರತಿದಿನ ನೆನಪಾಗ್ತಾರೆ. ಅದರಲ್ಲೂ ಪುಣ್ಯತಿಥಿ ಹತ್ತಿರ ಆಗ್ತಿದ್ದಂತೆ ಅವರ ಬಗ್ಗೆಯೇ ಚರ್ಚೆ ಶುರುವಾಗುತ್ತೆ. ಇಂದು ಅವರ ಹೆಸರಲ್ಲಿ ಒಳ್ಳೊಳ್ಳೆಯ ಕಾರ್ಯಗಳು ನಡೆಯುತ್ತವೆ. ಅದರಲ್ಲಿ ನಾವು ಸುಖ- ಸಂತೋಷವನ್ನು ಹುಡುಕಬೇಕು ಎಂದು ತಿಳಿಸಿದರು. ಇದನ್ನೂ ಓದಿ: ಕನ್ನಡಿಗರ ಮನಸ್ಸಲ್ಲಿ ಅಪ್ಪಾಜಿ ಸದಾ ಜೀವಂತವಾಗಿರ್ತಾರೆ: ದರ್ಶನ್
Advertisement
ಅಪ್ಪನ ಸಾಧನೆಗಳ ಬಗ್ಗೆ ಮಾತನಾಡಲು ನಾನು ತುಂಬಾ ಚಿಕ್ಕವನು. ಅವರು ಮತ್ತು ಅವರ ಅಭಿಮಾನಿಗಳ ಬಗ್ಗೆ ಮಾತನಾಡಲು ನನಗೆ ಅಧಿಕಾರ ಇಲ್ಲ. ಅವರ ಮಧ್ಯದಲ್ಲಿ ಸಂಬಂಧ ಅಷ್ಟೊಂದು ಗಟ್ಟಿಯಾಗಿತ್ತು. ಇಂದಿಗೂ ಅದೇ ರೀತಿ ಇದೆ. ನಮಗೂ ಇಂದು ನಮಗೂ ಅಷ್ಟೇ ಪ್ರೀತಿ ತೋರಿಸುತ್ತಿದೆ. ಅವರ ಮಗನಾಗಿ ಹುಟ್ಟಲು ನಾನು ಪುಣ್ಯ ಮಾಡಿದ್ದೀನಿ ಎಂದು ಹೇಳಿದರು.
ಕಿಡ್ನಿ ಹಾಗೂ ಶ್ವಾಸಕೋಶ ಸಮಸ್ಯೆಯಿಂದ ಬಳಲುತ್ತಿದ್ದ ಅಂಬರೀಶ್ ಅವರು 2018ರ ನವೆಂಬರ್ 24ರಂದು ರಾತ್ರಿ ನಿಧನರಾಗಿದ್ದರು. ಅಂದೇ ಮಂಡ್ಯದಲ್ಲಿ ಬಸ್ ದುರಂತ ನಡೆದಿದ್ದು, ಘಟನೆ ನೋಡಿ ಸುಸ್ತಾಗಿದ್ದ ಅಂಬರೀಶ್ ಅವರ ಆರೋಗ್ಯದಲ್ಲಿ ಏರುಪೇರಾಗಿತ್ತು. ಹೀಗಾಗಿ ಹೆಚ್ಚಿನ ಚಿಕಿತ್ಸೆಗೆಂದು ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅಂಬರೀಶ್ ನಿಧನಕ್ಕೆ ರಾಜಕೀಯ, ಚಿತ್ರರಂಗ ಸೇರಿದಂತೆ ದೇಶಾದ್ಯಂತ ಕಂಬನಿ ಮಿಡಿದಿತ್ತು.