ಬೆಂಗಳೂರು: ಈ ಹಿಂದೆ ಯೋಗೇಶ್ವರ್ ವಿರುದ್ಧ ಕಿಡಿಕಾರಿದ್ದ ಹೊನ್ನಾಳಿ ಕ್ಷೇತ್ರದ ಶಾಸಕ ರೇಣುಕಾಚಾರ್ಯ ಈಗ ಸಾಫ್ಟ್ ಆಗಿದ್ದಾರೆ.
ಯೋಗೇಶ್ವರ್ ದೆಹಲಿಗೆ ಹೋಗಿರುವ ವಿಚಾರದ ಬಗ್ಗೆ ಕೇಳಲಾದ ಪ್ರಶ್ನೆಗೆ ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕ್ಷೇತ್ರದ ಕೆಲಸ, ವೈಯಕ್ತಿಕ ಕೆಲಸಕ್ಕಾಗಿ ಶಾಸಕರು ದೆಹಲಿಗೆ ಹೋದರೇ ತಪ್ಪೇನಿದೆ? ಶಾಸಕರು ಮಂತ್ರಿ ಸ್ಥಾನ ಕೇಳೋದ್ರಲ್ಲಿ ತಪ್ಪೇನಿದೆ? ಆದರೆ ಅಂತಿಮವಾಗಿ ಸಚಿವ ಸ್ಥಾನ ಕೊಡುವುದು ಸಿಎಂ ಹಾಗೂ ವರಿಷ್ಠರಿಗೆ ಬಿಟ್ಟ ವಿಚಾರ ಎಂದು ಉತ್ತರಿಸಿದ್ದಾರೆ.
Advertisement
Advertisement
ಈ ಹಿಂದೆ ಯೋಗೇಶ್ವರ್ ವಿರುದ್ಧ ರೇಣುಕಾಚಾರ್ಯ, ಸೋತವರು ಮಂತ್ರಿ ಸ್ಥಾನಕ್ಕಾಗಿ ದೆಹಲಿ ಅಲೆಯುತ್ತಿದ್ದಾರೆಂದು ಟೀಕೆ ಮಾಡಿದ್ದರು. ಆದರೆ ಈ ಬಾರಿ ದೆಹಲಿಗೆ ಹೋದರೆ ತಪ್ಪೇನಿದೆ ಎಂದು ಪ್ರಶ್ನಿಸುವ ಮೂಲಕ ಯೋಗೇಶ್ವರ್ ಅವರ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ : ನೀರಜ್ ಹೆಸರಿನವರಿಗೆ ಉಚಿತ ಪೆಟ್ರೋಲ್ ಕೊಟ್ಟ ಬಂಕ್ ಮಾಲೀಕ!
Advertisement
ನಾನು ಯಾವತ್ತೂ ಮಂತ್ರಿ ಸ್ಥಾನಕ್ಕೆ ಲಾಬಿ ಮಾಡಿಲ್ಲ. ನನಗೆ ಪಕ್ಷ ಸ್ಥಾನ ನೀಡಿದ್ದು ಮೂರು ಬಾರಿ ಶಾಸಕನಾಗಿದ್ದೇನೆ. ನಾನೊಬ್ಬ ಪಕ್ಷದ ಸಾಮಾನ್ಯ ಕಾರ್ಯಕರ್ತ. ದಾವಣಗೆರೆ ಜಿಲ್ಲೆ ಮಧ್ಯ ಕರ್ನಾಟಕ ಒಂದು ಭಾಗವಾಗಿರುವ ಕಾರಣ ಜಿಲ್ಲೆಗೆ ಒಂದು ಸಚಿವ ಸ್ಥಾನ ಕೊಟ್ಟರೆ ಶೈಕ್ಷಣಿಕವಾಗಿ ಜಿಲ್ಲೆ ಇನ್ನೂ ಅಭಿವೃದ್ಧಿಯಾಗಲಿದೆ. ಮುಂದೆ ಜಿಲ್ಲೆಗೆ ಮಂತ್ರಿ ಸ್ಥಾನ ಕೊಡುವುದು, ಬಿಡುವುದರ ಬಗ್ಗೆ ಸಿಎಂ ಹಾಗೂ ವರಿಷ್ಠರು ತೀರ್ಮಾನ ಮಾಡುತ್ತಾರೆ ಎಂದು ತಿಳಿಸಿದರು.
Advertisement
ದಾವಣಗೆರೆ ಹೊನ್ನಾಳಿ ಅವಳಿ ನಗರವಾಗಿದೆ. ಯಡಿಯೂರಪ್ಪ 2008-09ರಲ್ಲಿ ಹೊನ್ನಾಳಿಗೆ ಸಂಪರ್ಕ ಸೇತುವೆ ಕೊಟ್ಟಿದ್ದರು. ರಾಜ್ಯಧ್ಯಕ್ಷರು, ರಾಷ್ಟ್ರಧ್ಯಕ್ಷ ಜೆಪಿ ನಡ್ಡಾ, ಅರುಣ್ ಸಿಂಗ್, ಧರ್ಮೇಂದ್ರ ಪ್ರಧಾನ್ ಬಳಿ ಅವಕಾಶ ಕೊಡಿ ಅಂತಾ ಕೇಳಿದ್ದೆ. ವರಿಷ್ಠರ ಮೇಲೆ ನಮಗೆ ಯಾವುದೇ ನೋವಿಲ್ಲ. ಮೂರಿ ಬಾರಿ ಶಾಸಕನಾಗಿದ್ದೇನೆ. ನಿಗಮದ ಅಧ್ಯಕ್ಷನಾಗಿದ್ದೆ, ಸಚಿವನಾಗಿದ್ದೆ. ನಾನು ಈಗ ಸಚಿವ ಸ್ಥಾನಕ್ಕೆ ಲಾಬಿ ಮಾಡಿಲ್ಲ, ಮಾಡುವುದಿಲ್ಲ. ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.